ನವದೆಹಲಿ: ಜೆನ್ ಎಐ ಆಧಾರಿತ ಉಪಕರಣಗಳು 2028ರ ವೇಳೆಗೆ ಶೇ 70ರಷ್ಟು ಸಾಫ್ಟ್ವೇರ್ಗಳನ್ನು ಪರೀಕ್ಷೆಗೊಳಪಡಿಸುವ (ಟೆಸ್ಟಿಂಗ್) ಸಾಮರ್ಥ್ಯ ಹೊಂದಿದ್ದು, ಹಸ್ತಚಾಲಿತ ಪರೀಕ್ಷೆಯ ಅಗತ್ಯವನ್ನು ಕಡಿಮೆ ಮಾಡಲಿವೆ. ಇದರ ಪರಿಣಾಮವಾಗಿ ಪರೀಕ್ಷಾ ವ್ಯಾಪ್ತಿ, ಸಾಫ್ಟ್ವೇರ್ ಬಳಕೆ ಮತ್ತು ಕೋಡ್ ಗುಣಮಟ್ಟದಲ್ಲಿ ಸುಧಾರಣೆಯಾಗಲಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.
ಐಡಿಸಿ ವರದಿಯ ಪ್ರಕಾರ, ಜಪಾನ್ (ಎಪಿಇಜೆ) ಪ್ರದೇಶವನ್ನು ಹೊರತುಪಡಿಸಿ ಏಷ್ಯಾ ಪೆಸಿಫಿಕ್ ವಲಯದಲ್ಲಿ ಶೇ 48ರಷ್ಟು ಉದ್ಯಮಗಳು ತಮ್ಮ ಕೋಡಿಂಗ್ ವಿಮರ್ಶೆ ಮಾಡುವುದು ಮತ್ತು ಟೆಸ್ಟಿಂಗ್ ವಿಷಯದಲ್ಲಿ ಎಐ ತನ್ನ ಡೆವಲಪರ್ಗಳಿಗೆ ಸಹಕಾರಿಯಾಗಲಿದೆ ಎಂದು ಪರಿಗಣಿಸುತ್ತವೆ.
ಟೆಸ್ಟಿಂಗ್ಗಳಿಗೆ ಆದ್ಯತೆ ನೀಡುವುದು, ವಿಫಲ ಟೆಸ್ಟಿಂಗ್ಗಳಿಗೆ ಮೂಲ ಕಾರಣವನ್ನು ಕಂಡುಹಿಡಿಯುವುದು, ಟೆಸ್ಟಿಂಗ್ ಮಾದರಿಗಳನ್ನು ರಚಿಸುವುದು ಮತ್ತು ಸ್ವಯಂ- ಸರಿ ಪಡಿಸುವುದು ಮತ್ತು ಟೆಸ್ಟಿಂಗ್ ಕಾರ್ಯವಿಧಾನ ಈ ಕಾರಣಗಳಿಗಾಗಿ ಸಾಫ್ಟ್ವೇರ್ ಟೆಸ್ಟಿಂಗ್ಗಾಗಿ ಎಐ / ಎಂಎಲ್ ಅನ್ನು ಬಳಸಲಾಗುವುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಟೆಸ್ಟಿಂಗ್ ಯಾಂತ್ರೀಕೃತಗೊಳಿಸುವಿಕೆಯು ಜೆನ್ ಎಐ ಟೆಸ್ಟಿಂಗ್ ಸ್ಕ್ರಿಪ್ಟ್ಗಳನ್ನು ರಚಿಸುವುದು ಮತ್ತು ನಿರ್ವಹಿಸಲು ಎಐ ಕ್ರಮಾವಳಿಗಳ ಬಳಕೆಯನ್ನು ಒಳಗೊಂಡಿದೆ. ಇದು ಹೆಚ್ಚು ಪರಿಣಾಮಕಾರಿ ಮತ್ತು ಹೊಂದಿಕೊಳ್ಳಬಹುದಾದ ಟೆಸ್ಟಿಂಗ್ ಕಾರ್ಯ ವಿಧಾನಗಳಿಗೆ ಅನುವು ಮಾಡಿಕೊಡುತ್ತದೆ.
"ಕೋಡ್ ಜನರೇಷನ್, ಯೂಸರ್ ಇಂಟರ್ಫೇಸ್, ಟೆಸ್ಟಿಂಗ್ ಮತ್ತು ಇತರ ಬಳಕೆಯ ಪ್ರಕರಣಗಳನ್ನು ಒಳಗೊಂಡಂತೆ ಉತ್ಪಾದನಾ ಎಐ ನೆರವಿನ ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಏಷ್ಯಾ-ಪೆಸಿಫಿಕ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಸಾಫ್ಟ್ವೇರ್ ಟೆಸ್ಟಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಚೀನಾ, ಭಾರತ ಮತ್ತು ಜಪಾನ್ ಗಮನಾರ್ಹವಾಗಿ ಹೂಡಿಕೆ ಮಾಡುತ್ತಿವೆ" ಎಂದು ಐಡಿಸಿ ಏಷ್ಯಾ / ಪೆಸಿಫಿಕ್ನ ಡಿಜಿಟಲ್ ನಾವೀನ್ಯತೆಗಳು, ಎಕ್ಸ್ಒಪಿಎಸ್ ಮತ್ತು ಡೆವಲಪರ್ ಸ್ಟ್ರಾಟಜಿಗಳ ಹಿರಿಯ ಸಂಶೋಧನಾ ವ್ಯವಸ್ಥಾಪಕ ಧೀರಜ್ ಬದ್ಗುಜರ್ ಹೇಳಿದರು.
ಸಾಫ್ಟ್ವೇರ್ ಡೆವಲಪ್ಮೆಂಟ್ನ ಎಲ್ಲ ಹಂತಗಳಲ್ಲಿ ಎಐ ಯಾಂತ್ರೀಕೃತಗೊಳಿಸುವಿಕೆಯನ್ನು ಹೆಚ್ಚಿಸುತ್ತದೆ. ಡೆವಲಪರ್ಗಳು ಮತ್ತು ಡೆವ್ಆಪ್ಸ್ ತಜ್ಞರು ಈ ಹೊಸ ಮಾದರಿಯ ಮುಂಚೂಣಿಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ. 2026 ರ ವೇಳೆಗೆ ಶೇಕಡಾ 50 ಕ್ಕಿಂತ ಹೆಚ್ಚು ಗ್ರಾಹಕರು ತಾವು ಬಯಸುವ ಬಹುತೇಕ ಉತ್ಪನ್ನಗಳು ಮತ್ತು ಸೇವೆಗಳನ್ನು ಹುಡುಕಲು, ಮೌಲ್ಯಮಾಪನ ಮಾಡಲು ಮತ್ತು ಖರೀದಿಸಲು ಮೊಬೈಲ್ ಸಾಧನಗಳ ಮೂಲಕ ಎಐ ಅನ್ನು ಬಳಸುತ್ತಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಸ್ಯಾಮ್ಸಂಗ್ ಹಿಂದಿಕ್ಕಿ ವಿಶ್ವದ ನಂ.1 ಸ್ಮಾರ್ಟ್ಫೋನ್ ಕಂಪನಿಯಾದ ಆ್ಯಪಲ್