ನವದೆಹಲಿ: ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಮತ್ತೊಂದು ಎಲೆಕ್ಟ್ರಿಕ್ ಕಾರು ಬಿಎಂಡಬ್ಲ್ಯು ಐ5 ಎಂ60 ಎಕ್ಸ್ ಡ್ರೈವ್ (BMW i5 M60 xDrive) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ಬೆಲೆ 1,19,50,000 ರೂಪಾಯಿಗಳಾಗಿದೆ.
ಹೊಸ ಕಾರು ನಾನ್ ಮೆಟಾಲಿಕ್ ಆಲ್ಪೈನ್ ವೈಟ್ ಬಣ್ಣದಲ್ಲಿ ಮತ್ತು ಮೆಟಾಲಿಕ್ ರೂಪದಲ್ಲಿ ಎಂ ಬ್ರೂಕ್ಲಿನ್ ಗ್ರೇ, ಎಂ ಕಾರ್ಬನ್ ಬ್ಲ್ಯಾಕ್, ಕೇಪ್ ಯಾರ್ಕ್ ಗ್ರೀನ್, ಫೈಟೊನಿಕ್ ಬ್ಲೂ, ಬ್ಲ್ಯಾಕ್ ಸಫೈರ್, ಸೋಫಿಸ್ಟೊ ಗ್ರೇ, ಆಕ್ಸೈಡ್ ಗ್ರೇ ಮತ್ತು ಮಿನರಲ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಇದು ಈಗ ಕಂಪ್ಲೀಟ್ ಬಿಲ್ಟ್-ಅಪ್ ಯುನಿಟ್ (ಸಿಬಿಯು) ಮಾದರಿಯಲ್ಲಿ ದೇಶಾದ್ಯಂತದ ಎಲ್ಲಾ ಬಿಎಂಡಬ್ಲ್ಯು ಡೀಲರ್ ಶಿಪ್ ಗಳಲ್ಲಿ ಖರೀದಿಗೆ ಲಭ್ಯವಿದೆ.
ಈ ಕಾರು ಅನಿಯಮಿತ ಕಿಲೋಮೀಟರ್ಗಳ ಸ್ಟ್ಯಾಂಡರ್ಡ್ ಎರಡು ವರ್ಷಗಳ ವಾರಂಟಿಯನ್ನು ಹೊಂದಿರುತ್ತದೆ. ರಿಪೇರಿ ಇನ್ಕ್ಲೂಸಿವ್ (Repair Inclusive) ಯಾವುದೇ ಮೈಲೇಜ್ ಮಿತಿಯಿಲ್ಲದೆ ಖರೀದಿಯ ಮೂರನೇ ವರ್ಷದಿಂದ ಗರಿಷ್ಠ ಐದನೇ ವರ್ಷದವರೆಗೆ ವಾರಂಟಿ ಪ್ರಯೋಜನಗಳನ್ನು ವಿಸ್ತರಿಸಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.
ಬಿಎಂಡಬ್ಲ್ಯು ಐ5 ಎಂ60 ಎಕ್ಸ್ ಡ್ರೈವ್ ನಲ್ಲಿರುವ ಹೈ ವೋಲ್ಟೇಜ್ ಬ್ಯಾಟರಿಯು ಎಂಟು ವರ್ಷ ಅಥವಾ 1,60,000 ಕಿಲೋಮೀಟರ್ವರೆಗೆ ಮಾನ್ಯವಾಗಿರುವ ವಾರಂಟಿಯನ್ನು ಹೊಂದಿರುತ್ತದೆ.
ಇನ್ನು ಕಾರಿನ ಸುರಕ್ಷತಾ ಸಾಧನಗಳನ್ನು ನೋಡುವುದಾದರೆ, ಕಾರಿನಲ್ಲಿ ಆರು ಏರ್ ಬ್ಯಾಗ್ಗಳು, ಅಟೆಂಟಿವ್ನೆಸ್ ಅಸಿಸ್ಟೆನ್ಸ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್ ಸಿ), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ), ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್ ಮತ್ತು ಇನ್ನಿತರ ವೈಶಿಷ್ಟ್ಯಗಳು ಇದರಲ್ಲಿವೆ.
3.8 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ: ಈ ಕಾರು 3.8 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀ ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ. ಬಿಎಂಡಬ್ಲ್ಯು ಐ5 ಎಂ60 ಎಕ್ಸ್ ಡ್ರೈವ್ ಬೈಕಿನಲ್ಲಿ ಕಾಂಪ್ಲಿಮೆಂಟರಿ ಬಿಎಂಡಬ್ಲ್ಯು ವಾಲ್ ಬಾಕ್ಸ್ ಚಾರ್ಜರ್ ಅಳವಡಿಸಲಾಗಿದೆ. 11 ಕಿಲೋವ್ಯಾಟ್ (ಕಿಲೋವ್ಯಾಟ್) ವರೆಗೆ ಇದನ್ನು ಮನೆಯಲ್ಲಿಯೇ ಸುರಕ್ಷಿತವಾಗಿ ಚಾರ್ಜಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.
ಬಿಎಂಡಬ್ಲ್ಯು ಇದು ಜರ್ಮನಿ ಮೂಲದ ವಾಹನ ತಯಾರಕ ಕಂಪನಿಯಾಗಿದ್ದು, ಗುಣಮಟ್ಟದ ಸ್ಪೋರ್ಟ್ಸ್ ಸೆಡಾನ್ ಗಳು ಮತ್ತು ಮೋಟಾರ್ ಸೈಕಲ್ಗಳಿಗೆ ಹೆಸರುವಾಸಿಯಾಗಿದೆ ಮತ್ತು ವಿಶ್ವದ ಪ್ರಮುಖ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಇದರ ಪ್ರಧಾನ ಕಚೇರಿ ಮ್ಯೂನಿಚ್ನಲ್ಲಿದೆ.
ಇದನ್ನೂ ಓದಿ : 324 ಕೋಟಿ ತಲುಪಿದ ಮೆಟಾ ಆ್ಯಪ್ ಬಳಕೆದಾರರ ಸಂಖ್ಯೆ: ರೀಲ್ಸ್ಗೆ ಅತ್ಯಧಿಕ ವೀಕ್ಷಕರು - META APPS