ಆನೇಕಲ್(ಬೆಂಗಳೂರು): ಆನೇಕಲ್‌ನ ಮರಸೂರು ಬಳಿ ಹಾದುಹೋಗುವ ರಸ್ತೆಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಕೊಲೆ ಮಾಡಲಾಗಿದೆ. ವಿಜಯ್ ಕುಮಾರ್(27) ಕೊಲೆಯಾದ ಯುವಕ. ಇಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ದುಷ್ಕರ್ಮಿಗಳು ವಿಜಯ್ ಕುಮಾರ್ನನ್ನು ಮನೆಯಿಂದ ಹೊರ ಕರೆದು ಎದುರಿನ ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ವಿಜಯ್ ಕುಮಾರ್ 2017ರಲ್ಲಿ ಮನೋಜ್ ಅಲಿಯಾಸ್ ಬಬ್ಲು ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಏಳು ತಿಂಗಳ ಹಿಂದೆ ಬಿಡುಗಡೆಯಾಗಿದ್ದ. ಈ ಹಿಂದೆ ಕೊಲೆಯಾಗಿದ್ದ ಮನೋಜ್ ಕಡೆಯವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೋಜ್ ಕುಮಾರ್ ಸಹೋದರ ಅರ್ಜುನ್ ಕೊಲೆ ಮಾಡಿದ್ದಾನೆ ಎಂದು ವಿಜಯ್ ಪೋಷಕರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಿ ವಿಜ್ಞಾನ ಮತ್ತು ಶ್ವಾನದಳ ಆಗಮಿಸಿ ತನಿಖೆ ನಡೆಸಿದೆ.
ಇದನ್ನೂ ಓದಿ: ಆನೇಕಲ್: ಬಿ.ಟೆಕ್ ವಿದ್ಯಾರ್ಥಿಯ ಶವ ನೀಲಗಿರಿ ತೋಪಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ