ETV Bharat / state

ಸಲ್ಮಾನ್ ಖಾನ್‌ಗೆ ಬೆದರಿಕೆ ಪ್ರಕರಣದಲ್ಲಿ ಮಾನ್ವಿ ಯುವಕನ ಬಂಧನ: ತಮ್ಮ ಮಗ ಮುಗ್ಧ ಎಂದ ಪೋಷಕರು

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ ಕಳುಹಿಸಿದ ಆರೋಪಿಯನ್ನು ರಾಯಚೂರಿನ ಮಾನ್ವಿಯಲ್ಲಿ ಬಂಧಿಸಲಾಗಿದೆ. ತಮ್ಮ ಮಗ ಪೋಸ್ಟ್ ಮಾಡಿರುವುದು ನಮಗೇನು ಗೊತ್ತಿಲ್ಲ, ಆತ ಮುಗ್ಧ ಎಂದು ಯುವಕನ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

young-man-held
ಮಾನ್ವಿ ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Nov 13, 2024, 3:51 PM IST

ರಾಯಚೂರು: ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ ಕಳುಹಿಸಿ 5 ಕೋಟಿ ರೂ.ಗೆ ಬೇಡಿಕೆಯಿಟ್ಟ ಆರೋಪದ ಮೇಲೆ ಯುವಕನೋರ್ವನನ್ನು ಮುಂಬೈ ಪೊಲೀಸರು ಮಂಗಳವಾರ ರಾಯಚೂರಿನ ಮಾನ್ವಿಯಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಸೊಹೈಲ್ ಪಾಷಾ ಎಂಬಾತ ತಾನು ಬರೆದ ಹಾಡು ಪ್ರಸಿದ್ಧಿಯಾಗಬೇಕೆಂದು ಬಯಸಿ ಈ ತಂತ್ರ ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಾನವಿ ಪಟ್ಟಣದ ಶಾದಿ ಮಹಲ್ ಬಳಿ ಇರುವ ನಿವಾಸಿ ಸೋಹಲ್ ಪಾಷಾನನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ನವೆಂಬರ್ 7ರಂದು ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಬೆದರಿಕೆ ಸಂದೇಶಗಳು ಬಂದಿದ್ದವು. ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿರುವ ಗ್ಯಾಂಗ್​ಸ್ಟರ್​​ ಗುಂಪಿನ ಸದಸ್ಯ ಎಂದು ಹೇಳಿ ಸಂದೇಶಗಳನ್ನು ಕಳಿಸಲಾಗಿತ್ತು. ಸಲ್ಮಾನ್ ಖಾನ್ 5 ಕೋಟಿ ರೂ. ಪಾವತಿಸದಿದ್ದರೆ ಅವರನ್ನು ಕೊಲ್ಲಲಾಗುವುದು ಎಂದು ಬೆದರಿಸಲಾಗಿತ್ತು. "ಮೇನ್ ಸಿಕಂದರ್ ಹು" ಹಾಡನ್ನು ರಚಿಸಿದವರನ್ನೂ ಸಹ ಕೊಲ್ಲುವುದಾಗಿ ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಕೈಗೊಂಡ ಮುಂಬೈ ಪೊಲೀಸರ ಅಪರಾಧ ವಿಭಾಗವು ಸಂದೇಶಗಳು ಬಂದ ಮೊಬೈಲ್ ಸಂಖ್ಯೆಯು ರಾಯಚೂರಿನದು ಎಂಬುದನ್ನು ಪತ್ತೆಹಚ್ಚಿದ್ದರು. ಅದರಂತೆ ಕರ್ನಾಟಕಕ್ಕೆ ಬಂದ ಪೊಲೀಸ್​ ತಂಡ, ನಂಬರ್ ಹೊಂದಿರುವ ರಾಯಚೂರಿನ ವೆಂಕಟೇಶ್ ನಾರಾಯಣ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದೆ. ಆದರೆ ನಾರಾಯಣ್ ಮೊಬೈಲ್ ಫೋನ್‌ನಲ್ಲಿ ಇಂಟರ್​ನೆಟ್ ಸೌಲಭ್ಯವೂ ಇಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಯಿತು. ಬಳಿಕ ಆತನ ಫೋನ್‌ಗೆ ವಾಟ್ಸಾಪ್ ಇನ್‌ಸ್ಟಾಲೇಶನ್ ಒಟಿಪಿ ಬಂದಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ.

ಆಗ, ನವೆಂಬರ್ 3ರಂದು ಮಾರುಕಟ್ಟೆಯೊಂದರಲ್ಲಿ ಅಪರಿಚಿತನೋರ್ವ ತಮ್ಮ ಬಳಿಗೆ ಬಂದು ಕರೆ ಮಾಡಲು ಫೋನ್ ತೆಗೆದುಕೊಂಡಿದ್ದ ಎಂದು ನಾರಾಯಣ್ ಪೊಲೀಸರಿಗೆ ತಿಳಿಸಿದ್ದಾರೆ. ಒಟಿಪಿ ಪಡೆಯಲು ನಾರಾಯಣ್ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡ ವ್ಯಕ್ತಿ, ತನ್ನ ಸ್ವಂತ ಮೊಬೈಲ್‌ಗೆ ವಾಟ್ಸಾಪ್ ಅನ್ನು ಇನ್​ಸ್ಟಾಲ್​ ಮಾಡಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಪೊಲೀಸರು ರಾಯಚೂರಿನ ಮಾನ್ವಿ ಗ್ರಾಮದಲ್ಲಿ ದಾಳಿ ನಡೆಸಿ ಆರೋಪಿ ಪಾಷಾನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಬೆದರಿಕೆಯಲ್ಲಿ ಉಲ್ಲೇಖಿಸಲಾದ "ಮೇನ್ ಸಿಕಂದರ್ ಹು" ಹಾಡಿನ ಬರಹಗಾರ ಆತನೇ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಆ ಹಾಡನ್ನು ಪ್ರಸಿದ್ಧಗೊಳಿಸಲು ಬಯಸಿದ್ದ ಆರೋಪಿ, ಪ್ರಸಿದ್ಧ ವ್ಯಕ್ತಿಗೆ ಬೆದರಿಕೆ ಸಂದೇಶ ಕಳಿಸುವ ತಂತ್ರ ಬಳಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಆರೋಪಿ ಪಾಷಾನನ್ನು ಮುಂಬೈಗೆ ಕರೆದೊಯ್ದಿರುವ ಪೊಲೀಸರು, ಹೆಚ್ಚಿನ ತನಿಖೆಗಾಗಿ ವರ್ಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಟ್ರಾಫಿಕ್ ಪೊಲೀಸ್ ಸಹಾಯವಾಣಿಗೆ ಇತ್ತೀಚಿನ ತಿಂಗಳುಗಳಲ್ಲಿ ಸಲ್ಮಾನ್ ಖಾನ್‌ಗೆ ಕನಿಷ್ಠ ನಾಲ್ಕು ಬೆದರಿಕೆ ಸಂದೇಶಗಳು ಬಂದಿದ್ದವು.

ಈ ಬಗ್ಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ''ಮುಂಬೈ ಪೊಲೀಸರು ಬಂದು ಹೋಗಿರುವುದು ನಿಜ'' ಎಂದು ತಿಳಿಸಿದ್ದಾರೆ.

ಮಗ ಮುಗ್ಧ ಎಂದ ಪೋಷಕರು: ಇತ್ತ, ''ಸೋಹೆಲ್ ಪಾಷಾ ಮೊದಲು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಟೈರ್ ಶೋ ರೂಮ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಮಗ ಪೋಸ್ಟ್ ಮಾಡಿರುವುದು ನಮಗೇನು ಗೊತ್ತಿಲ್ಲ. ಆತ ಮುಗ್ಧ. ಆತನಿಗೆ ಓದಲು, ಬರೆಯಲೂ ಕೂಡ ಸರಿಯಾಗಿ ಬರುವುದಿಲ್ಲ. 8ನೇ ತರಗತಿಗೆ ಶಾಲೆ ಬಿಟ್ಟಿದ್ದಾನೆ. ಆತನಿಗೆ ಏನೂ ಗೊತ್ತಿಲ್ಲ. ಹಾಡನ್ನು ಹೇಗೆ ಬರೆದ ಎಂಬುದು ನಮಗೂ ಗೊತ್ತಿಲ್ಲ. ಆತ ಸಲ್ಮಾನ್​ ಖಾನ್​ ಅಭಿಮಾನಿಯಾಗಿದ್ದ. ಟಿವಿಯಲ್ಲಿ ಸಲ್ಮಾನ್​ ಖಾನ್ ಸಿನಿಮಾಗಳು, ಹಾಡುಗಳನ್ನೇ ಹೆಚ್ಚಾಗಿ ನೋಡುತ್ತಿದ್ದ. ಬೇರೆಯವರ ಹಾಡು, ಸಿನಿಮಾ ನೋಡಲು ಇಷ್ಟಪಡುತ್ತಿರಲಿಲ್ಲ. ನಾವು ಬೇರೆ ಏನಾದರೂ ನೋಡುತ್ತಿದ್ದರೂ, ಮಗ ಚಾನೆಲ್​​ ಬದಲಿಸಿಕೊಂಡು ಸಲ್ಮಾನ್​ ಖಾನ್​ ಚಿತ್ರಗಳನ್ನೇ ನೋಡುತ್ತಿದ್ದ. ತಾನು ಸಲ್ಮಾನ್​ ಖಾನ್​ ಅಭಿಮಾನಿ ಎಂದು ಹೇಳುತ್ತಿದ್ದ'' ಎಂದು ಯುವಕನ ಪೋಷಕರು ಹೇಳುತ್ತಿದ್ದು, ಪೊಲೀಸರು ಕರೆದೊಯ್ದಿರುವುದಕ್ಕೆ ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಿ‌ ಕೆಲಸ ಕೊಡಿಸುವುದಾಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ ಜೈಲು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.