ETV Bharat / technology

ಇದು ಆ್ಯಪಲ್ ಇಂಟಲಿಜೆನ್ಸ್​​: ಐಫೋನ್​ನಲ್ಲೂ ಇನ್ಮುಂದೆ ಕೃತಕ ಬುದ್ಧಿಮತ್ತೆ - Apple Intelligence Features

ಐಫೋನ್​ ಬಳಕೆದಾರರು ತಮ್ಮ ಫೋನ್​ ಅಪ್​ಡೇಟ್​ ಮಾಡುವ ಮೂಲಕ ಈ ಹೊಸ ಪೀಚರ್ ಪಡೆಯಬಹುದು.

apple intelligence features introduced by Iphone During WWDC 2024
ಆ್ಯಪಲ್ (Apple inc)
author img

By ETV Bharat Karnataka Team

Published : Jun 14, 2024, 4:23 PM IST

ನವದೆಹಲಿ: ಟೆಕ್​​ ದೈತ್ಯ ಆ್ಯಪಲ್​ ಇದೀಗ ಕೃತಕ ಬುದ್ಧಿಮತ್ತೆ (ಎಐ) ಸಾಧನ ಪರಿಚಯಿಸಿದ್ದು, ಈ ವಿಚಾರವನ್ನು ಆ್ಯಪಲ್​ನ 'ವರ್ಲ್ಡ್​​ವೈಲ್ಡ್ ಡೆವಲಪರ್​ ಕಾನ್ಫರೆನ್ಸ್​ 2024'ರಲ್ಲಿ ಸಂಸ್ಥೆ ತಿಳಿಸಿದೆ. ಇದೀಗ ಐಫೋನ್​ ಬಳಕೆದಾರರು ತಮ್ಮ ಫೋನ್​ ಅಪ್​ಡೇಟ್​ ಮಾಡುವ ಮೂಲಕ ಈ ಹೊಸ ಪೀಚರ್ ಪಡೆಯಬಹುದಾಗಿದೆ. ಇದಕ್ಕೆ ಆ್ಯಪಲ್​​ ಇಂಟಲಿಜೆನ್ಸ್​ (AI) ಎಂದು ನಾಮಕರಣ ಮಾಡಲಾಗಿದೆ.

ಹೊಸ ಪೀಚರ್​​ ಅನ್ನು ಐಫೋನ್​ 15 ಪ್ರೊ ಮತ್ತು 15 ಪ್ರೊ ಮಾಕ್ಸ್​ನಲ್ಲಿ ಬಳಕೆ ಮಾಡಬಹುದು. ಇದರ ಹೊರತಾಗಿ ಐಪಾಡ್​ ಮತ್ತು ಮ್ಯಾಕ್​ ಬಳಕೆದಾರರಿಗೆ ಎಂ1 ಸಿಲಿಕಾನ್​ ಚಿಪ್​ನಲ್ಲಿ ಸಿಗಲಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಕುಪೆರ್ಟಿನೊದಲ್ಲಿ ನಡೆದ ಸಮ್ಮೇಳನದಲ್ಲಿ ಸಂಸ್ಥೆ ಅನೇಕ ಫೀಚರ್‌ಗಳನ್ನು​ ಪರಿಚಯಿಸಿದೆ.

ಏನಿದು ಆ್ಯಪಲ್​ ಇಂಟಿಲಿಜೆನ್ಸ್?​: ಆ್ಯಪಲ್​​ ಇಂಟಿಲಿಜೆನ್ಸ್​​ ಎಂಬುದು ಐಫೋನ್​, ಐಪಾಡ್​ ಮತ್ತು ಮ್ಯಾಕ್​ ವಿನ್ಯಾಸಕ್ಕೆ ಬಳಕೆ ಮಾಡಬಹುದಾದ ವೈಯಕ್ತಿಕ ಬುದ್ಧಿಮತ್ತೆ. ತನ್ನ ಕಟ್ಟುನಿಟ್ಟಿನ ಗೌಪ್ಯತಾ ಮಾನದಂಡಗಳಲ್ಲಿ ಯಾವುದೇ ರಾಜಿಯಾಗದೇ ವೈಯಕ್ತಿಕ ಸುಧಾರಣಾ ಅಂಶಗಳನ್ನು ಆ್ಯಪಲ್​ ಇಂಟೆಲಿಜೆನ್ಸ್ ನಡೆಸಲಿದೆ.

ಈ ಸೌಲಭ್ಯ ಪಡೆಯುವುದು ಹೇಗೆ?: ಪ್ರಸ್ತುತ ಆ್ಯಪಲ್​​ ಇಂಟಲಿಜೆನ್ಸ್​​ ಫೀಚರ್​​ಗೆ ಚಾಲನೆ ನೀಡಲಾಗಿದೆ. ಈ ಫೀಚರ್ ಕಳೆದ ವರ್ಷದಿಂದಲೇ ​iOS18, iPadOS18 and Mac Sequoiaನಲ್ಲಿ ಲಭ್ಯವಿದೆ.​ iOS18 ಆಪರೇಟಿಂಗ್​ ಸಿಸ್ಟಂ ಮೂಲಕ ಬಳಕೆದಾರರು ಐ ಫೋನ್​ನಲ್ಲಿ ಪಡೆಯಬಹುದಾಗಿದೆ.

ಈ ಆಪರೇಟಿಂಗ್​ ಸಿಸ್ಟಂ ಮೂಲಕ ಹೋಮ್​ ಸ್ಕ್ರೀನ್​, ಲಾಕ್​ ಸ್ಕ್ರೀನ್​ ಮತ್ತು ಕಂಟ್ರೋಲ್​ ಸೆಂಟರ್​​ ಮರು ವಿನ್ಯಾಸ ಮಾಡುವ ಸೌಲಭ್ಯದೊಂದಿಗೆ ಬಳಕೆದಾರರು ಪಡೆಯಬಹುದು. ಆ್ಯಂಡ್ರಾಯ್ಡ್​​ ಬಳಕೆದಾರರು ಈ ಫೀಚರ್​ ಅನ್ನು ಹಲವು ವರ್ಷದಿಂದ ಬಳಸುತ್ತಿದ್ದು, ಆ್ಯಪಲ್​​ ಬಳಕೆದಾರರಿಗಿದು ಮೊದಲ ಹೊಸ ಬದಲಾವಣೆಯಾಗಿದೆ. ಇದೀಗ ಆ್ಯಪಲ್​​ ಬಳಕೆದಾರರು ಹೋಮ್​ಸ್ಕ್ರೀನ್​ನ ಐಕಾನ್​ಗಳ ಸ್ಥಳ ಮತ್ತು ಅವುಗಳ ಬಣ್ಣ ಬದಲಾಯಿಸಬಹುದು.

ಗ್ರಾಹಕಸ್ನೇಹಿ ಫೀಚರ್​: ಹೊಸ ಫೀಚರ್​ ಪರಿಚಯದ ಬಳಿಕ ಇದೀಗ ಐಫೋನ್​ ಬಳಕೆದಾರರು ಕಾಲ್​ ರೆಕಾರ್ಡಿಂಗ್​ ಕೂಡ ಮಾಡಬಹುದು. ಇದರ ಜೊತೆಗೆ ಸಂದೇಶ ಕಳುಹಿಸಲು ಸಮಯ ನಿಗದಿ ಮಾಡಬಹುದು. ಜೊತೆಗೆ, ಫೋನ್​ ಚಾರ್ಚಿಂಗ್​ ಸಮಯ, ಸ್ಯಾಟಲೈಟ್​​ ಮೂಲಕ ಸಂದೇಶ ರವಾನೆ, ಫೇಸ್​ ಐಡಿ ಲಾಕ್​ ಆಪ್​, ಎಮೋಜಿ ಸೃಷ್ಟಿ ಮತ್ತು ಆ್ಯಪ್​ ಬಣ್ಣ ಬದಲಾವಣೆಯಲ್ಲೂ ಕೂಡ ಮಾಡಬಹುದು.

ಅನಗತ್ಯ ಬ್ಯಾಗ್ರೌಂಡ್​ ತೆಗೆಯಬಹುದು: ಆ್ಯಪಲ್​​ ಬಳಕೆದಾರರು ಇದೀಗ ತಮ್ಮ ಹೊಸ ಕ್ಲೀನ್​ ಅಪ್​ ಸಾಧನದ ಮೂಲಕ ಇಮೇಜ್​ನಲ್ಲಿನ ಅನಗತ್ಯ ಅಂಶವನ್ನು ತೆಗೆಯಬಹುದು. ಇದು ಆ್ಯಪಲ್​​ ವಾಚ್‌ನಲ್ಲೂ ಲಭ್ಯವಿದೆ.

ಇದನ್ನೂ ಓದಿ: ನನ್ನ ಕಂಪನಿಗಳಿಂದ ಆ್ಯಪಲ್​ನ ಎಲ್ಲ ಸಾಧನಗಳನ್ನು ನಿಷೇಧಿಸಲಾಗುವುದು": ಎಲೋನ್​ ಮಸ್ಕ್​ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.