ETV Bharat / technology

AI ಈ ಹಿಂದೆ ಅಂದುಕೊಂಡಷ್ಟು ನೌಕರಿಗಳನ್ನು ಕಸಿಯದು: ವರದಿ - ಉದ್ಯೋಗಗ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಈ ಹಿಂದೆ ಅಂದುಕೊಂಡಷ್ಟು ನೌಕರಿಗಳನ್ನು ಕಸಿಯಲಾರದು ಎಂದು ಹೊಸ ಅಧ್ಯಯನವೊಂದು ಹೇಳಿದೆ.

AI won't take as many jobs as expected: Study

author img

By ETV Bharat Karnataka Team

Published : Jan 23, 2024, 6:39 PM IST

ಸ್ಯಾನ್ ಫ್ರಾನ್ಸಿಸ್ಕೋ : ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಹತ್ತಿರ ಭವಿಷ್ಯದಲ್ಲಿ ಸಾಕಷ್ಟು ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂದು ವಿಶ್ವದಾದ್ಯಂತದ ಸಂಶೋಧಕರು ನಿರೀಕ್ಷಿಸುತ್ತಿದ್ದರೆ, ಎಐ ನಿರೀಕ್ಷಿಸಿದಷ್ಟು ಉದ್ಯೋಗಗಳನ್ನು ಕಸಿಯಲಾರದು ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಎಂಐಟಿಯ ಕಂಪ್ಯೂಟರ್ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲ್ಯಾಬೊರೇಟರಿ (ಸಿಎಸ್ಎಐಎಲ್) ಇತ್ತೀಚೆಗೆ ಎಐ ಮಾನವರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಗಳನ್ನು ನಿರ್ವಹಿಸಬಹುದೇ ಮತ್ತು ಮಾನವ ಶ್ರಮವನ್ನು ಎಐನೊಂದಿಗೆ ಬದಲಾಯಿಸುವ ವೆಚ್ಚ ಅತ್ಯಧಿಕವಾಗಿದೆಯಾ ಎಂಬ ಬಗ್ಗೆ ಸಂಶೋಧನೆ ನಡೆಸಿದೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಎಐ ಅನುಷ್ಠಾನದ ವಿಶಾಲ ಪರಿಣಾಮಗಳನ್ನು ಅಧ್ಯಯನವು ಗಣನೆಗೆ ತೆಗೆದುಕೊಂಡಿದೆ.

ಕಂಪ್ಯೂಟರ್ ವಿಷನ್ ಎಐ ಪ್ರಸ್ತುತ ಕೃಷಿಯನ್ನು ಹೊರತುಪಡಿಸಿ ಅಮೆರಿಕದ ಆರ್ಥಿಕತೆಯಲ್ಲಿ ಕಾರ್ಮಿಕರ ವೇತನದ ಶೇಕಡಾ 1.6 ರಷ್ಟನ್ನು ರೂಪಿಸುವ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದಾಗ್ಯೂ ಆ ವೇತನಗಳಲ್ಲಿ ಕೇವಲ 23 ಪ್ರತಿಶತ, ಅಂದರೆ ಇಡೀ ಆರ್ಥಿಕತೆಯ 0.4 ಪ್ರತಿಶತಕ್ಕೆ ಸಮನಾಗಿರುವಷ್ಟು ಉದ್ಯೋಗಗಳು ಪ್ರಸ್ತುತ ವೆಚ್ಚದಲ್ಲಿ ಮಾನವ ಕಾರ್ಮಿಕರನ್ನು ನೇಮಿಸಿಕೊಳ್ಳುವ ಬದಲು ಸ್ವಯಂಚಾಲಿತಗೊಳಿಸಲು ಅಗ್ಗವಾಗಿರುತ್ತವೆ.

"ಒಟ್ಟಾರೆಯಾಗಿ ಎಐನಿಂದ ಉದ್ಯೋಗ ಬದಲಾವಣೆಯು ಗಣನೀಯವಾಗಿರುತ್ತದೆ, ಆದರೆ ಕ್ರಮೇಣವಾಗಿರುತ್ತದೆ ಎಂದು ನಮ್ಮ ಸಂಶೋಧನೆಗಳು ಸೂಚಿಸುತ್ತವೆ. ಹೀಗಾಗಿ ನಿರುದ್ಯೋಗ ಪರಿಣಾಮಗಳನ್ನು ತಗ್ಗಿಸಲು ಸರ್ಕಾರದ ನೀತಿ ಬದಲಾವಣೆಗೆ ಮತ್ತು ಮರು ತರಬೇತಿಗೆ ಅವಕಾಶವಿದೆ" ಎಂದು ಅವರು ಹೇಳಿದರು.

ಈಗಿರುವ ಯಾವೆಲ್ಲ ಕೆಲಸಗಳನ್ನು ಕಂಪ್ಯೂಟರ್ ದೃಷ್ಟಿಯಿಂದ ಬದಲಾಯಿಸಬಹುದು ಎಂಬುದನ್ನು ನಿರ್ಧರಿಸಲು ಸಂಶೋಧಕರು ಉದ್ಯೋಗಿಗಳನ್ನು ಸಮೀಕ್ಷೆ ಮಾಡಿದರು. ಇದರ ನಂತರ ವೆಚ್ಚ ಪರಿಣಾಮಕಾರಿತ್ವ ನಿರ್ಣಯಿಸಲು ಮಾದರಿಗಳನ್ನು ಅಭಿವೃದ್ಧಿಪಡಿಸಿದರು. ಕಾರ್ಮಿಕರ ಬದಲಿಗೆ ಎಐ ದೃಶ್ಯ ಪತ್ತೆ ಹಚ್ಚುವಿಕೆಯನ್ನು (AI visual detection) ಬಳಸುವುದು ಹೇಳಿಕೊಳ್ಳುವಷ್ಟು ಉಪಯುಕ್ತವಾಗಿಲ್ಲ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ.

ಎಐನ ವೆಚ್ಚವು ಕಾಲಾನಂತರದಲ್ಲಿ ಕಡಿಮೆ ಆಗುತ್ತದೆ ಎಂಬುದನ್ನು ಅಧ್ಯಯನ ಒಪ್ಪಿಕೊಂಡಿದೆ. ಆದರೆ, ಕೆಲವರು ಸೂಚಿಸಿದಂತೆ ತ್ವರಿತವಾಗಿ ಈ ವೆಚ್ಚ ಕಡಿಮೆಯಾಗುವುದು ಸಾಧ್ಯವಿಲ್ಲ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ. ಈ ರೀತಿಯ ವೃತ್ತಿಗಳ ಮೇಲೆ ಎಐ ಪ್ರಮುಖ ಪರಿಣಾಮ ಬೀರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಕೃತಕ ಬುದ್ಧಿಮತ್ತೆ (ಎಐ) ಎಂಬುದು ಐತಿಹಾಸಿಕವಾಗಿ ಮನುಷ್ಯನು ಮಾತ್ರ ಮಾಡಬಹುದಾದ ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಇರುವ ಕಂಪ್ಯೂಟರ್ ವ್ಯವಸ್ಥೆಗಳನ್ನು ಸೂಚಿಸುತ್ತದೆ, ಉದಾಹರಣೆಗೆ ತಾರ್ಕಿಕ, ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಥವಾ ಸಮಸ್ಯೆಗಳನ್ನು ಪರಿಹರಿಸುವುದು ಇದರಲ್ಲಿ ಸೇರಿವೆ.

ಇದನ್ನೂ ಓದಿ : ದಾಖಲೆಯ 2.5 ಲಕ್ಷ ಪ್ರೀ - ಬುಕಿಂಗ್ ಪಡೆದ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​24

ETV Bharat Logo

Copyright © 2024 Ushodaya Enterprises Pvt. Ltd., All Rights Reserved.