ETV Bharat / technology

ಬ್ಲ್ಯಾಕ್​​-ಬೋಲ್ಡ್ ಲುಕ್​; ಹಲವಾರು ಬದಲಾವಣೆ, ವೈಶಿಷ್ಟ್ಯಗಳೊಂದಿಗೆ ನೈಟ್​ ಕ್ರೆಟಾ ರಿಲೀಸ್! - Hyundai Creta Knight - HYUNDAI CRETA KNIGHT

ಹಬ್ಬದ ಸೀಸನ್​ ಹಿನ್ನೆಲೆ ಬಹುತೇಕ ಕಂಪನಿಗಳು ತಮ್ಮ ಹೊಸ-ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಸದ್ಯ ಬ್ಲ್ಯಾಕ್​ ಪ್ರಿಯರಿಗಾಗಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ನೈಟ್​ ಕ್ರೆಟಾ, ಬ್ಲ್ಯಾಕ್​​-ಬೋಲ್ಡ್ ಲುಕ್​ ಸಖತ್​ ಆಗಿದೆ. ಇದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಹೀಗಿದೆ..

HYUNDAI CRETA LAUNCHED  HYUNDAI CRETA KNIGHT PRICE  HYUNDAI CRETA KNIGHT FEATURES  HYUNDAI CRETA KNIGHT COLORS
ನೈಟ್​ ಕ್ರೆಟಾ (https://www.hyundai.com/in/en/find-a-car/creta/highlights)
author img

By ETV Bharat Tech Team

Published : Sep 5, 2024, 5:27 PM IST

Hyundai Creta Knight: ಸೆಪ್ಟಂಬರ್​ 4ರಂದು ಹುಂಡೈ ಮೋಟಾರ್ ಇಂಡಿಯಾ ಅಧಿಕೃತವಾಗಿ ಕ್ರೆಟಾ ನೈಟ್ ಆವೃತ್ತಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡಿದೆ. ಆಕರ್ಷಕ ಕಪ್ಪು ಬಣ್ಣದ ಸ್ಕೀಮ್​ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ಈ SUV ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ. ಹ್ಯುಂಡೈ ಕ್ರೆಟಾ ನೈಟ್ ಆವೃತ್ತಿಯ ಆರಂಭಿಕ ಬೆಲೆಯನ್ನು 14.51 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಆದರೆ ಅದರ ಟಾಪ್-ಸ್ಪೆಕ್ ರೂಪಾಂತರವು 20.15 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.

HYUNDAI CRETA LAUNCHED  HYUNDAI CRETA KNIGHT PRICE  HYUNDAI CRETA KNIGHT FEATURES  HYUNDAI CRETA KNIGHT COLORS
ನೈಟ್​ ಕ್ರೆಟಾ (https://www.hyundai.com/in/en/find-a-car/creta/highlights)

Creta Knight ವಿಶೇಷತೆಗಳೇನು? : ನೈಟ್​ ಆವೃತ್ತಿಯು ಮೂಲತಃ ಕ್ರೆಟಾದ ಸಂಪೂರ್ಣ ಬ್ಲ್ಯಾಕ್​ ಆವೃತ್ತಿಯಾಗಿದೆ. ಕಂಪನಿಯು 21 ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊರಭಾಗದಿಂದ ಒಳಭಾಗಕ್ಕೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಸಾಮಾನ್ಯ ಕ್ರೆಟಾದಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಈ SUV ಎರಡು ರೂಪಾಂತರಗಳಲ್ಲಿ S(O) ಮತ್ತು SX(O) ಮಾತ್ರ ಲಭ್ಯವಿರುತ್ತದೆ. ಅದರಲ್ಲೂ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಔಟ್​ ಲುಕ್​ ಹೇಗಿದೆ: ಹೊಸ ಹ್ಯುಂಡೈ ಕ್ರೆಟಾ ನೈಟ್ ಆವೃತ್ತಿಯ ಹೊರಭಾಗದ ಬಗ್ಗೆ ಮಾತನಾಡುವುದಾದ್ರೆ, ಅದರ ಬಾಹ್ಯ ವಿನ್ಯಾಸದಲ್ಲಿ ಮಾಡಲಾದ ಬದಲಾವಣೆಗಳು ಮುಂಭಾಗ ಮತ್ತು ಹಿಂಭಾಗದಲ್ಲಿ ಮ್ಯಾಟ್ ಬ್ಲ್ಯಾಕ್ ಹ್ಯುಂಡೈ ಲೋಗೋ, ಕೆಂಪು ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ 17-ಇಂಚಿನ ಅಲಾಯ್​ ವ್ಹೀಲ್​ ಮತ್ತು ನೈಟ್​ ಸಿಂಬಲ್ ಒಳಗೊಂಡಿವೆ. ಇದು ಗ್ರಿಲ್, ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್‌ಗಳು, ಸೈಡ್ ಸಿಲ್ಸ್, ರೂಫ್ ರೈಲ್ಸ್, ಸಿ-ಪಿಲ್ಲರ್ ಗಾರ್ನಿಶ್, ಔಟ್‌ಸೈಡ್ ರಿಯರ್ ವ್ಯೂ ಮಿರರ್‌ಗಳು (ORVM ಗಳು) ಮತ್ತು ಸ್ಪಾಯ್ಲರ್‌ನಲ್ಲಿ ಹಲವಾರು ಬ್ಲ್ಯಾಕ್​-ಔಟ್​ ಅಂಶಗಳನ್ನು ಒಳಗೊಂಡಿದೆ.

ಉತ್ತಮ ಕ್ಯಾಬಿನ್: ಕ್ರೆಟಾ ನೈಟ್ ಆವೃತ್ತಿಯ ಕ್ಯಾಬಿನ್ ಉತ್ತಮವಾಗಿದೆ. ಕಂಪನಿಯು ಇದನ್ನು ಸಾಮಾನ್ಯ ಮಾದರಿಗಿಂತ ಹೆಚ್ಚು ಸುಧಾರಿತ ಮತ್ತು ಪ್ರೀಮಿಯಂ ಮಾಡಿದೆ. ಇದರ ಒಳಭಾಗವು ಎಲ್ಲಾ ಕಪ್ಪು ಬಣ್ಣದಲ್ಲಿ ಅಲಂಕರಿಸಲ್ಪಟ್ಟಿದೆ. ಒಳಭಾಗದಲ್ಲಿ ಹಿತ್ತಾಳೆ ಬಣ್ಣದ ​ಹಲವು ಅಂಶಗಳು ಸಹ ಕಂಡುಬರುತ್ತವೆ. ಇದು ಪ್ರೀಮಿಯಂ ಆಕರ್ಷಣೆಯನ್ನು ನೀಡುತ್ತದೆ ಮತ್ತು ಅದನ್ನು ಸ್ಪೋರ್ಟಿಯನ್ನಾಗಿ ಮಾಡುತ್ತದೆ. ಇದರ ಹೊರತಾಗಿ, ಮೆಟಲ್​ ಬ್ರೇಕ್​ ಆ್ಯಂಡ್​ ಕ್ಲಚ್​ ಪೆಡಲ್ಸ್​, ಲೆದರ್ ರೈಪ್ಡ್​ ಸ್ಟೀರಿಂಗ್ ವ್ಹೀಲ್ ಮತ್ತು ಹಿತ್ತಾಳೆ ಬಣ್ಣದ ಹೊಲಿಗೆಯೊಂದಿಗೆ ಗೇರ್ ನಾಬ್ ಮತ್ತು ಹಿತ್ತಾಳೆ ಬಣ್ಣದ ಪೈಪಿಂಗ್ ಮತ್ತು ಹೊಲಿಗೆಯೊಂದಿಗೆ ಕಪ್ಪು ಲೆಥೆರೆಟ್ ಸೀಟ್ ಅಪ್ಹೋಲ್‌ಸ್ಟರಿ ಇದನ್ನು ಹೆಚ್ಚು ಸುಂದರಗೊಳಿಸುತ್ತದೆ.

ಹುಂಡೈ ಕ್ರೆಟಾ ನೈಟ್ ರೂಪಾಂತರಗಳು ಮತ್ತು ಬೆಲೆ:

ಗಮನಿಸಿ: ಇಲ್ಲಿ 'MT' ಎಂದರೆ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 'AT' ಎಂದರೆ ಆಟೋಮೆಟಿಕ್​ ಟ್ರಾನ್ಸ್‌ಮಿಷನ್..

ಇಂಜಿನ್​ವೆರಿಯಂಟ್​ಬೆಲೆ ರೂ.ಗಳಲ್ಲಿ
1.5l U2 CRDi DieselS(O) MT16,08,100
S(O) AT17,58,100
SX (O) MT18,99,600
SX (O) AT 20,14,800
1.5l MPi PetrolS(O) MT14,50,800
S(O) IVT 16,00,800
SX (O) MT17,42,200
SX (O) IVT18,88,200

ಪವರ್​ ಮತ್ತು ಪರ್ಫಾರ್ಮನ್ಸ್: ಹೊಸ ಹುಂಡೈ ಕ್ರೆಟಾ ನೈಟ್ ಆವೃತ್ತಿಯ ಎಂಜಿನ್ ಕಾರ್ಯವಿಧಾನದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ (NA) ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನುವಲ್, IVT ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್​ ಆಟೋಮೆಟಿಕ್​ ಗೇರ್‌ಬಾಕ್ಸ್ ಸೇರಿವೆ. ವಿಶೇಷವೆಂದರೆ ಈ ಕಾರನ್ನು ಟೈಟಾನ್ ಗ್ರೇ ಮ್ಯಾಟ್ ಮತ್ತು ಡ್ಯುಯಲ್ ಟೋನ್ ಬಣ್ಣದಲ್ಲಿ ಕ್ರಮವಾಗಿ ರೂ.5,000 ಮತ್ತು ರೂ.15,000 ಹೆಚ್ಚು ಪಾವತಿಸಿ ಖರೀದಿಸಬಹುದಾಗಿದೆ.

ಓದಿ: ಜಿಯೋ 8ನೇ ವಾರ್ಷಿಕೋತ್ಸವ: 10 OTT ಪ್ಲಾಟ್‌ಫಾರ್ಮ್‌, Zomato ಸದಸ್ಯತ್ವ ಸೇರಿದಂತೆ ಗ್ರಾಹಕರಿಗೆ ಭರ್ಜರಿ ಉಡುಗೊರೆ! - Special Plans for JIO Users

ETV Bharat Logo

Copyright © 2024 Ushodaya Enterprises Pvt. Ltd., All Rights Reserved.