ChatGPT Faces Outage: ಓಪನ್ಎಐನ ಚಾಟ್ಜಿಪಿಟಿ ಬಹುದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಂಡಂತಿದೆ. ಸದ್ಯ ಬಳಕೆದಾರರಿಗೆ ಚಾಟ್ಜಿಪಿಟಿ ಲಭ್ಯವಿಲ್ಲವಾಗಿದ್ದು, ಬಹುದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿದೆ. ಇದರಿಂದಾಗಿ ಸಾವಿರಾರೂ ಬಳಕೆದಾರರ ಮೇಲೆ ಪರಿಣಾಮ ಬೀರಿದೆ.
ಸಮಸ್ಯೆ ಉಲ್ಬಣಗೊಂಡಿರುವುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗ ಕಾರ್ಯವನ್ನು ಮರುಸ್ಥಾಪಿಸಲು ಯತ್ನಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಭಾರತೀಯ ಕಾಲಮಾನ ಪ್ರಕಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಸುಮಾರು 20 ಸಾವಿರ ಬಳಕೆದಾರರು ಮೇಲೆ ಚಾಟ್ಜಿಪಿಟಿ ಸಮಸ್ಯೆಯಾಗಿ ಪರಿಣಾಮ ಬೀರಿದೆ ಎಂದು ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಹೇಳಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಹ್ಯಾಕರ್ಗಳ ಕಾಟವೇ? ನಿಮ್ಮ ಮೊಬೈಲ್ ಫೋನ್ ಸುಮ್ನೆ ಸ್ವಿಚ್ ಮಾಡಿ ಅಂತಾರೆ ತಜ್ಞರು