ETV Bharat / technology

ಪೆಟ್ರೋಲ್​ ಅಲ್ಲ, ಫ್ಲೆಕ್ಸ್-ಫ್ಯೂಯಲ್​ ಪಲ್ಸರ್ ಪರಿಚಯಿಸಿದ ಬಜಾಜ್! ಏನಿದರ ವಿಶೇಷತೆ? - Bajaj Pulsar Bike Flex Fuel

author img

By ETV Bharat Tech Team

Published : Sep 6, 2024, 10:57 AM IST

Bajaj Pulsar Bike Flex Fuel: ಬಜಾಜ್ ಆಟೋ ನಿರಂತರವಾಗಿ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿರುತ್ತದೆ. ಇದೀಗ ಕಂಪನಿಯು ತನ್ನ ಪ್ರಸಿದ್ಧ ಬೈಕ್ ಬಜಾಜ್ ಪಲ್ಸರ್ NS160ನ ಹೊಸ ಫ್ಲೆಕ್ಸ್ ಫ್ಯೂಯಲ್​ ಆವೃತ್ತಿಯನ್ನು ಇಂಡಿಯಾ ಬಯೋ-ಎನರ್ಜಿ ಮತ್ತು ಟೆಕ್ (IBET) ಎಕ್ಸ್‌ಪೋ 2024ರಲ್ಲಿ ಪ್ರದರ್ಶಿಸಿದೆ. ಈ ದ್ವಿಚಕ್ರ ವಾಹನ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ!.

BAJAJ PULSAR NS160  NEW BJAJA PULSAR BIKE  BJAJA PULSAR FLEX FUEL  WHAT IS FLEX FUEL
ಫ್ಲೆಕ್ಸ್-ಫ್ಯೂಯಲ್​ ಪಲ್ಸರ್ ಬೈಕ್ (Photo: https://www.bajajauto.com/bikes/pulsar/pulsar-ns160)

Bajaj Pulsar Bike Flex Fuel: ಬಜಾಜ್ ಆಟೋ ನಿರಂತರವಾಗಿ ಹೊಸ ತಂತ್ರಜ್ಞಾನವನ್ನು ತನ್ನ ದ್ವಿಚಕ್ರ ವಾಹನಗಳಲ್ಲಿ ಪರಿಚಯಿಸುತ್ತಾ ಗಮನ ಸೆಳೆಯುತ್ತದೆ. ಇತ್ತೀಚೆಗೆ ಕಂಪನಿಯು ವಿಶ್ವದ ಮೊದಲ CNG ಬೈಕ್ ಬಜಾಜ್ ಫ್ರೀಡಂ 125 ಅನ್ನು ಬಿಡುಗಡೆ ಮಾಡಿತು. ಈಗ ಕಂಪನಿಯು ತನ್ನ ಪ್ರಸಿದ್ಧ ಬೈಕ್ ಬಜಾಜ್ ಪಲ್ಸರ್ NS160ನ ಹೊಸ ಫ್ಲೆಕ್ಸ್ ಫ್ಯೂಯಲ್​ ಆವೃತ್ತಿಯನ್ನು ಇಂಡಿಯಾ ಬಯೋ-ಎನರ್ಜಿ ಮತ್ತು ಟೆಕ್ (IBET) ಎಕ್ಸ್‌ಪೋ 2024ರಲ್ಲಿ ಪ್ರದರ್ಶಿಸಿದೆ.

ಎಕ್ಸ್‌ಪೋ 2024ದಲ್ಲಿ ಸುಸ್ಥಿರ ಇಂಧನಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ. ಇದನ್ನು ಇಂಡಿಯನ್ ಫೆಡರೇಶನ್ ಆಫ್ ಗ್ರೀನ್ ಎನರ್ಜಿ ಮತ್ತು ಎಂಎಂ ಆ್ಯಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಜಂಟಿಯಾಗಿ ಆಯೋಜಿಸಿವೆ.

ಫ್ಲೆಕ್ಸ್-ಫ್ಯೂಯಲ್​ ಎಂದರೇನು?: ಫ್ಲೆಕ್ಸ್-ಫ್ಯೂಯಲ್​ ಹೊಸದೇನಲ್ಲ. ಈ ರೀತಿಯ ತಂತ್ರಜ್ಞಾನವನ್ನು ಬಳಸಲು ಸರ್ಕಾರ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಫ್ಲೆಕ್ಸ್-ಫ್ಯೂಯಲ್​ ಎಂಜಿನ್ ಹೊಂದಿರುವ ವಾಹನಗಳ ತಯಾರಿಕೆಯನ್ನು ಹಲವು ಬಾರಿ ಪ್ರತಿಪಾದಿಸಿದ್ದಾರೆ.

ಫ್ಲೆಕ್ಸ್ ಇಂಧನವು ಪೆಟ್ರೋಲ್ ಮತ್ತು ಎಥೆನಾಲ್ ಅಥವಾ ಮೆಥನಾಲ್​ನಂತಹ ಇತರ ಇಂಧನಗಳ ಮಿಶ್ರಣದಿಂದ ತಯಾರಿಸಿದ ಪರ್ಯಾಯ ಇಂಧನ. ಫ್ಲೆಕ್ಸ್ ಇಂಧನ ವಾಹನಗಳು ನಿಯಮಿತ (ICE) ಆಂತರಿಕ ದಹನಕಾರಿ ಎಂಜಿನ್ ಹೊಂದಿವೆ ಮತ್ತು ಒಂದಕ್ಕಿಂತ ಹೆಚ್ಚು ರೀತಿಯ ಇಂಧನದಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಹೇಗಿದೆ ಫ್ಲೆಕ್ಸ್ ಇಂಧನ ಪಲ್ಸರ್?: ಬಜಾಜ್ ಪಲ್ಸರ್ NS160 ಫ್ಲೆಕ್ಸ್ ಇಂಧನವು ಎಥೆನಾಲ್ ಮತ್ತು ಪೆಟ್ರೋಲ್ ಮಿಶ್ರಣದಿಂದ ಚಲಿಸುತ್ತದೆ ಎಂದು ಕಂಪನಿ ಹೇಳುತ್ತದೆ. ಆದರೆ ಬೈಕ್ ಬಗ್ಗೆ ಬಜಾಜ್ ಆಟೋ ಹೆಚ್ಚಿನ ಮಾಹಿತಿ ನೀಡಿಲ್ಲ. ಇತ್ತೀಚೆಗೆ, ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು ಎಥೆನಾಲ್ ಚಾಲಿತ ಬೈಕ್ ಅನ್ನು ಮಾರ್ಚ್ 2025ರ ವೇಳೆಗೆ ಬಿಡುಗಡೆ ಮಾಡಬಹುದು ಎಂದು ಹೇಳಿದ್ದರು.

ಕೆಲವು ಸಮಯದಿಂದ ಭಾರತ ಸರ್ಕಾರ E80/E100 ಎಥೆನಾಲ್‌ನಲ್ಲಿ ಚಲಿಸುವ ವಾಹನಗಳನ್ನು ಉತ್ತೇಜಿಸುತ್ತಿದೆ. TVS ಸಹ ಎಥೆನಾಲ್ ಬೈಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಕೆಲವು ವರ್ಷಗಳ ಹಿಂದೆ ಅಪಾಚೆ RTR 200ನ ಫ್ಲೆಕ್ಸ್ ಫ್ಯೂಯಲ್​ ಮಾದರಿಯನ್ನು ಪ್ರದರ್ಶಿಸಿತ್ತು. ಬ್ರೆಜಿಲ್ ಮತ್ತು ದಕ್ಷಿಣ ಅಮೆರಿಕದ ದೇಶಗಳಲ್ಲಿ E80/100 ಇಂಧನದ ಬಳಕೆ ಹೆಚ್ಚಾಗಿದೆ. ಆ ದೇಶಗಳಲ್ಲಿ ಅದನ್ನು ಮಾರಾಟ ಮಾಡುವ ಉದ್ದೇಶಕ್ಕಾಗಿ ಫ್ಲೆಕ್ಸ್ ಫ್ಯೂಯಲ್​ ಬೈಕ್​ಗಳನ್ನು ಅಭಿವೃದ್ಧಿಪಡಿಸಲು ಇದು ಅರ್ಥಪೂರ್ಣವಾಗಿದೆ. ಏಕೆಂದರೆ ಬಜಾಜ್ ಮತ್ತು ಟಿವಿಎಸ್‌ನಂತಹ ಕಂಪನಿಗಳು ಈ ದೇಶಗಳಲ್ಲಿ ದೊಡ್ಡ ಅಸ್ತಿತ್ವ ಹೊಂದಿವೆ.

ಭಾರತ E80/E100 ಇಂಧನದೆಡೆಗೆ ಚಲಿಸುವ ನಿರೀಕ್ಷೆಯಿದೆ. ಈ ಕಂಪನಿಗಳು ಫ್ಲೆಕ್ಸ್ ಫ್ಯೂಯಲ್​ ವಾಹನಗಳನ್ನು ಮುಂಚಿತವಾಗಿ ಸಿದ್ಧಪಡಿಸಿದರೆ, ಮಾರುಕಟ್ಟೆಯನ್ನು ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳಲು ಸುಲಭವಾಗುತ್ತದೆ.

ಹೊಸ ಪಲ್ಸರ್​ ಬೈಕ್​ನ​ ವೈಶಿಷ್ಟ್ಯಗಳಿವು: ಪೆಟ್ರೋಲ್‌ಚಾಲಿತ ಪಲ್ಸರ್ NS160 ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 160.3 ಸಿಸಿ ಸಾಮರ್ಥ್ಯ ಹೊಂದಿದೆ. ಇದು 17.2PS ಪವರ್ ಮತ್ತು 14.6Nm ಟಾರ್ಕ್ ಉತ್ಪಾದಿಸುತ್ತದೆ. ಸಸ್ಪೆನ್ಷನ್ ಸೆಟಪ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಮೊನೊಶಾಕ್ ಒಳಗೊಂಡಿದೆ. ಬ್ರೇಕ್​ ವಿಭಾಗದಲ್ಲಿ 300 ಎಂಎಂ ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು 230 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

ಪಲ್ಸರ್ NS160 ಫ್ಲೆಕ್ಸ್ ಫ್ಯೂಯಲ್​ ಜೊತೆಗೆ, ಬಜಾಜ್ ಆಟೋ ಇತ್ತೀಚೆಗೆ ಬಿಡುಗಡೆಯಾದ ಬಜಾಜ್ ಫ್ರೀಡಂ 125 CNG ಬೈಕ್ ಅನ್ನು IBET ಎಕ್ಸ್‌ಪೋ 2024ರಲ್ಲಿ ಪ್ರದರ್ಶಿಸಿತು. ಇದರ ಆರಂಭಿಕ ಬೆಲೆ ರೂ 95,000 (ಎಕ್ಸ್ ಶೋ ರೂಂ). ಈ ಬೈಕ್ ಒಟ್ಟು ಮೂರು ರೂಪಾಂತರಗಳಲ್ಲಿ ಹೊರಬಂದಿದೆ. ಇದರಲ್ಲಿ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆಯ್ಕೆ ಲಭ್ಯವಿದೆ.

ಇದನ್ನೂ ಓದಿ: ಬ್ಲ್ಯಾಕ್​​-ಬೋಲ್ಡ್ ಲುಕ್​; ಹಲವಾರು ಬದಲಾವಣೆ, ವೈಶಿಷ್ಟ್ಯಗಳೊಂದಿಗೆ ನೈಟ್​ ಕ್ರೆಟಾ ರಿಲೀಸ್! - Hyundai Creta Knight

ETV Bharat Logo

Copyright © 2024 Ushodaya Enterprises Pvt. Ltd., All Rights Reserved.