ETV Bharat / state

ಬೆಂಗಳೂರು: ಪಟಾಕಿ ಸಿಡಿಸುವಾಗ ಸ್ನೇಹಿತರ ನಡುವಿನ ಹುಚ್ಚಾಟಕ್ಕೆ ಯುವಕ ಬಲಿ, 6 ಮಂದಿ ಬಂಧನ - YOUTH DIED BY CRACKER EXPLOSION

ದೀಪಾವಳಿ ದಿನದಂದು ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ.

ಯುವಕ ಬಲಿ
ಯುವಕ ಬಲಿ (ETV Bharat file photo)
author img

By ETV Bharat Karnataka Team

Published : Nov 4, 2024, 3:16 PM IST

Updated : Nov 4, 2024, 4:50 PM IST

ಬೆಂಗಳೂರು: ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾದ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅ.31ರಂದು ಕೋಣನಕುಂಟೆ ಠಾಣೆ ವ್ಯಾಪ್ತಿಯ ವೀವರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಪಟಾಕಿ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಶಬರೀಶ್ ಎಂಬ ಯುವಕ ಸಾವನ್ನಪ್ಪಿದ್ದಾನೆ.

ಅ.31ರಂದು ರಾತ್ರಿ ಪಾನಮತ್ತರಾಗಿ ಪಟಾಕಿ ಸಿಡಿಸುತ್ತಿದ್ದ ಯುವಕರು, ಪಟಾಕಿ ಹಚ್ಚುವಾಗ ಅದರ ಮೇಲೆ ಡಬ್ಬ ಇರಿಸಿ, ಆ ಡಬ್ಬದ ಮೇಲೆ ಕುಳಿತುಕೊಳ್ಳುವಂತೆ ಶಬರೀಶನಿಗೆ ಸವಾಲೆಸೆದಿದ್ದರು. ಮದ್ಯದ ಅಮಲಿನಲ್ಲಿದ್ದ ಶಬರೀಶ್, ತಾನು ಪಟಾಕಿ ಸಿಡಿಯುವವರೆಗೂ ಡಬ್ಬದ ಮೇಲೆ ಕುಳಿತುಕೊಂಡರೆ, ತನಗೆ ಆಟೋ ರಿಕ್ಷಾ ಕೊಡಿಸಬೇಕು ಎಂದಿದ್ದ. ಅದಕ್ಕೆ ಸ್ನೇಹಿತರು ಒಪ್ಪಿಕೊಂಡಾಗ ಸವಾಲನ್ನ ಸ್ವೀಕರಿಸಿದ್ದ‌ ಅನ್ನೋದು ಪೊಲೀಸ್​ ತನಿಖೆ ವೇಳೆ ಹೊರಬಿದ್ದಿದೆ.

ಡಿಸಿಪಿ ಲೋಕೇಶ್ ಬಿ ಜಗಲಾಸರ್ (ETV Bharat)

ಅದರಂತೆ ಭಾರೀ ಪಟಾಕಿಯನ್ನು ಇರಿಸಿ ಅದಕ್ಕೆ ಬೆಂಕಿ ಹಚ್ಚಿದ್ದ ಆತನ ಸ್ನೇಹಿತರು, ಡಬ್ಬದ ಮೇಲೆ ಶಬರೀಶನನ್ನು ಕೂರಿಸಿದ್ದರು. ಪಟಾಕಿ ಸಿಡಿದ ರಭಸಕ್ಕೆ ಶಬರೀಶನ ಖಾಸಗಿ ಅಂಗಕ್ಕೆ ತೀವ್ರವಾಗಿ ಸುಟ್ಟ ಗಾಯವಾಗಿತ್ತು. ತಕ್ಷಣ ಶಬರೀಶನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನ.2ರಂದು ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣೆ ಪೊಲೀಸರು, ಆರೋಪಿಗಳಾದ ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಎಂಬುವರನ್ನು ಬಂಧಿಸಿರುವುದಾಗಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೀಪಾವಳಿ: ಮೈಸೂರಿನಲ್ಲಿ ಪಟಾಕಿ ಅನಾಹುತ, 4 ಮಕ್ಕಳಿಗೆ ಗಾಯ, ಓರ್ವನಿಗೆ ಶಸ್ತ್ರಚಿಕಿತ್ಸೆ

Last Updated : Nov 4, 2024, 4:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.