ETV Bharat / technology

ಕೈಗೆಟುಕುವ ದರ, ಸೂಪರ್​ ಫೀಚರ್​: ಈ CNG ಕಾರುಗಳ ಮೇಲೆ ಒಂದು ಲುಕ್! - BEST AFFORDABLE CNG CARS

Best Affordable CNG Cars: ನೀವು ಕೈಗೆಟುಕುವ ಬೆಲೆಯ ಕಾರುಗಳ ಬಗ್ಗೆ ಹುಡುಕುತ್ತಿದ್ದೀರಾ.. ಹಾಗಾದರೆ ನಾವು ಇಲ್ಲಿ ನಿಮಗಾಗಿ ಕೆಲವು ಅತ್ಯುತ್ತಮ ಸಿಎನ್​ಜಿ ಕಾರುಗಳ ಬಗ್ಗೆ ಮಾಹಿತಿ ನೀಡಿದ್ದೇವೆ.

MARUTI SUZUKI ALTO K10 CNG  MARUTI SUZUKI CELERIO CNG  TATA TIAGO ICNG  LOW RATES CAR LIST
ಈ ಸಿಎನ್​ಜಿ ಕಾರುಗಳ ಮೇಲೆ ಒಂದು ಲುಕ್ ಹಾಕಿ! (Maruti)
author img

By ETV Bharat Tech Team

Published : 8 hours ago

Best Affordable CNG Cars: ನೀವು ಮನೆ, ಕಚೇರಿ ಅಥವಾ ಇತರ ಉದ್ದೇಶಗಳಿಗಾಗಿ ಕೈಗೆಟುಕುವ ಅತ್ಯುತ್ತಮ ಸಿಎನ್​ಜಿ ಕಾರನ್ನು ಹುಡುಕುತ್ತಿದ್ದರೆ ಇಲ್ಲಿ ಕೆಲ ಮಾಹಿತಿಗಳು ನೀಡಲಾಗಿದೆ. ಭಾರತದಲ್ಲಿ ಸಿಎನ್‌ಜಿ ಕಾರುಗಳ ಮಾರಾಟ ನಿರಂತರವಾಗಿ ಹೆಚ್ಚುತ್ತಿದೆ. ನಿತ್ಯ ಮನೆಯಿಂದ ಕಚೇರಿಗೆ ಸೇರಿದಂತೆ ಇತರ ಸ್ಥಳಗಳಿಗೆ ಹೋಗುವ ಜನರು ಕೈಗೆಟುಕುವ ದರದಲ್ಲಿ ಕಾರುಗಳ ಖರೀದಿಗೆ ಯೋಜಿಸುತ್ತಿರುತ್ತಾರೆ. ಅವರಿಗೆ ಸಿಎನ್​ಜಿ ಕಾರುಗಳು ಬೆಸ್ಟ್​ ಆಪ್ಷನ್​ ಎಂದು ಹೇಳಬಹುದು. ಸಿಎನ್‌ಜಿ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಚಲಿಸುವ ಕಾರುಗಳಿಗಿಂತ ಅಗ್ಗವಾಗಿವೆ. ಇಲ್ಲಿ ನಾವು ನಿಮಗೆ ಕೆಲವು ಅತ್ಯುತ್ತಮ ಸಿಎನ್​ಜಿ ಕಾರುಗಳ ಬಗ್ಗೆ ಹೇಳಲಿದ್ದೇವೆ. ಇದರ ಬೆಲೆ ವೈಶಿಷ್ಟ್ಯಗಳು ಹೀಗಿವೆ.

Maruti Suzuki Alto K10 CNG: ಮಾರುತಿ ಸುಜುಕಿ ಆಲ್ಟೊ ಕೆ10 ಸಿಎನ್‌ಜಿ ಕಾರು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಆಲ್ಟೊ K10 ಪ್ರಸ್ತುತ ಭಾರತದಲ್ಲಿ ಅಗ್ಗದ ಸಿಎನ್​ಜಿ ಕಾರು. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 5 ಲಕ್ಷ 96 ಸಾವಿರ ರೂ. ಈ ಕಾರು ಭಾರಿ ಟ್ರಾಫಿಕ್​ನಲ್ಲಿಯೂ ಸರಳವಾಗಿ ನುಗ್ಗುತ್ತಾ ಸಾಗುತ್ತದೆ. ಚಿಕ್ಕ ಕುಟುಂಬಕ್ಕೆ ಸೂಕ್ತವಾಗಿದೆ, ಈ ಕಾರಿನಲ್ಲಿ ನಾಲ್ವರು ಆರಾಮವಾಗಿ ಪ್ರಯಾಣಿಸಬಹುದು.

ಮಾರುತಿ ಸುಜುಕಿ ಆಲ್ಟೊ ಎಸಿ, ಫ್ರಂಟ್ ಪವರ್ ವಿಂಡೋ, ಪಾರ್ಕಿಂಗ್ ಸೆನ್ಸಾರ್, ಸೆಂಟ್ರಲ್ ಕನ್ಸೋಲ್ ಆರ್ಮ್ ರೆಸ್ಟ್, ಗೇರ್ ಶಿಫ್ಟ್ ಇಂಡಿಕೇಟರ್, ಅಡ್ಜೆಸ್ಟ್ ಮಾಡಬಹುದಾದ ಹೆಡ್‌ಲ್ಯಾಂಪ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್‌ಗಳು, ಡ್ಯುಯಲ್ ಏರ್‌ಬ್ಯಾಗ್‌ಗಳಂತಹ ಹಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.

Maruti Suzuki Celerio CNG: ನಿಮಗಾಗಿ ಎರಡನೇ ಅತ್ಯುತ್ತಮ ಆಯ್ಕೆ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ಕಾರು ಎಂದು ಹೇಳಬಹುದು. ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ಕಾರುಗಳಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರು, ಇದು 34.43 ಕಿಮೀ/ಕೆಜಿ ಮೈಲೇಜ್ ನೀಡುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆ 6.69 ಲಕ್ಷ ರೂಪಾಯಿ.

ಈ ಕಾರನ್ನು ಚಲಾಯಿಸುವ ವೆಚ್ಚವು ಮೋಟಾರ್ ಸೈಕಲ್ ಚಾಲನೆಯ ವೆಚ್ಚಕ್ಕಿಂತ ಕಡಿಮೆಯಾಗಿದೆ. ಆದ್ದರಿಂದ ತಮ್ಮ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಈ ಕಾರಿನಲ್ಲಿ 5 ಜನರು ಸುಲಭವಾಗಿ ಕುಳಿತುಕೊಳ್ಳಬಹುದು. ಸುರಕ್ಷತೆಗಾಗಿ, ಈ ಕಾರಿನಲ್ಲಿ ನೀವು ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್ ಜೊತೆಗೆ EBD ಮತ್ತು ಏರ್‌ಬ್ಯಾಗ್‌ಗಳ ಸೌಲಭ್ಯ ಪಡೆಯುತ್ತೀರಿ.

Tata Tiago iCNG: ಟಾಟಾ ಟಿಯಾಗೋ ಐಸಿಎನ್​ಜಿ ಕಾರು ಸಹ ಅತ್ಯುತ್ತಮ ಆಗಿದೆ. ಇದು 27 km/kg ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ ನೀವು 5 ಜನರಿಗೆ ಪ್ರಯಾಣ ಬೆಳೆಸಬಹುದು. ಕಾರಿನ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಕಾರು 1.2 ಲೀಟರ್ ಎಂಜಿನ್ ಹೊಂದಿದ್ದು, ಸಿಎನ್‌ಜಿ ಮೋಡ್‌ನಲ್ಲಿ 73 ಎಚ್‌ಪಿ ಮತ್ತು 95 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‌ನಲ್ಲಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್ ಅನ್ನು ಬಳಸಲಾಗಿದೆ.

ಓದಿ: ನ್ಯೂ- ಇಯರ್​ ​ಆಫರ್​ ಘೋಷಿಸಿದ ಜಿಯೋ - ಇದು ಕೇವಲ 200 ದಿನಗಳಿಗೆ ಮಾತ್ರವೇ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.