ETV Bharat / technology

125cc ಬೈಕ್​ಗಳಿಗೆ ಠಕ್ಕರ್!​ ಮಾರುಕಟ್ಟೆಗೆ ಬರ್ತಿದೆ ಬಜಾಜ್​ ಪಲ್ಸರ್​ ಎನ್​125

Bajaj Pulsar N125: ಬಜಾಜ್ ಆಟೋ ಹೊಸ ಬಜಾಜ್ ಪಲ್ಸರ್ N125 ಅನ್ನು ಬಹಿರಂಗಪಡಿಸುವ ಮೂಲಕ ತನ್ನ ಪಲ್ಸರ್ ಶ್ರೇಣಿಯನ್ನು ವಿಸ್ತರಿಸಿದೆ. ಇದರ ವೈಶಿಷ್ಟ್ಯಗಳು ಮತ್ತು ಬೆಲೆಗಳ ಬಗ್ಗೆ ತಿಳಿಯೋಣ.

author img

By ETV Bharat Tech Team

Published : 2 hours ago

BAJAJ PULSAR N125 FEATURES  BAJAJ PULSAR N125 SPECIFICATIONS  BAJAJ PULSAR N125
ಬಜಾಜ್​ ಪಲ್ಸರ್​ ಎನ್​125 (Instagram/mypulsarofficial)

Bajaj Pulsar N125: ಸ್ಥಳೀಯ ದ್ವಿಚಕ್ರ ವಾಹನ ತಯಾರಕ ಬಜಾಜ್ ಆಟೋ ಉತ್ಪನ್ನಗಳಲ್ಲಿ ಪಲ್ಸರ್ ಮಾದರಿಗಳ ಕ್ರೇಜ್ ವಿಭಿನ್ನ ಮಟ್ಟದಲ್ಲಿದೆ. ಅದರಂತೆ, ಕಂಪನಿ ಸಹ ಕಾಲಕಾಲಕ್ಕೆ ಹಳೆಯ ಮಾದರಿಗಳನ್ನು ನವೀಕರಿಸುತ್ತಲೇ ಇರುತ್ತದೆ. ಈ ಕ್ರಮದಲ್ಲಿ ಮತ್ತೊಂದು ಹೊಸ ಪಲ್ಸರ್ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಕಂಪನಿಯು ಈ ಬೈಕ್ ಅನ್ನು ತರುವುದಾಗಿ ಹೇಳಿದ್ದರೂ, ಅದರ ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಹೊಸ ಬಜಾಜ್ ಪಲ್ಸರ್ N125 ವಿಶಿಷ್ಟವಾದ ಆಕ್ರಮಣಕಾರಿ ಪಲ್ಸರ್ ಶೈಲಿಯನ್ನು ಹೊಂದಿದೆ. ಇದು ಹೊಸ ಎಲ್ಇಡಿ ಹೆಡ್ಲೈಟ್ ಯುನಿಟ್​ ಮತ್ತು ಮುಂಭಾಗದಲ್ಲಿ ಸಾಕಷ್ಟು ಪ್ಲಾಸ್ಟಿಕ್ ಕ್ಲಾಡಿಂಗ್ ಪಡೆಯುತ್ತದೆ. ಮೋಟಾರ್‌ಸೈಕಲ್‌ನಲ್ಲಿ, ಫೋರ್ಕ್ ಕವರ್ ಮತ್ತು ಹೆಡ್‌ಲೈಟ್‌ನ ಸುತ್ತಲಿನ ಫಲಕವನ್ನು ಪ್ಲಾಸ್ಟಿಕ್‌ನಿಂದ ಕವರ್​ ಮಾಡಲಾಗಿದೆ. ಹೆಡ್‌ಲೈಟ್‌ನ ಸುತ್ತ ಇರುವ ಪ್ಲಾಸ್ಟಿಕ್ ಪ್ಯಾನೆಲ್ ನಿಮಗೆ ಬೇಕಾದ ಶೇಡ್‌ಗೆ ಅನುಗುಣವಾಗಿ ಹಲವಾರು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ ಎಂಬುದು ಇದರ ವಿಶೇಷತೆ.

ಹೊಸ ಬಜಾಜ್ ಪಲ್ಸರ್ ಎನ್125 ವ್ಹೀಲ್​ಗಳು ಪಲ್ಸರ್ ಎನ್​150 ಬೈಕ್​ಗೆ​ ಹೋಲುತ್ತವೆ. ಇದರ ಡಿಸ್‌ಪ್ಲೇ ಮತ್ತು ಇಂಡಿಕೇಟರ್‌ಗಳು ಬಜಾಜ್‌ನ ಇತ್ತೀಚೆಗೆ ಬಿಡುಗಡೆಯಾದ ಫ್ರೀಡಂ 125 ಸಿಎನ್‌ಜಿಗೆ ಹೋಲುತ್ತವೆ. ಇದರರ್ಥ ಬಜಾಜ್ ಪಲ್ಸರ್ N125 ಮೂಲ ಬ್ಲೂಟೂತ್ ಕಾರ್ಯನಿರ್ವಹಣೆಯೊಂದಿಗೆ ಬರಬಹುದು. ಯುವಕರಿಗೆ ಸರಿಹೊಂದುವಂತೆ, ಈ ಪಲ್ಸರ್ N125 ಅನ್ನು ಸೈಡ್ ಪ್ಯಾನೆಲ್‌ಗಳು ಮತ್ತು ಟೈಲ್ ವಿಭಾಗದಲ್ಲಿ ಕೆಲವು ಹೊಸ ಗ್ರಾಫಿಕ್ಸ್‌ನೊಂದಿಗೆ ತರಲಾಗುವುದು. TVS ರೈಡರ್, Hero Xtreme 125R ನಂತೆಯೇ, ಈ ಹೊಸ ಪಲ್ಸರ್ N125 ಸಹ ಸ್ಪ್ಲಿಟ್ ಸೀಟ್‌ಗಳೊಂದಿಗೆ ಬರುತ್ತದೆ.

ಪಲ್ಸರ್ 125, ಪಲ್ಸರ್ NS125, ಫ್ರೀಡಂ 125 ಮತ್ತು CT 125X ನಂತರ 125cc ವರ್ಗದಲ್ಲಿ Bajaj Pulsar N125 ಬಜಾಜ್‌ನ ಐದನೇ ಕೊಡುಗೆಯಾಗಿದೆ ಮತ್ತು ಈ ಪಟ್ಟಿಯಲ್ಲಿರುವ ಇತರ ಮಾದರಿಗಳೊಂದಿಗೆ ಅದರ ಯಾವುದೇ ಮೂಲಭೂತ ಅಂಶಗಳನ್ನು ಅಳವಡಿಸಿಕೊಳ್ಳುತ್ತದೆಯೇ ಎಂದು ನೋಡಬೇಕಾಗಿದೆ.

ಬಜಾಜ್ ಪಲ್ಸರ್ ಎನ್125 ಬೆಲೆ ಎಷ್ಟು?: ಬಜಾಜ್ ಪಲ್ಸರ್ ಎನ್ 125 ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಾದ ಹೀರೋ ಮತ್ತು ಟಿವಿಎಸ್‌ಗೆ ಸಮಾನವಾದ ಬೆಲೆಯನ್ನು ನಿರೀಕ್ಷಿಸಲಾಗಿದೆ. ಅಂದರೆ ಇದರ ಬೆಲೆ ಸುಮಾರು 90,000 ರೂ.ಯಿಂದ 1.10 ಲಕ್ಷ ರೂ (ಎಕ್ಸ್ ಶೋ ರೂಂ).

ಇದನ್ನೂ ಓದಿ: ಡಿಜಿಟಲ್​ ಇಂಡಿಯಾ: 5G ನೆಟ್‌ವರ್ಕ್ ಬಳಿಕ 6G ತಂತ್ರಜ್ಞಾನದಲ್ಲಿ ಮುನ್ನುಗ್ಗುತ್ತಿರುವ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.