ETV Bharat / technology

ಆಪಲ್​ನ ಹೊಸ ಮುಖ್ಯ ಹಣಕಾಸು ಅಧಿಕಾರಿಯಾಗಿ ಮತ್ತೋರ್ವ ಭಾರತೀಯ ವ್ಯಕ್ತಿ ಆಯ್ಕೆ - Apple Appoints New CFO

author img

By ETV Bharat Tech Team

Published : Aug 27, 2024, 5:19 PM IST

ಆಪಲ್ ತನ್ನ ಹೊಸ ಮುಖ್ಯ ಹಣಕಾಸು ಅಧಿಕಾರಿಯಾಗಿ ಕೆವನ್ ಪರೇಖ್ ಅವರನ್ನು ನೇಮಿಸಿದೆ. ಪ್ರಸ್ತುತ ಸಿಎಫ್‌ಒ ಲುಕಾ ಮೇಸ್ತ್ರಿ ಅವರನ್ನು ಕಂಪನಿ ಮತ್ತೊಂದು ವಿಭಾಗಕ್ಕೆ ವರ್ಗಾಯಿಸಿದೆ. ಕೇವನ್​ ಅವರು ಇದಕ್ಕೂ ಮೊದಲು ಆಪಲ್​ ಕಂಪನಿಯಲ್ಲಿ ಯಾವ ಕಾರ್ಯ ನಿಭಾಯಿಸುತ್ತಿದ್ದರು ಎಂಬುದರ ಮಾಹಿತಿ ಇಲ್ಲಿದೆ..

APPLE NEW CFO  CFO INDIAN ORIGIN KEVAN PAREKH  APPLE CEO TIM COOK  APPLE OLD CFO MAESTRI
ಆಪಲ್​ನ ಹೊಸ ಮುಖ್ಯ ಹಣಕಾಸು ಅಧಿಕಾರಿಯಾಗಿ ಭಾರತೀಯ ಮೂಲದ ವ್ಯಕ್ತಿ ಆಯ್ಕೆ (IANS Photos)

ಕ್ಯುಪರ್ಟಿನೊ (ಕ್ಯಾಲಿಫೋರ್ನಿಯಾ): ಆಪಲ್ ತನ್ನ ಹೊಸ ಮುಖ್ಯ ಹಣಕಾಸು ಅಧಿಕಾರಿಯಾಗಿ ಭಾರತೀಯ ಮೂಲದ ಕೆವನ್ ಪರೇಖ್ ಅವರನ್ನು ನೇಮಕ ಮಾಡಿದೆ. ಅಷ್ಟೇ ಅಲ್ಲ, ಕೆವನ್​ ಅವರು ಟೆಕ್ ದೈತ್ಯದಲ್ಲಿ ಕಾರ್ಯನಿರ್ವಾಹಕ ತಂಡವನ್ನು ಸಹ ಸೇರಿಕೊಳ್ಳಲಿದ್ದಾರೆ. ಪ್ರಸ್ತುತ ಸಿಎಫ್‌ಒ ಲುಕಾ ಮೇಸ್ತ್ರಿ ಅವರು 2025 ಜನವರಿ 1ರಿಂದ ಮತ್ತೊಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಆಪಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಒಂದು ದಶಕಕ್ಕೂ ಹೆಚ್ಚು ಕಾಲ, ಕೇವನ್ ಆಪಲ್‌ನ ಹಣಕಾಸು ನಾಯಕತ್ವದ ತಂಡದ ಅನಿವಾರ್ಯ ಸದಸ್ಯರಾಗಿದ್ದಾರೆ ಮತ್ತು ಅವರು ಕಂಪನಿಯನ್ನು ಒಳಗೆ ಮತ್ತು ಹೊರಗೆ ಅರ್ಥ ಮಾಡಿಕೊಂಡಿದ್ದಾರೆ. ಅವರ ತೀಕ್ಷ್ಣವಾದ ಬುದ್ಧಿಶಕ್ತಿ, ಬುದ್ಧಿವಂತ ತೀರ್ಪು ಮತ್ತು ಆರ್ಥಿಕ ತೇಜಸ್ಸು ಅವರನ್ನು ಆಪಲ್‌ನ ಮುಂದಿನ ಸಿಎಫ್‌ಒ ಆಗಲು ಪರಿಪೂರ್ಣ ಆಯ್ಕೆಯನ್ನಾಗಿ ಮಾಡುತ್ತದೆ ಎಂದು ಆಪಲ್ ಸಿಇಒ ಟಿಮ್ ಕುಕ್ ಹೇಳಿದರು.

ಪರೇಖ್ ಅವರಿಗೆ ವಿಶ್ವದಾದ್ಯಂತ ಮಾರಾಟ, ಚಿಲ್ಲರೆ ಮತ್ತು ಮಾರ್ಕೆಟಿಂಗ್ ಫೈನಾನ್ಸ್ ಅನ್ನು ಮುನ್ನಡೆಸಿರುವ ಅನುಭವ ಇದೆ. ಅವರು ತಮ್ಮ ಅಧಿಕಾರಾವಧಿಯನ್ನು ಆಪಲ್‌ನ ಉತ್ಪನ್ನ ಮಾರ್ಕೆಟಿಂಗ್, ಇಂಟರ್ನೆಟ್ ಮಾರಾಟ ಮತ್ತು ಸೇವೆಗಳು, ಎಂಜಿನಿಯರಿಂಗ್ ತಂಡಗಳನ್ನು ಮುನ್ನಡೆಸಿದ್ದಾರೆ ಎಂದು ಕುಕ್​ ತಿಳಿಸಿದ್ದಾರೆ.

ಆಪಲ್ ಸೇರುವ ಮೊದಲು, ಪರೇಖ್ ಅವರು ಥಾಮ್ಸನ್ ರಾಯಿಟರ್ಸ್ ಮತ್ತು ಜನರಲ್ ಮೋಟಾರ್ಸ್‌ನಲ್ಲಿ ವಿವಿಧ ಹಿರಿಯ ನಾಯಕತ್ವದ ಪಾತ್ರಗಳನ್ನು ವಹಿಸಿದ್ದರು. ಅಲ್ಲಿ ಅವರು ವ್ಯಾಪಕವಾದ ಜಾಗತಿಕ ಅನುಭವವನ್ನು ಸಹ ಹೊಂದಿದ್ದರು. ಮಿಚಿಗನ್ ವಿಶ್ವವಿದ್ಯಾನಿಲಯದಲ್ಲಿ ಅವರು ಎಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಕಾಗೋ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿದ್ದರು. ಪರೇಖ್ 11 ವರ್ಷಗಳಿಂದ ಆಪಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅವರು ಹಣಕಾಸು ಯೋಜನೆ ಮತ್ತು ವಿಶ್ಲೇಷಣೆ, ಜಿ&ಎ ಮತ್ತು ಹಣಕಾಸು ಪ್ರಯೋಜನಗಳು, ಹೂಡಿಕೆದಾರರ ಸಂಬಂಧಗಳು ಮತ್ತು ಮಾರುಕಟ್ಟೆ ಸಂಶೋಧನೆಯ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ.

ಇನ್​ಫಾರ್ಮೇಶನ್​ ವ್ಯವಸ್ಥೆಗಳು ಮತ್ತು ತಂತ್ರಜ್ಞಾನ, ಇನ್​ಫಾರ್ಮೇಶನ್ ಭದ್ರತೆ, ರಿಯಲ್ ಎಸ್ಟೇಟ್ ಮತ್ತು ಅಭಿವೃದ್ಧಿ ಸೇರಿದಂತೆ ಕಾರ್ಪೊರೇಟ್ ಸೇವೆಗಳ ತಂಡಗಳನ್ನು ಮೇಸ್ತ್ರಿ ಮುನ್ನಡೆಸುವುದನ್ನು ಮುಂದುವರಿಸಲಿದ್ದಾರೆ. ದೀರ್ಘಾವಧಿಯವರೆಗೆ ಆಪಲ್​ ಅನ್ನು ನಿರ್ವಹಿಸುವಲ್ಲಿ ಮೇಸ್ತ್ರಿ ಅಸಾಮಾನ್ಯ ಪಾಲುದಾರರಾಗಿದ್ದಾರೆ. ಕಂಪನಿಯ ಆರ್ಥಿಕ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಮತ್ತು ಮುನ್ನಡೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಷೇರುದಾರರೊಂದಿಗೆ ತೊಡಗಿಸಿಕೊಂಡಿದಲ್ಲದೇ ಅವರು ಆಪಲ್‌ನ ಪ್ರತಿಯೊಂದು ಭಾಗದಲ್ಲೂ ಆರ್ಥಿಕ ಶಿಸ್ತನ್ನು ತುಂಬಿದ್ದಾರೆ ಎಂದು ಆಪಲ್ ಸಿಇಒ ಟಿಮ್ ಕುಕ್ ಅವರು ಮೇಸ್ತ್ರಿ ಅನ್ನು ಹೊಗಳಿದರು.

ವಿಶ್ವದ ಅತ್ಯಂತ ನವೀನ ಮತ್ತು ಮೆಚ್ಚುಗೆ ಪಡೆದ ಕಂಪನಿಗೆ ಸೇವೆ ಸಲ್ಲಿಸಲು ಮತ್ತು ಟಿಮ್ ಕುಕ್‌ನಂತ ಸ್ಫೂರ್ತಿದಾಯಕ ನಾಯಕನ ಜೊತೆಯಲ್ಲಿ ಕೆಲಸ ಮಾಡಲು ಇದು ನನ್ನ ವೃತ್ತಿಪರ ಜೀವನದ ದೊಡ್ಡ ಅದೃಷ್ಟ ಎಂದು ಮೇಸ್ತ್ರಿ ಹೇಳಿದರು.

ಸಿಎಫ್‌ಒ ಆಗಿದ್ದಾಗ ಮೇಸ್ತ್ರಿ ಅವರು ಅಗತ್ಯ ಹೂಡಿಕೆಗಳನ್ನು ಸಕ್ರಿಯಗೊಳಿಸಿದರು ಮತ್ತು ದೃಢವಾದ ಆರ್ಥಿಕ ಶಿಸ್ತನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಹೀಗಾಗಿ ಕಂಪನಿಯ ಆದಾಯವನ್ನು ದ್ವಿಗುಣಗೊಳಿಸುವುದಕ್ಕೆ ಸಹಾಯವಾಗಿದೆ. ಸೇವೆಗಳ ಆದಾಯವು ಐದು ಪಟ್ಟು ಹೆಚ್ಚು ಬೆಳೆದಿದೆ.

ಓದಿ: ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ INS​​​​​ ಅರಿಘಾಟ್​: ಈ ಜಲಾಂತರ್ಗಾಮಿಯ ವಿಶೇಷತೆ ಏನು ಗೊತ್ತೆ? - INS Arighat submarine

ETV Bharat Logo

Copyright © 2024 Ushodaya Enterprises Pvt. Ltd., All Rights Reserved.