ETV Bharat / state

ವಿಧಾನಸೌಧದ ಮುಂಭಾಗ ತನ್ನದೇ ಸ್ಕೂಟರ್‌ಗೆ ಬೆಂಕಿ ಹಚ್ಚಿ ಯುವಕನ ಆಕ್ರೋಶ - Young Man Sets Fire On Bike - YOUNG MAN SETS FIRE ON BIKE

ತನ್ನ ತಾಯಿಗೆ ಪೊಲೀಸರು ಬೈದರೆಂಬ ಕೋಪಕ್ಕೆ ಯುವಕನೊಬ್ಬ ವಿಧಾನಸೌಧದ ಮುಂಭಾಗ ತನ್ನದೇ ಬೈಕ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ವಿಧಾನಸೌಧದ ಮುಂಭಾಗದ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಯುವಕ
ವಿಧಾನಸೌಧದ ಮುಂಭಾಗದ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಯುವಕ (ETV Bharat)
author img

By ETV Bharat Karnataka Team

Published : Aug 14, 2024, 9:40 PM IST

ಬೆಂಗಳೂರು: ಪೊಲೀಸರ ಮೇಲಿನ ಸಿಟ್ಟಿಗೆ ಯುವಕನೊಬ್ಬ ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ತನ್ನ ಸ್ಕೂಟರ್‌ಗೆ ಬೆಂಕಿಯಿಟ್ಟ ಘಟನೆ ಇಂದು ನಡೆಯಿತು. ಬೆಂಕಿ ಹಚ್ಚಿದ ಚಳ್ಳಕೆರೆ ಮೂಲದ ಪೃಥ್ವಿರಾಜ್‌ ಎಂಬ ಯುವಕನನ್ನು ವಿಧಾನಸೌಧ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೃಥ್ವಿರಾಜ್ ಇತ್ತೀಚಿಗೆ ಟ್ರಕ್ಕಿಂಗ್ ಹೋದಾಗ ನಾಪತ್ತೆಯಾಗಿದ್ದ. ಇದರಿಂದಾಗಿ ಗಾಬರಿಗೊಂಡಿದ್ದ ಆತನ ತಾಯಿ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಪೊಲೀಸರು ಪೃಥ್ವಿರಾಜ್​ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪವಿದೆ.

ಇದರಿಂದ ಬೇಸರಗೊಂಡಿದ್ದ ಪೃಥ್ವಿರಾಜ್ ವಿಧಾನಸೌಧದ ಮುಂದೆ ಬಂದು ತನ್ನ ಸ್ಕೂಟರ್‌ಗೆ ಬೆಂಕಿ ಹಚ್ಚಿ ತನ್ನ ಆಕ್ರೋಶ ಹೊರಹಾಕಿದ್ದಾನೆ.

ಇದನ್ನೂ ಓದಿ: ದರ್ಶನ್, ಸಹಚರರಿಗೆ ಜೈಲೇ ಗತಿ: ಆಗಸ್ಟ್​ 28ರವರೆಗೆ ಜೈಲುವಾಸ ವಿಸ್ತರಣೆ - Renukaswamy Murder Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.