ETV Bharat / technology

ಸಿಯೋಲ್​ನಲ್ಲಿ ಮುಂದಿನ ಎಐ ಶೃಂಗಸಭೆ: ಕೃತಕ ಬುದ್ಧಿಮತ್ತೆ ಬಳಕೆ, ಸುರಕ್ಷತೆಯ ಬಗ್ಗೆ ಚರ್ಚೆ - AI Seoul Summit

author img

By IANS

Published : May 17, 2024, 4:18 PM IST

ಎಐ ತಂತ್ರಜ್ಞಾನದ ಬಳಕೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಲು ಮುಂದಿನ ವಾರ ದಕ್ಷಿಣ ಕೊರಿಯಾದಲ್ಲಿ ಎಐ ಸುರಕ್ಷತಾ ಶೃಂಗಸಭೆ ನಡೆಯಲಿದೆ.

AI global summit to be held in South Korea next week
AI global summit to be held in South Korea next week (ians)

ಸಿಯೋಲ್/ನವದೆಹಲಿ : ಮುಂದಿನ ಜಾಗತಿಕ ಎಐ ಸುರಕ್ಷತಾ ಶೃಂಗಸಭೆಯು ಮುಂದಿನ ವಾರ ದಕ್ಷಿಣ ಕೊರಿಯಾದಲ್ಲಿ ನಡೆಯಲಿದೆ. ಹೊಸ ಕ್ರಾಂತಿಕಾರಿ ತಂತ್ರಜ್ಞಾನದ ಬಳಕೆ, ಸುರಕ್ಷತೆಗಳ ರೂಪುರೇಷೆಗಳ ಬಗ್ಗೆ ಶೃಂಗದಲ್ಲಿ ಚರ್ಚೆ ನಡೆಯಲಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಯುಕೆಯಲ್ಲಿ ಪ್ರಥಮ 'ಎಐ ಸುರಕ್ಷತಾ ಶೃಂಗಸಭೆ' ನಡೆದಿತ್ತು. ನಂತರ ಡಿಸೆಂಬರ್​ನಲ್ಲಿ ನವದೆಹಲಿಯಲ್ಲಿ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು 29 ರಾಷ್ಟ್ರಗಳ, ಕೃತಕ ಬುದ್ಧಿಮತ್ತೆಯ ಜಾಗತಿಕ ಸಹಭಾಗಿತ್ವ (ಜಿಪಿಎಐ) ಶೃಂಗಸಭೆಯನ್ನು ಉದ್ಘಾಟಿಸಿದ್ದರು. ಭಾರತದ ತಂತ್ರಜ್ಞಾನ ವಲಯವನ್ನು ಸಂಪೂರ್ಣವಾಗಿ ಪರಿವರ್ತನೆ ಮಾಡುವ ಸಾಮರ್ಥ್ಯ ಎಐ ಗೆ ಇದೆ ಎಂದು ಪ್ರಧಾನಿ ಹೇಳಿದ್ದರು.

ಈ ಬಾರಿ ದಕ್ಷಿಣ ಕೊರಿಯಾ ಮತ್ತು ಬ್ರಿಟನ್ ಮುಂದಿನ ವಾರ ಸಿಯೋಲ್​ನಲ್ಲಿ ಜಂಟಿಯಾಗಿ ಎಐ ಶೃಂಗಸಭೆಯನ್ನು ಆಯೋಜಿಸಲಿವೆ ಎಂದು ವಿಜ್ಞಾನ ಸಚಿವಾಲಯ ಶುಕ್ರವಾರ ತಿಳಿಸಿದೆ. 'ಎಐ ಸಿಯೋಲ್ ಶೃಂಗಸಭೆ' ಮಂಗಳವಾರ ಪ್ರಾರಂಭವಾಗಲಿದ್ದು, ಪ್ರಮುಖ ದೇಶಗಳ ನಾಯಕರು ಮತ್ತು ಜಾಗತಿಕ ಟೆಕ್ ಸಂಸ್ಥೆಗಳ ನಾಯಕರು ಭಾಗವಹಿಸಲಿದ್ದಾರೆ ಎಂದು ವಿಜ್ಞಾನ ಮತ್ತು ಐಸಿಟಿ ಸಚಿವಾಲಯ ತಿಳಿಸಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶೃಂಗಸಭೆಯಲ್ಲಿ ರಾಷ್ಟ್ರಗಳು ನಾಯಕರು ಸಂವಾದ ನಡೆಸಲಿದ್ದಾರೆ. 'ಎಲ್ಲರನ್ನೂ ಒಳಗೊಂಡ ಹೊಸ ಸುರಕ್ಷಿತ ಎಐ ತಂತ್ರಜ್ಞಾನದ ಭವಿಷ್ಯದತ್ತ' ಎಂಬ ಥೀಮ್ ಮೇಲೆ ಚರ್ಚೆಗಳು ನಡೆಯಲಿವೆ. ಎಐ ಸುರಕ್ಷತೆ ಮತ್ತು ಎಐನ ಸುಸ್ಥಿರ ಅಭಿವೃದ್ಧಿಯ ಬಗ್ಗೆಯೂ ಚರ್ಚಿಸಲಾಗುವುದು.

19 ದೇಶಗಳ ಸರ್ಕಾರಗಳ ಪ್ರತಿನಿಧಿಗಳು, ಉದ್ಯಮ ಪ್ರತಿನಿಧಿಗಳು ಮತ್ತು ಶೈಕ್ಷಣಿಕ ಅಧಿಕಾರಿಗಳು ಎಐ ಸುರಕ್ಷತೆಯ ಬಗ್ಗೆ ಜಾಗತಿಕ ಸಹಕಾರವನ್ನು ಚರ್ಚಿಸಲು ಮತ್ತು ಭವಿಷ್ಯದಲ್ಲಿ ಎಐ ಒಳಗೊಂಡಿರುವ ಸಂಭಾವ್ಯ ಅಪಾಯಗಳಿಗೆ ಪ್ರತಿಕ್ರಿಯಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಸಚಿವರ ಸಭೆಗಳಲ್ಲಿ ಭಾಗವಹಿಸಲು ಯೋಜಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

'ಎಐ ಸಿಯೋಲ್ ಶೃಂಗಸಭೆ'ಯ ಎರಡನೇ ದಿನ, ಎಐ ಗ್ಲೋಬಲ್ ಫೋರಂ ಕೂಡ ನಡೆಯಲಿದೆ. ದಕ್ಷಿಣ ಕೊರಿಯಾ ಸರ್ಕಾರ ಈ ಗ್ಲೋಬಲ್​ ಫೋರ್ಂ ನ ಆತಿಥ್ಯ ವಹಿಸಲಿದೆ. ಕಳೆದ ವರ್ಷ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಹೊಸ ಎಐ ಜಾಗತಿಕ ಆಡಳಿತ ವ್ಯವಸ್ಥೆಯನ್ನು ರಚಿಸುವ ಸಲುವಾಗಿ ನಡೆದ ಸಭೆಯಲ್ಲಿ ಮಾತನಾಡಿದ್ದ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ತಾವೇ ಈ ಶೃಂಗದ ಆತಿಥ್ಯ ವಹಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ : ಮೆದುಳಿನಲ್ಲಿ ಚಿಪ್ ಅಳವಡಿಸಿಕೊಳ್ಳಲು ಬಯಸುವಿರಾ? ಈಗಲೇ ನ್ಯೂರಾಲಿಂಕ್​ಗೆ ಅರ್ಜಿ ಹಾಕಿ! - Neuralink Chip Implant

ETV Bharat Logo

Copyright © 2024 Ushodaya Enterprises Pvt. Ltd., All Rights Reserved.