ನವದೆಹಲಿ: ಆಪಲ್ನ ಐಫೋನ್ 15 ಪ್ರೊ ಮ್ಯಾಕ್ಸ್ 2024 ರ ಮೊದಲ ತ್ರೈಮಾಸಿಕದಲ್ಲಿ (ಕ್ಯೂ 1) ಅತ್ಯಧಿಕ ಮಾರಾಟವಾದ ಸ್ಮಾರ್ಟ್ಫೋನ್ ಆಗಿ ಹೊರಹೊಮ್ಮಿದೆ ಎಂದು ಹೊಸ ವರದಿ ಸೋಮವಾರ ತೋರಿಸಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ ಆ್ಯಪಲ್ ಮತ್ತು ಸ್ಯಾಮ್ಸಂಗ್ ಮೊದಲ ತ್ರೈಮಾಸಿಕದಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಮಾರ್ಟ್ಫೋನ್ಗಳ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿವೆ. ಅಗ್ರ 10 ಸ್ಮಾರ್ಟ್ಫೋನ್ಗಳ ಪಟ್ಟಿಯಲ್ಲಿ ಎರಡೂ ಬ್ರಾಂಡ್ಗಳು ತಲಾ ಫೋನ್ಗಳನ್ನು ಹೊಂದಿವೆ.
"ಪ್ರೊ ಮ್ಯಾಕ್ಸ್ ಮಾಡೆಲ್ ಆ್ಯಪಲ್ನ ನಾನ್- ಸೀಸನಲ್ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಅಗ್ರ ಸ್ಥಾನ ಪಡೆದುಕೊಂಡಿದೆ. ಇದು ಹೈ-ಎಂಡ್ ಸ್ಮಾರ್ಟ್ ಫೋನ್ಗಳಿಗೆ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಪ್ರತಿಬಿಂಬಿಸುತ್ತದೆ" ಎಂದು ವಿಶ್ಲೇಷಕರು ಹೇಳಿದ್ದಾರೆ. "ಎಲ್ಲ ನಾಲ್ಕು ಐಫೋನ್ 15 ಮಾಡೆಲ್ಗಳು ಮತ್ತು ಐಫೋನ್ 14 ಟಾಪ್ 10 ಬೆಸ್ಟ್ ಸೆಲ್ಲರ್ ಗಳಲ್ಲಿ ಸೇರಿವೆ. ಇದಲ್ಲದೇ, ಐಫೋನ್ 15 ಶ್ರೇಣಿಯು ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ" ಎಂದು ಅವರು ಹೇಳಿದರು.
ಇದಲ್ಲದೆ, ಸ್ಯಾಮ್ಸಂಗ್ನ ಗ್ಯಾಲಕ್ಸಿ ಎಸ್ 24 ಸರಣಿಯು 1ನೇ ತ್ರೈಮಾಸಿಕದಲ್ಲಿ ಅಗ್ರ 10 ರಲ್ಲಿ ಎರಡು ಸ್ಥಾನಗಳನ್ನು ಗಳಿಸಿದೆ. ಅದರ ಅಲ್ಟ್ರಾ ಮಾಡೆಲ್ ಐದನೇ ಸ್ಥಾನದಲ್ಲಿದೆ ಮತ್ತು ಬೇಸ್ ಮಾಡೆಲ್ ಒಂಬತ್ತನೇ ಸ್ಥಾನದಲ್ಲಿದೆ. ವಿಶ್ಲೇಷಕರ ಪ್ರಕಾರ, ಎಸ್ 24 ಸರಣಿಯ ಉತ್ತಮವಾದ ಕಾರ್ಯಕ್ಷಮತೆಗೆ ಸ್ಯಾಮ್ಸಂಗ್ನ ಸರಣಿಯ ಆರಂಭಿಕ ಅಪ್ಡೇಟ್ ಮತ್ತು ಜನರೇಟಿವ್ ಎಐ (ಜೆಎನ್ ಎಐ) ತಂತ್ರಜ್ಞಾನದ ಅಳವಡಿಕೆಗಳು ಕಾರಣವಾಗಿವೆ.
"ಎಸ್ 24 ಸರಣಿಯು ಜೆನ್ ಎಐ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳೊಂದಿಗೆ ಮಾರುಕಟ್ಟೆಗೆ ಬಂದ ಮೊದಲ ಸ್ಮಾರ್ಟ್ ಫೋನ್ ಆಗಿದ್ದು, ಬಳಕೆದಾರರಿಗೆ ಅನನ್ಯ ಕಂಟೆಂಟ್ಗಳನ್ನು ರಚಿಸಲು ಮತ್ತು ತಮ್ಮ ಸ್ಮಾರ್ಟ್ ಫೋನ್ಗಳೊಂದಿಗೆ ಹೊಸ ಮಟ್ಟದ ಸಂವಹನ ಅನುಭವಿಸಲು ಅನುವು ಮಾಡಿಕೊಡುತ್ತದೆ" ಎಂದು ವಿಶ್ಲೇಷಕರು ಹೇಳಿದ್ದಾರೆ. ಅಲ್ಲದೇ ಮೊದಲ ತ್ರೈಮಾಸಿಕದ ಎಲ್ಲ ಟಾಪ್ 10 ಸ್ಮಾರ್ಟ್ಪೋನ್ಗಳು 5ಜಿ ಫೋನ್ಗಳಾಗಿರುವುದು ವಿಶೇಷವಾಗಿದೆ.
ಒಇಎಂಗಳು (ಮೂಲ ಉಪಕರಣ ತಯಾರಕರು) ಜೆಎನ್ಎಐ ಸೇರಿದಂತೆ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ತೆಳುವಾದ ಸ್ಮಾರ್ಟ್ಪೋನ್ ತಯಾರಿಸುವತ್ತ ಗಮನ ಹರಿಸುತ್ತಿರುವುದರಿಂದ ಮುಂಬರುವ ಸಮಯದಲ್ಲಿ ಟಾಪ್ 10 ಹೆಚ್ಚು ಮಾರಾಟವಾಗುವ ಸ್ಮಾರ್ಟ್ಫೋನ್ಗಳು ಒಟ್ಟು ಸ್ಮಾರ್ಟ್ಫೋನ್ ಮಾರಾಟದಲ್ಲಿ ಹೆಚ್ಚಿನ ಪಾಲು ಪಡೆದುಕೊಳ್ಳುತ್ತಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇದನ್ನೂ ಓದಿ : ಎಐ ತಂತ್ರಜ್ಞಾನ ಬಳಕೆಯಿಂದ ಸಮಯದ ಉಳಿತಾಯ: ಶೇ 94ರಷ್ಟು ವೃತ್ತಿಪರರ ಅಭಿಪ್ರಾಯ - AI in Workplace