ETV Bharat / technology

"8 ದಿನಗಳ ಮಿಷನ್ 8 ತಿಂಗಳಾಗಿಯೂ ಬದಲಾಗಬಹುದು": ವರ್ಷಕ್ಕೂ ಹೆಚ್ಚು ದಿನ ಬಾಹ್ಯಾಕಾಶದಲ್ಲಿ ಕಳೆದ ಗಗನಯಾತ್ರಿಗಳಿವರು! - Astronauts spent most days in space - ASTRONAUTS SPENT MOST DAYS IN SPACE

ಬೋಯಿಂಗ್​ನ ಸ್ಟಾರ್​ಲೈನರ್​ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ಹಾಗೂ ಅಮೆರಿಕಾದ ಬ್ಯಾರಿ ಬುಚ್​ ವಿಲ್ಮೋರ್​ ನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ತಿಂಗಳು ಎರಡಾದರೂ ಇನ್ನೂ ಬಾಹ್ಯಾಕಾಶದಲ್ಲೇ ಇದ್ದಾರೆ.

Astronauts in space
ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು (ETV Bharat)
author img

By ETV Bharat Karnataka Team

Published : Aug 9, 2024, 11:10 AM IST

8 ದಿನಗಳ ಮಿಷನ್​ಗಾಗಿ ಬಾಹ್ಯಾಕಾಶ ಪ್ರಯೋಗಾಲಯಕ್ಕೆ ತೆರಳಿದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್​ ಹಾಗೂ ಬ್ಯಾರಿ ಬುಚ್​ ವಿಲ್ಮೋರ್​ 8 ತಿಂಗಳ ಕಾಲ ಅಲ್ಲೇ ಉಳಿಯುವ ಸಂದರ್ಭ ಬರಬಹುದು ಎಂದು ನಾಸಾ ಬುಧವಾರ ತಿಳಿಸಿದೆ. 10 ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್​ನ ಸ್ಟಾರ್​ಲೈನರ್​ ಮೂಲಕ ಇಬ್ಬರು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. ಒಂದು ವೇಳೆ ಅವರು ತೆರಳಿರುವ ಬಾಹ್ಯಾಕಾಶ ನೌಕೆ ಸ್ಟಾರ್​ಲೈನರ್​ ಭೂಮಿಗೆ ಹಿಂತಿರುಗಲು ಇನ್ನೂ ಅಸುರಕ್ಷಿತ ಎಂದು ಕಂಡುಬಂದರೆ, ಅವರು 2025ರ ಫೆಬ್ರವರಿಯಲ್ಲಿ ಹೊಸ ಬಾಹ್ಯಾಕಾಶ ನೌಕೆ ಸ್ಪೇಸ್​ ಎಕ್ಸ್​ನ ಕ್ರ್ಯೂ ಡ್ರ್ಯಾಗನ್​ನಲ್ಲಿ ಹಿಂತಿರುಗಬಹುದು ಎಂದು ನಾಸಾ ಹೇಳಿದೆ.

ಇಬ್ಬರು ಗಗನಯಾತ್ರಿಗಳು ಜೂನ್​ 5 ರಂದು ಬೋಯಿಂಗ್​ ಸಂಸ್ಥೆಯ ಸ್ಟಾರ್​ಲೈನರ್​ ಬಾಹ್ಯಾಕಾಶ ನೌಕೆಯ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಪರೀಕ್ಷಾ ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶ ಪ್ರಯೋಗಾಲಯಕ್ಕೆ ಹೋಗಿ ಎಂಟು ದಿನಗಳಲ್ಲಿ ಹಿಂತಿರುಗುವ ನಿರೀಕ್ಷೆಯಲ್ಲಿ ತೆರಳಿದ್ದರು. ಆದರೆ, ನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್​ ಸೋರಿಕೆಯಿಂದಾಗಿ ಮಿಷನ್​ ಎಲ್ಲವೂ ಅಸ್ತವ್ಯಸ್ತಗೊಂಡಿತು. ಗಗನಯಾತ್ರಿಗಳು ತೆರಳಿ ಎರಡು ತಿಂಗಳುಗಳಾಗಿದ್ದು, ಇನ್ನೂ ನೌಕೆ ಬಾಹ್ಯಾಕಾಶದಲ್ಲಿಯೇ ತೇಲುತ್ತಿದೆ.

ಈ ರೀತಿ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ದೀರ್ಘ ಸಮಯ ಕಳೆದಿರುವುದು ಇದೇ ಮೊದಲೇನಲ್ಲ. ಬಾಹ್ಯಾಕಾಶದಲ್ಲಿ ಅತೀ ಹೆಚ್ಚು ದಿನಗಳನ್ನು ಕಳೆದು ದಾಖಲೆ ನಿರ್ಮಿಸಿರುವ ಗಗನಯಾತ್ರಿಗಳ ಮಾಹಿತಿ ಇಲ್ಲಿದೆ.

ವಲೆರಿ ಪಾಲಿಯಕೋವ್​: ರಷ್ಯಾದ ಗಗನಯಾತ್ರಿ ವಲೆರಿ ಪಾಲಿಯಕೋವ್​ 1994ರ ಜನವರಿಯಿಂದ 1995ರ ಮಾರ್ಚ್​ವರೆಗೆ ಒಂದೇ ಬಾರಿಗೆ ಒಟ್ಟು 438 ದಿನಗಳ ಕಾಲ ಮಿರ್​ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು, ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ್ದಾರೆ.

ಸೆರ್ಗೆ ಅವ್ದೀವ್​: ರಷ್ಯಾದ ಗಗನಯಾತ್ರಿ ಸೆರ್ಗೆ ಅವ್ದೀವ್ ಅವರು​ 1998 ರ ಆಗಸ್ಟ್​ನಿಂದ 1999ರ ಆಗಸ್ಟ್​ವರೆಗೆ ಮಿರ್​ ಬಾಹ್ಯಾಕಾಶ ನಿಲ್ದಾಣದಲ್ಲಿ 379 ದಿನಗಳನ್ನು ಕಳೆದಿದ್ದರು.

ಸೆರ್ಗೆಯ್ ಪ್ರೊಕೊಪಿಯೆವ್, ಡಿಮಿಟ್ರಿ ಪೆಟೆಲಿನ್ ಮತ್ತು ಫ್ರಾನ್ಸಿಸ್ಕೊ ​​​​ರುಬಿಯೊ: ರಷ್ಯಾದ ಗಗನಯಾತ್ರಿಗಳಾದ ಸೆರ್ಗೆಯ್ ಪ್ರೊಕೊಪಿಯೆವ್ ಮತ್ತು ಡಿಮಿಟ್ರಿ ಪೆಟೆಲಿನ್ ಮತ್ತು ಅಮೆರಿಕನ್​ ಗಗನಯಾತ್ರಿ ಫ್ರಾನ್ಸಿಸ್ಕೊ ​​​​ರುಬಿಯೊ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 2022ರಿಂದ 2023ರವರೆಗೆ ಒಂದು ವರ್ಷ ಕಳೆದು ಭೂಮಿಗೆ ಹಿಂತಿರುಗಿದರು. ಸೆರ್ಗೆಯ್ ಪ್ರೊಕೊಪಿಯೆವ್ ಹಾಗೂ ಡಿಮಿಟ್ರಿ ಪೆಟೆಲಿನ್ 370 ದಿನಗಳು, 21 ಗಂಟೆಗಳು ಮತ್ತು 22 ನಿಮಿಷಗಳನ್ನು ಬಾಹ್ಯಾಕಾಶದಲ್ಲಿ ಕಳೆದರು ಎಂದು ರೋಸ್ಕೋಸ್ಮಾಸ್ ಹೇಳಿದೆ. ಫ್ರಾಂಕ್ ರೂಬಿಯೊ 371 ದಿನಗಳ ನಂತರ ಭೂಮಿಗೆ ಮರಳಿದರು.

ವ್ಲಾಡಿಮಿರ್ ಟಿಟೊವ್ ಮತ್ತು ಮೂಸಾ ಮನರೋವ್: ರಷ್ಯಾದ ಗಗನಯಾತ್ರಿಗಳಾದ ವ್ಲಾಡಿಮಿರ್ ಟಿಟೊವ್ ಮತ್ತು ಮೂಸಾ ಮನರೋವ್ ಅವರು ರಷ್ಯಾದ ಮೀರ್ ಬಾಹ್ಯಾಕಾಶ ನಿಲ್ದಾಣದಲ್ಲಿ ಡಿಸೆಂಬರ್ 1987 ರಿಂದ ಡಿಸೆಂಬರ್ 1988 ರವರೆಗೆ ಒಟ್ಟು 365 ದಿನಗಳು, 22 ನಿಮಿಷಗಳನ್ನು ಕಳೆದಿದ್ದಾರೆ.

ವಂಡೆ ಹೇ, ಡುಬ್ರೊವ್: ಯುಎಸ್ ಗಗನಯಾತ್ರಿ ವಂಡೆ ಹೇ ಮತ್ತು ರಷ್ಯಾದ ಗಗನಯಾತ್ರಿ ಡುಬ್ರೊವ್ ಅವರು 355 ದಿನಗಳು ಏಳು ಗಂಟೆಗಳು ಮತ್ತು 45 ನಿಮಿಷಗಳ ಕಾಲ ಗ್ರಹದಿಂದ 150.1 ಮಿಲಿಯನ್ ಮೈಲಿಗಳಷ್ಟು ದೂರ 5,680 ಕಕ್ಷೆಗಳನ್ನು ಸುತ್ತಿದ್ದಾರೆ.

ಸ್ಕಾಟ್ ಕೆಲ್ಲಿ, ಮಿಖಾಯಿಲ್ ಕೊರ್ನಿಯೆಂಕೊ: ಯುಎಸ್ ಗಗನಯಾತ್ರಿ ಸ್ಕಾಟ್ ಕೆಲ್ಲಿ, ಅವರ ರಷ್ಯಾದ ಸಹವರ್ತಿ ಮಿಖಾಯಿಲ್ ಕೊರ್ನಿಯೆಂಕೊ ಜೊತೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 2015ರ ಮಾರ್ಚ್ 27ರಂದು 2016ರ ಮಾರ್ಚ್ 2ರವರೆಗೆ ಒಟ್ಟು 340 ದಿನಗಳನ್ನು ಕಳೆದಿದ್ದಾರೆ.

ಕ್ರಿಸ್ಟಿನಾ ಕೋಚ್: ಅಮೆರಿಕಾದ ಕೋಚ್ ಅವರು 2019ರ ಮಾರ್ಚ್ 14ರಿಂದ 2020ರ ಫೆಬ್ರವರಿ 6ರವೆರೆಗೆ ಒಟ್ಟು 328 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು, ಮಹಿಳೆಯೊಬ್ಬರು ಸುದೀರ್ಘ ಏಕ ಗಗನಯಾನ ಮುಗಿಸಿದವರು ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ. ಜೊತೆಗೆ ಮೊದಲ ಸಂಪೂರ್ಣ ಮಹಿಳಾ ಬಾಹ್ಯಾಕಾಶ ನಡಿಗೆಯಲ್ಲಿ ಅವರು ಭಾಗವಹಿಸಿದ್ದರು.

ಯೂರಿ ರೊಮೆಂಕೊ: ರಷ್ಯಾದ (ಸೋವಿಯತ್) ಗಗನಯಾತ್ರಿ ಯೂರಿ ರೊಮೆಂಕೊ ಬಾಹ್ಯಾಕಾಶದಲ್ಲಿ 326 ದಿನಗಳನ್ನು ಕಳೆದ ದಾಖಲೆ ಹೊಂದಿದ್ದಾರೆ.

ಬಾಹ್ಯಾಕಾಶದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಾನವ ದೇಹಕ್ಕಾಗುವ ಪರಿಣಾಮವೇನು?:

ಸ್ನಾಯು, ಮೂಳೆಗಳ ಮೇಲೆ ಪರಿಣಾಮ: ದೇಹದ ಮೇಲೆ ಗುರುತ್ವಾಕರ್ಷಣೆಯ ಬಲ ಬೀಳದೇ ಇರುವ ಕಾರಣದಿಂದ ಸ್ನಾಯು ಮತ್ತು ಮೂಳೆಗಳ ಶಕ್ತಿ ಕುಂಠಿತಗೊಳ್ಳಲು ಪ್ರಾರಂಭಿಸುತ್ತದೆ. ಕಷ್ಟಪಟ್ಟು ಕೆಲಸ ಮಾಡದೇ ಇರುವುದರಿಂದ ಬೆನ್ನು, ಕುತ್ತಿಗೆ, ಭುಜಗಳ ಸ್ನಾಯುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ತೂಕ ನಷ್ಟ, ದೃಷ್ಟಿಯಲ್ಲಿ ಬದಲಾವಣೆ, ಬಿಳಿ ರಕ್ತಕಣಗಳು ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಇದನ್ನೂ ಓದಿ: ಬಾಹ್ಯಾಕಾಶ ನಿಲ್ದಾಣಕ್ಕೆ ಮರುಪೂರಣ ಸಾಮಗ್ರಿ ಹೊತ್ತ 'ಸಿಗ್ನಸ್​' ನೌಕೆ ಇಂದು ರಾತ್ರಿ ಉಡಾವಣೆ - International Space Station

ETV Bharat Logo

Copyright © 2024 Ushodaya Enterprises Pvt. Ltd., All Rights Reserved.