ETV Bharat / technology

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಲು ಹೊರಟ ಆಸ್ಟ್ರೇಲಿಯಾ

ಆಂಥೋನಿ ಅಲ್ಬನೀಸ್ ನೇತೃತ್ವದ ಆಸ್ಟ್ರೇಲಿಯಾ ಸರ್ಕಾರ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿರ್ಬಂಧಿಸಲು ಹೊಸ​ ಕಾನೂನು ತರುತ್ತಿದೆ.

AUSTRALIA GOVERNMENT  16 UNDER CHILDREN  WORLD LEADING BAN ON SOCIAL MEDIA
ಸೋಶಿಯಲ್​ ಮೀಡಿಯಾ (ETV Bharat)
author img

By ETV Bharat Tech Team

Published : 2 hours ago

ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮಕ್ಕಳು ಮಾನಸಿಕ ಖಿನ್ನತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ರಕ್ಷಿಸುವ ಉದ್ದೇಶದಿಂದ ಆಸ್ಟ್ರೇಲಿಯಾ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ.

ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮಾತನಾಡಿ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಕಾನೂನು ರೂಪಿಸುತ್ತೇವೆ ಎಂದು ಹೇಳಿದ್ದಾರೆ. ಇದಕ್ಕಾಗಿ ಏಜ್​ ವೆರಿಫಿಕೇಷನ್​ ಸಿಸ್ಟಮ್​ ಅನ್ನು ಪ್ರಯೋಗಿಸಲಾಗುತ್ತಿದೆ. ಮುಂದಿನ ವರ್ಷಾಂತ್ಯದೊಳಗೆ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ.

ಸಾಮಾಜಿಕ ಮಾಧ್ಯಮ ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ. ಇದರ ಅತಿಯಾದ ಬಳಕೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ನಿರ್ದಿಷ್ಟವಾಗಿ ಹೆಣ್ಣು ಮಕ್ಕಳಿಗೆ ಅಶ್ಲೀಲ ವಿಚಾರಗಳು ಅಪಾಯ ಉಂಟುಮಾಡುತ್ತಿವೆ. ಸ್ತ್ರೀ ದ್ವೇಷದ ವಿಷಯಗಳು ಹುಡುಗರನ್ನು ಗುರಿಯಾಗಿಸುತ್ತಿವೆ. ಹೀಗಾಗಿ, ಈ ವರ್ಷ ಸಂಸತ್ತಿನಲ್ಲಿ ಕಾನೂನನ್ನು ಪರಿಚಯಿಸಲಾಗುವುದು. ಜನಪ್ರತಿನಿಧಿಗಳು ಅಂಗೀಕರಿಸಿದ 12 ತಿಂಗಳ ನಂತರ ಕಾನೂನು ಜಾರಿಗೆ ಬರಲಿವೆ ಎಂದು ಅಲ್ಬನೀಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಪಕ್ಷವಾದ ಲಿಬರಲ್ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಪೋಷಕರ ಒಪ್ಪಿಗೆ ಹೊಂದಿರುವ ಅಥವಾ ಈಗಾಗಲೇ ಖಾತೆಗಳನ್ನು ಹೊಂದಿರುವ ಮಕ್ಕಳಿಗೆ ಇದರಿಂದ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಾಮಾಜಿಕ ಜಾಲತಾಣ ಪ್ರವೇಶವನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಪ್ರದರ್ಶಿಸುವ ಜವಾಬ್ದಾರಿ ಕೂಡಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೇಲಿರುತ್ತದೆ. ಈ ಜವಾಬ್ದಾರಿ ಪೋಷಕರು ಅಥವಾ ಯುವಜನತೆಯ ಮೇಲೆ ಇರುವುದಿಲ್ಲ ಎಂದು ಅಲ್ಬನೀಸ್ ಹೇಳಿದ್ದಾರೆ.

ಕಳೆದ ವರ್ಷ ಫ್ರಾನ್ಸ್ 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧ ಪ್ರಸ್ತಾಪಿಸಿತ್ತು. ಆದರೆ ಬಳಕೆದಾರರು ಪೋಷಕರ ಒಪ್ಪಿಗೆಯೊಂದಿಗೆ ನಿಷೇಧ ತಪ್ಪಿಸಲು ಸಾಧ್ಯವಾಯಿತು. ಅಮೆರಿಕದಲ್ಲಿ 13 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಪ್ರವೇಶಿಸಲು ಪೋಷಕರ ಒಪ್ಪಿಗೆ ಪಡೆಯಬೇಕಿದೆ.

ಇದನ್ನೂ ಓದಿ: ವಿದೇಶದಲ್ಲೇ ಕುಳಿತು ತಾಯ್ನಾಡಿನಲ್ಲಿ ಯುಪಿಐ ಮೂಲಕ ವಹಿವಾಟು ನಡೆಸಬಹುದು ಎನ್​ಆರ್​ಐ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.