ETV Bharat / technology

ಆಲ್ಫಾಫೋಲ್ಡ್ 3: ಮಾನವ ಅಣುಗಳ ರಚನೆ ಊಹಿಸಬಲ್ಲ ಎಐ ತಯಾರಿಸಿದ ಗೂಗಲ್ - ARTIFICIAL INTELLIGENCE

ಪ್ರೋಟೀನ್​ಗಳ ರಚನೆ ಮತ್ತು ಎಲ್ಲಾ ಜೀವಿಗಳ ಅಣುಗಳ ರಚನೆಯನ್ನು ಊಹಿಸುವ ಸಾಮರ್ಥ್ಯದ ಕೃತಕ ಬುದ್ಧಿಮತ್ತೆ ಸಾಧನವೊಂದನ್ನು ಗೂಗಲ್ ತಯಾರಿಸಿದೆ.

author img

By ETV Bharat Karnataka Team

Published : May 9, 2024, 5:28 PM IST

AlphaFold 3
AlphaFold 3 ((image : ians))

ನವದೆಹಲಿ: ಗೂಗಲ್​​ನ ಕೇಂದ್ರೀಯ ಕೃತಕ ಬುದ್ಧಿಮತ್ತೆ ಪ್ರಯೋಗಾಲಯವಾದ ಗೂಗಲ್ ಡೀಪ್ ಮೈಂಡ್ ಬುಧವಾರ ಆಲ್ಫಾಫೋಲ್ಡ್ 3 ಎಂಬ ಹೊಸ ಮತ್ತು ನವೀಕರಿಸಿದ ಕೃತಕ ಬುದ್ಧಿಮತ್ತೆ (ಎಐ) ಮಾದರಿ ಅನಾವರಣಗೊಳಿಸಿದೆ. ಇದು ಪ್ರೋಟೀನ್​ಗಳ ರಚನೆ ಮಾತ್ರವಲ್ಲದೇ ಎಲ್ಲ ಜೀವಿಗಳ ಅಣುಗಳ ರಚನೆಯನ್ನು ಊಹಿಸುವ ಸಾಮರ್ಥ್ಯ ಹೊಂದಿದೆ.

ಆಲ್ಫಾಫೋಲ್ಡ್ 3 ಸೃಷ್ಟಿಸಿದ ಫಲಿತಾಂಶಗಳು ವೈದ್ಯಕೀಯ, ಕೃಷಿಶಾಸ್ತ್ರ, ವಸ್ತುಗಳ ವಿಜ್ಞಾನ ಮತ್ತು ಔಷಧ ಅಭಿವೃದ್ಧಿ ವಲಯದ ಸಂಶೋಧಕರಿಗೆ ತಮ್ಮ ಆವಿಷ್ಕಾರಗಳನ್ನು ಪರೀಕ್ಷಿಸಲು ಸಹಾಯಕವಾಗಲಿವೆ ಎಂದು ಕಂಪನಿ ಹೇಳಿದೆ.

"ಇದೊಂದು ದೊಡ್ಡ ಮೈಲಿಗಲ್ಲಾಗಿದೆ. ಜೀವಶಾಸ್ತ್ರವು ಒಂದು ಕ್ರಿಯಾತ್ಮಕ ವ್ಯವಸ್ಥೆಯಾಗಿದೆ ಮತ್ತು ವಿವಿಧ ಅಣುಗಳ ನಡುವಿನ ಪರಸ್ಪರ ಕ್ರಿಯೆಗಳ ಮೂಲಕ ಜೀವಶಾಸ್ತ್ರದ ಗುಣಲಕ್ಷಣಗಳು ಹೇಗೆ ಹೊರಹೊಮ್ಮುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ"ಎಂದು ಗೂಗಲ್ ಡೀಪ್ ಮೈಂಡ್ ಮತ್ತು ಆಲ್ಫಾಫೋಲ್ಡ್ 3 ಅನ್ನು ಸಹ - ಅಭಿವೃದ್ಧಿಪಡಿಸಿದ ಸ್ಪಿನ್ - ಆಫ್ ಮತ್ತು ಐಸೊಮಾರ್ಫಿಕ್ ಲ್ಯಾಬ್ಸ್​ನ ಡೆಮಿಸ್ ಹಸ್ಸಾಬಿಸ್ ಹೇಳಿದರು.

ಆಲ್ಫಾಫೋಲ್ಡ್ ನ ಹಿಂದಿನ ಆವೃತ್ತಿಗಳು ಪ್ರೋಟೀನ್​ಗಳ ರಚನೆಗಳನ್ನು ಮಾತ್ರ ಊಹಿಸಿದ್ದವು. ಆಲ್ಫಾಫೋಲ್ಡ್ 3 ಅದನ್ನು ಮೀರಿಸಿ ಡಿಎನ್ಎ, ಆರ್​ಎನ್ಎ ಮತ್ತು ಲಿಗಾಂಡ್​ಗಳು ಎಂದು ಕರೆಯಲ್ಪಡುವ ಸಣ್ಣ ಅಣುಗಳ ಮಾಡೆಲ್​ಗಳನ್ನು ಸೃಷ್ಟಿಸಬಲ್ಲವು. ಹೀಗಾಗಿ ಈ ಮಾಡೆಲ್​ಗಳು ವೈಜ್ಞಾನಿಕ ಬಳಕೆಗಾಗಿ ಮೊದಲಿಗಿಂತ ಹೆಚ್ಚು ಉಪಯುಕ್ತವಾಗಲಿವೆ.

ಆಲ್ಫಾಫೋಲ್ಡ್ 3 ಹೇಗೆ ಕಾರ್ಯನಿರ್ವಹಿಸುತ್ತದೆ?: ಅಣುಗಳ ಪಟ್ಟಿಯನ್ನು ಇನ್​ಪುಟ್ ಮಾಡಿದರೆ, ಆಲ್ಫಾಫೋಲ್ಡ್ 3 ಅವುಗಳ ಜಂಟಿ 3 ಡಿ ರಚನೆಯನ್ನು ಉತ್ಪಾದಿಸುತ್ತದೆ ಹಾಗೂ ಇವೆಲ್ಲವೂ ಹೇಗೆ ಒಟ್ಟಿಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಬಹಿರಂಗಪಡಿಸುತ್ತದೆ. ಇದು ಪ್ರೋಟೀನ್​ಗಳು, ಡಿಎನ್ಎ ಮತ್ತು ಆರ್​ಎನ್ಎಗಳಂತಹ ದೊಡ್ಡ ಜೈವಿಕ ಅಣುಗಳ ಮತ್ತು ಸಣ್ಣ ಅಣುಗಳ ಮಾಡೆಲ್ ಗಳನ್ನು ತಯಾರಿಸುತ್ತದೆ. ಇದನ್ನು ಲಿಗಾಂಡ್​ಗಳು ಎಂದೂ ಕರೆಯಲಾಗುತ್ತದೆ. ಇದು ಅನೇಕ ಔಷಧಿಗಳನ್ನು ಒಳಗೊಂಡಿರುವ ವರ್ಗವಾಗಿದೆ. ಆಲ್ಫಾಫೋಲ್ಡ್ 3 ಜೀವಕೋಶಗಳ ಆರೋಗ್ಯಕರ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಈ ಅಣುಗಳಿಗೆ ರಾಸಾಯನಿಕ ಮಾರ್ಪಾಡುಗಳನ್ನು ಮಾದರಿ ಮಾಡಬಹುದು, ಅದು ಅಡ್ಡಿಯಾದಾಗ ರೋಗಕ್ಕೆ ಕಾರಣವಾಗಬಹುದು.

ಆಲ್ಫಾಫೋಲ್ಡ್ 3 ನ ಸಾಮರ್ಥ್ಯಗಳು: ಮುಂದಿನ ಪೀಳಿಗೆಯ ವಾಸ್ತುಶಿಲ್ಪ ಅಳವಡಿಸಿರುವುದರಿಂದ ಮತ್ತು ತರಬೇತಿ ನೀಡಿರುವುದರಿಂದ ಆಲ್ಫಾಫೋಲ್ಡ್ 3 ನ ಸಾಮರ್ಥ್ಯ ಅಪಾರವಾಗಿವೆ. ಅದು ಈಗ ಜೀವಿಯೊಂದರ ಎಲ್ಲಾ ಅಣುಗಳನ್ನು ಒಳಗೊಂಡಿದೆ. ಮಾದರಿಯ ಮುಖ್ಯಭಾಗದಲ್ಲಿ ಇವೊಫಾರ್ಮರ್ ಮಾಡ್ಯೂಲ್​​​​ನ ಸುಧಾರಿತ ಆವೃತ್ತಿ ಇದೆ. ಇವೊಫಾರ್ಮರ್ ಇದು ಆಲ್ಫಾಫೋಲ್ಡ್ 2 ನ ಕಾರ್ಯಕ್ಷಮತೆಗೆ ಆಧಾರವಾಗಿರುವ ಡೀಪ್ ಲರ್ನಿಂಗ್​​ನ ಆರ್ಕಿಟೆಕ್ಚರ್ ಆಗಿದೆ. ಇನ್​ಪುಟ್​ಗಳನ್ನು ಸಂಸ್ಕರಿಸಿದ ನಂತರ, ಆಲ್ಫಾಫೋಲ್ಡ್ 3 ತನ್ನ ಊಹೆಗಳನ್ನು ವಿಸರಣಾ ನೆಟ್ ವರ್ಕ್ ಬಳಸಿ ಒಟ್ಟುಗೂಡಿಸುತ್ತದೆ. ಇದು ಎಐ ಇಮೇಜ್ ಜನರೇಟರ್​ಗಳಲ್ಲಿ ಕಂಡುಬರುವಂತೆಯೇ ಇರುತ್ತದೆ. ಪ್ರಸರಣ ಪ್ರಕ್ರಿಯೆಯು ಪರಮಾಣುಗಳ ಮೋಡದಿಂದ ಪ್ರಾರಂಭವಾಗುತ್ತದೆ ಮತ್ತು ಅನೇಕ ಹಂತಗಳ ನಂತರ ಅಂತಿಮವಾಗಿ ಅತ್ಯಂತ ನಿಖರವಾದ ಆಣ್ವಿಕ ರಚನೆಯನ್ನು ತಯಾರಿಸುತ್ತದೆ.

ಇದನ್ನೂ ಓದಿ : ಅತ್ಯಧಿಕ ಮಾರಾಟವಾದ ಸ್ಮಾರ್ಟ್​ಫೋನ್ ಆಗಿ ಹೊರಹೊಮ್ಮಿದ ಆ್ಯಪಲ್​ iPhone 15 Pro Max - APPLES IPHONE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.