AUTO SALES NOVEMBER 2024: ಭಾರತೀಯ ಮಾರುಕಟ್ಟೆಯಲ್ಲಿನ ಕಾರು ತಯಾರಕರು ನವೆಂಬರ್ 2024ರ ವಿವಿಧ ಮಾರಾಟದ ಅಂಕಿ - ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಟೊಯೋಟಾ ಇಂಡಿಯಾದಂತಹ ಕಂಪನಿಗಳು ತಮ್ಮ ಮಾರಾಟದಲ್ಲಿ ಹೆಚ್ಚಳವನ್ನು ದಾಖಲಿಸಿದ್ದು, ಹ್ಯುಂಡೈ ಇಂಡಿಯಾದ ಮಾರಾಟವು ಕಳೆದ ತಿಂಗಳು ಕುಸಿತ ಕಂಡಿದೆ.
ಮಾರುತಿ ಸುಜುಕಿ: ಸ್ಥಳೀಯ ಕಾರು ತಯಾರಕ ಮಾರುತಿ ಸುಜುಕಿ ನವೆಂಬರ್ 2024 ರಲ್ಲಿ 1,81,531 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದೆ. ಇದರಲ್ಲಿ ಲಘು ವಾಣಿಜ್ಯ ವಾಹನಗಳೂ ಸೇರಿವೆ. ಕಂಪನಿಯು ವರ್ಷದಿಂದ ವರ್ಷಕ್ಕೆ 10.39 ಶೇಕಡಾ ಬೆಳವಣಿಗೆ ದಾಖಲಿಸಿದೆ. ಆದರೂ ಈ ಅಂಕಿ - ಅಂಶವು ಅಕ್ಟೋಬರ್ 2024 ರಲ್ಲಿ ಕಂಪನಿಯ ಮಾರಾಟ ಸಂಖ್ಯೆಗಳಿಗಿಂತ ತುಂಬಾ ಕಡಿಮೆಯಾಗಿದೆ.
ನವೆಂಬರ್ 2024 ರಲ್ಲಿ ಮಾರುತಿಯ ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು 1,41,312 ಯುನಿಟ್‌ಗಳಷ್ಟಿದೆ. ಇದು ನವೆಂಬರ್ 2023 ರ ಮಾರಾಟದ ಅಂಕಿ - ಅಂಶಕ್ಕಿಂತ ಶೇಕಡಾ 5.33 ರಷ್ಟು ಹೆಚ್ಚಾಗಿದೆ. ಕಂಪನಿಯು ತನ್ನ ಜಾಗತಿಕ ಮೈತ್ರಿಯ ಭಾಗವಾಗಿ ಟೊಯೋಟಾಗೆ 8,660 ಯುನಿಟ್‌ಗಳನ್ನು ಮಾರಾಟ ಮಾಡಿತು. ಕಳೆದ ವರ್ಷದ ಇದೇ ತಿಂಗಳ ಅವಧಿಯಲ್ಲಿ 22,950 ಯುನಿಟ್‌ಗಳಿಗೆ ಹೋಲಿಸಿದರೆ 28,633 ಯುನಿಟ್‌ಗಳನ್ನು ರಫ್ತು ಮಾಡಿದೆ.
ಟಾಟಾ ಮೋಟಾರ್ಸ್: ನವೆಂಬರ್ 2024 ರಲ್ಲಿ ಟಾಟಾ ಮೋಟಾರ್ಸ್‌ನ ಒಟ್ಟು ಪ್ರಯಾಣಿಕ ವಾಹನ ಮಾರಾಟವು 47,117 ಯುನಿಟ್‌ಗಳಷ್ಟಿತ್ತು. ಇದು 2023 ರಲ್ಲಿ ಅದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕೇವಲ 2 ಪ್ರತಿಶತದಷ್ಟು ಹೆಚ್ಚಳ ಹೊಂದಿದೆ. ಆದರೂ ಈ ಮಾರಾಟದ ಅಂಕಿ - ಅಂಶವು ಅಕ್ಟೋಬರ್ 2024 ರಲ್ಲಿ ಕಂಪನಿಯ ಮಾರಾಟಕ್ಕಿಂತ 2.69 ಶೇಕಡಾ ಕಡಿಮೆಯಾಗಿದೆ.
ಟಾಟಾ ಮೋಟಾರ್ಸ್‌ನ ಮಾರಾಟದಲ್ಲಿ ಒಂದು ಧನಾತ್ಮಕ ಅಂಶ ಎಂದರೆ ಅದರ ಎಲ್ಲ ಎಲೆಕ್ಟ್ರಿಕ್ ಪ್ರಯಾಣಿಕ ವಾಹನ ಶ್ರೇಣಿಯ ಮಾರಾಟವು ಈ ತಿಂಗಳು ಶೇಕಡಾ 9 ರಷ್ಟು ಯುನಿಟ್‌ಗಳ ಏರಿಕೆ ಕಂಡಿದೆ. ಅಕ್ಟೋಬರ್ 2023 ರಲ್ಲಿ 74,172 ಯುನಿಟ್‌ಗಳಿಗೆ ಹೋಲಿಸಿದರೆ ಕಂಪನಿಯ (ವಾಣಿಜ್ಯ ವ್ಯಾಪಾರ ಸೇರಿದಂತೆ) ಮಾರಾಟವು ನವೆಂಬರ್ 2024 ರಲ್ಲಿ 74,753 ಯುನಿಟ್‌ಗಳಷ್ಟಿತ್ತು.
ಹುಂಡೈ ಇಂಡಿಯಾ: ಹ್ಯುಂಡೈ ಇಂಡಿಯಾದ ಕುರಿತು ಮಾತನಾಡುವುದಾದರೆ, ಕಂಪನಿಯು ವರ್ಷದಿಂದ ವರ್ಷಕ್ಕೆ 6.9 ಪ್ರತಿಶತದಷ್ಟು ಕುಸಿತವನ್ನು ದಾಖಲಿಸಿದ್ದರಿಂದ, ನವೆಂಬರ್ 2024 ರಲ್ಲಿ ಕಂಪನಿಯ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಈ ತಿಂಗಳು ಭಾರತದಲ್ಲಿ ಕೊರಿಯನ್ ಕಾರು ತಯಾರಕರ ಒಟ್ಟು ಮಾರಾಟವು 61,252 ಯುನಿಟ್‌ಗಳಷ್ಟಿದೆ. ಇದು ನವೆಂಬರ್ 2023 ರಲ್ಲಿ 65,801 ಯುನಿಟ್‌ಗಳಷ್ಟಿತ್ತು.
ಅಕ್ಟೋಬರ್ 2024 ರಲ್ಲಿ ಕಂಪನಿಯು 70,078 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಇದಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇಕಡಾ 12.5 ರಷ್ಟು ಕುಸಿತ ಕಂಡು ಬಂದಿದೆ. ನವೆಂಬರ್ 2024 ರಲ್ಲಿನ ಮಾರಾಟ ಸಂಖ್ಯೆಗಳು ದೇಶೀಯ ಮಾರುಕಟ್ಟೆಯಲ್ಲಿ 48,246 ಮಾರಾಟ (ವರ್ಷದಿಂದ ವರ್ಷಕ್ಕೆ 2.4 ಶೇಕಡಾ ಕಡಿಮೆ) ಮತ್ತು 13,006 ರಫ್ತುಗಳು (ವರ್ಷದಿಂದ ವರ್ಷಕ್ಕೆ 20.5 ಶೇಕಡಾ ಕಡಿಮೆ) ಒಳಗೊಂಡಿದೆ.
JSW MG ಮೋಟಾರ್ ಇಂಡಿಯಾ: JSW MG ಮೋಟಾರ್ ನವೆಂಬರ್ 2024 ರಲ್ಲಿ 6,019 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ನವೆಂಬರ್ 2023 ಕ್ಕೆ ಹೋಲಿಸಿದರೆ 20 ಪ್ರತಿಶತದಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಅಕ್ಟೋಬರ್ 2024 ರ ಹೊತ್ತಿಗೆ MG ಮೋಟಾರ್ ಹೇಳುವಂತೆ EV ಮಾರಾಟವು ತಿಂಗಳಲ್ಲಿ ಅದರ ಒಟ್ಟು ಮಾರಾಟದ ಪರಿಮಾಣದ 70 ಪ್ರತಿಶತ ಹೊಂದಿದೆ.
ನವೆಂಬರ್‌ನಲ್ಲಿ ತನ್ನ ಇತ್ತೀಚಿನ ಎಲೆಕ್ಟ್ರಿಕ್ ಕಾರ್ ಎಂಜಿ ವಿಂಡ್ಸರ್ ಇವಿಯ 3,144 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನವೆಂಬರ್ 2024 ರಲ್ಲಿ 25,586 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಇದು ರಫ್ತುಗಳನ್ನು ಸಹ ಒಳಗೊಂಡಿದೆ. ಈ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 44ರಷ್ಟು ಹೆಚ್ಚಳವನ್ನು ಕಂಡಿದೆ. ಆದಾರೂ ಅಕ್ಟೋಬರ್ 2024 ಕ್ಕೆ ಹೋಲಿಸಿದರೆ ಈ ತಿಂಗಳ ಮಾರಾಟ ಅಂಕಿ - ಅಂಶಗಳು ವಾಸ್ತವವಾಗಿ 17 ಪ್ರತಿಶತದಷ್ಟು ಕುಸಿದಿವೆ.
ನವೆಂಬರ್ 2024 ರಲ್ಲಿ ರಫ್ತು 1,140 ಯುನಿಟ್‌ಗಳಷ್ಟಿತ್ತು. ಇದು ಅಕ್ಟೋಬರ್‌ನಲ್ಲಿ 2,707 ಯುನಿಟ್‌ಗಳಿಗಿಂತ ಕಡಿಮೆಯಾಗಿದೆ. ಅಂದರೆ ಸುಮಾರು 58 ಪ್ರತಿಶತದಷ್ಟು ಕುಸಿತವಾಗಿದೆ. ಎರಡು ಟೊಯೊಟಾ ಕಾರುಗಳು, ಇನ್ನೋವಾ ಹೈಕ್ರಾಸ್ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ನವೆಂಬರ್ 2024 ರಲ್ಲಿ 1 ಲಕ್ಷ ಯುನಿಟ್ ಮಾರಾಟದ ಮೈಲಿಗಲ್ಲನ್ನು ಸಾಧಿಸಿವೆ.
ಓದಿ: ಈ ತಿಂಗಳಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಈ ಪವರ್ಫುಲ್ SUV ಕಾರುಗಳು!