ETV Bharat / technology

ಭಾರತದ ಮಾರುಕಟ್ಟೆಗೆ ಹೊಸ ಆಸೂಸ್ ಲ್ಯಾಪ್​ಟಾಪ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

author img

By ETV Bharat Karnataka Team

Published : Mar 13, 2024, 1:38 PM IST

ತೈವಾನ್ ಮೂಲದ ಕಂಪನಿ ಆಸೂಸ್ ಭಾರತದ ಮಾರುಕಟ್ಟೆಗೆ ಹೊಸ ಲ್ಯಾಪ್​ಟಾಪ್​ಗಳನ್ನು ಬಿಡುಗಡೆ ಮಾಡಿದೆ.

asus-laptop-launched-in-india
asus-laptop-launched-in-india

ನವದೆಹಲಿ: ತೈವಾನ್ ಟೆಕ್ ಕಂಪನಿ ಆಸೂಸ್ ಬುಧವಾರ ತನ್ನ ಮುಂದಿನ ತಲೆಮಾರಿನ (2024 ಆವೃತ್ತಿ) ಝೆನ್ ಬುಕ್ ಎಸ್ 13 ಒಎಲ್ಇಡಿ (Zenbook S 13 OLED) ಮತ್ತು ವಿವೋಬುಕ್ 15 (Vivobook 15) ಲ್ಯಾಪ್ ಟಾಪ್​ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಝೆನ್ ಬುಕ್ ಎಸ್ 13 ಒಎಲ್ಇಡಿ (UX5304MA) ಮತ್ತು ವಿವೋಬುಕ್ 15 (X1504VAP) ಮಾರ್ಚ್ 13 ರಿಂದ ಕ್ರಮವಾಗಿ 1,29,990 ಮತ್ತು 49,990 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿವೆ.

ಝೆನ್ ಬುಕ್ ಎಸ್ 13 13.3 ಇಂಚಿನ 2.8 ಕೆ ಆಸೂಸ್ ಲುಮಿನಾ ಒಎಲ್ಇಡಿ ಡಿಸ್ ಪ್ಲೇಯನ್ನು ಹೊಂದಿದೆ. ಇದು ಇಂಟೆಲ್ ಕೋರ್ ಅಲ್ಟ್ರಾ 7 ಪ್ರೊಸೆಸರ್ -155 ಯು, 32 ಜಿಬಿ ರ್ಯಾಮ್ ಮತ್ತು 1 ಟಿಬಿ ಎಸ್ಎಸ್​ಡಿಯನ್ನು ಹೊಂದಿದೆ.

ಮತ್ತೊಂದೆಡೆ, ವಿವೋಬುಕ್ 15 15.6-ಇಂಚಿನ ಫುಲ್ ಎಚ್​ಡಿ ಐಪಿಎಸ್ ಪ್ಯಾನಲ್ ಅನ್ನು ಹೊಂದಿದೆ. ಇದು 16: 9 ಅನುಪಾತವನ್ನು ಒದಗಿಸುತ್ತದೆ. ಕೆಲಸ ಮತ್ತು ಗೇಮಿಂಗ್ ಎರಡಕ್ಕೂ ಇದು ಸೂಕ್ತವಾಗಿದೆ. ಇಂಟೆಲ್ ಕೋರ್ ಯು-ಸೀರಿಸ್ ಪ್ರೊಸೆಸರ್, 16 ಜಿಬಿ ರ್ಯಾಮ್ ಮತ್ತು 512 ಜಿಬಿ ಎಸ್ಎಸ್​ಡಿಯನ್ನು ಈ ಲ್ಯಾಪ್​ಟಾಪ್ ಹೊಂದಿದೆ.

ಝೆನ್​ಫೋನ್ 14 ರಂದು ಬಿಡುಗಡೆ: ಆಸೂಸ್ ಝೆನ್ ಫೋನ್ 11 ಅಲ್ಟ್ರಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಧಿಕೃತ ವಿವರಗಳ ಪ್ರಕಾರ, ಈ ಸ್ಮಾರ್ಟ್ ಫೋನ್​ ಅನ್ನು ಮಾರ್ಚ್ 2024 ರಲ್ಲಿ ಲೈವ್ ಆನ್ಲೈನ್ ಈವೆಂಟ್ ಮೂಲಕ ಬಿಡುಗಡೆ ಮಾಡಲಾಗುವುದು. ಇದು ಮಾರ್ಚ್ 14 ರ ಗುರುವಾರ ಬಿಡುಗಡೆಯಾಗಲಿದೆ. ಕಂಪನಿಯು ಎಕ್ಸ್ ನಲ್ಲಿ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ದೃಢಪಡಿಸಿದೆ.

ಆಸೂಸ್ ಝೆನ್ ಫೋನ್ 11 ಅಲ್ಟ್ರಾ ಎಐ-ಇಂಟಿಗ್ರೇಟೆಡ್ ಫ್ಲ್ಯಾಗ್​ ಶಿಪ್ ಫೋನ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಅಂದರೆ ಇದು ಎಐ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಈ ವೈಶಿಷ್ಟ್ಯಗಳ ನಿಖರವಾದ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಹೊಸ ಸ್ಮಾರ್ಟ್ ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ 8 ಜೆನ್ 3 ಎಸ್ಒಸಿ, 16 ಜಿಬಿ ಎಲ್​ಪಿಡಿಡಿಆರ್ 5 ಎಕ್ಸ್ ರಾಮ್ ಮತ್ತು 512 ಜಿಬಿ ಯುಎಫ್ಎಸ್ 4.0 ಇನ್ಬಿಲ್ಟ್ ಸ್ಟೋರೇಜ್ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : iQOO Z9 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ 17,999 ರೂ.ಗಳಿಂದ ಆರಂಭ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.