Apple vs Samsung: ಆಪಲ್ ಕಂಪನಿಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾದ ಈವೆಂಟ್‌ನಲ್ಲಿ Apple iPhone 16 ಅನ್ನು ಹೆಚ್ಚು ಸಂಭ್ರಮದಿಂದ ಬಿಡುಗಡೆ ಮಾಡಲಾಯಿತು. ಆಪಲ್ ಈವೆಂಟ್‌ನಲ್ಲಿ ಕಂಪನಿಯು ಹಲವಾರು ಐಫೋನ್ 16 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿತು. ಆದರೂ ಬಿಡುಗಡೆಯ ಸಮಯದಲ್ಲಿ, ಆಂಡ್ರಾಯ್ಡ್ ಪ್ರಮುಖ ಕಂಪನಿ ಸ್ಯಾಮ್‌ಸಂಗ್ ಆಪಲ್ ಅನ್ನು ಟ್ರೋಲ್ ಮಾಡಿದೆ. ಎರಡು ವರ್ಷಗಳ ಹಿಂದಿನ ಪೋಸ್ಟ್ವೊಂದನ್ನು ರೀಟ್ವಿಟ್ ಮಾಡಿ ಮತ್ತೆ ಫೋಲ್ಡಬಲ್ ಫೋನ್‌ಗಳ ಕುರಿತು ಸ್ಯಾಮ್‌ಸಂಗ್ ಪ್ರಶ್ನೆಗಳನ್ನು ಎತ್ತಿದೆ.
ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆಪಲ್ ಪ್ರಧಾನ ಕಚೇರಿಯಲ್ಲಿ ನಡೆದ ಆಪಲ್ ಸಮಾರಂಭದಲ್ಲಿ ಆಪಲ್ ಉತ್ಪನ್ನಗಳ ಸರಣಿಯನ್ನು ಪರಿಚಯಿಸಿತು. ಈ ಸಂದರ್ಭದಲ್ಲಿ ಕಂಪನಿಯು ಐಫೋನ್ 16 ಸರಣಿಯ ಹೊಸ ಸರಣಿಯನ್ನು ಬಿಡುಗಡೆ ಮಾಡಿತು. ಇದು iPhone 16, iPhone 16 Plus, iPhone 16 Pro ಮತ್ತು iPhone 16 Pro Max ಅನ್ನು ಒಳಗೊಂಡಿದೆ. ಇದರ ಹೊರತಾಗಿ, ಕಂಪನಿಯು ಆಪಲ್ ವಾಚ್ ಸರಣಿ ಮತ್ತು ಹೊಸ ಏರ್‌ಪೋಡ್ಸ್ ಒಳಗೊಂಡಂತೆ ತನ್ನ ಕೆಲವು ಇತರ ಸಾಧನಗಳನ್ನು ಸಹ ಬಿಡುಗಡೆ ಮಾಡಿರುವುದು ಗೊತ್ತಿರುವ ಸಂಗತಿ.
Let us know it when it folds. 💁♀️
— Samsung Mobile US (@SamsungMobileUS) September 7, 2022
ಸ್ಮಾರ್ಟ್‌ಫೋನ್ ವ್ಯವಹಾರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯೊಂದಿಗೆ, ವಿವಿಧ ಬ್ರಾಂಡ್‌ಗಳು ತಮ್ಮ ಪ್ರತಿಸ್ಪರ್ಧಿಗಳನ್ನು ಹಿಂದೆ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಒಬ್ಬರನ್ನೊಬ್ಬರು ಟ್ರೋಲ್ ಮಾಡುವುದಕ್ಕೂ ಸಹ ಹಿಂದೇಟು ಹಾಕುತ್ತಿಲ್ಲ. Apple iPhone 16 ಬಿಡುಗಡೆಯಾದ ನಂತರ, ಸ್ಮಾರ್ಟ್‌ಫೋನ್ ವ್ಯವಹಾರದಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್‌ಸಂಗ್ ಕೂಡ ಸ್ಪರ್ಧೆಗೆ ಪ್ರವೇಶಿಸಿತು. ಅದು ಫೋಲ್ಡಬಲ್ ಆದಾಗ ನಮಗೆ ತಿಳಿಸಿ ಎಂದು ಸ್ಯಾಮ್‌ಸಂಗ್ ವ್ಯಂಗ್ಯವಾಗಿ ತಮ್ಮ ಅಧಿಕೃತ ಎಕ್ಸ್ ಪೇಜ್ನಲ್ಲಿ ಎರಡು ವರ್ಷಗಳ ಹಿಂದೆ ಪೋಸ್ಟ್ ಮಾಡಿರುವ ಟ್ವಿಟ್ ಅನ್ನು ಮತ್ತೆ ರೀಟ್ವಿಟ್ ಮಾಡಿದೆ.
ಓದಿ: ಪ್ಯಾನ್ (PAN) ಕಾರ್ಡ್‌ನಿಂದ ಪ್ರಯೋಜನಗಳೇನು? - PAN Card Benefits