ETV Bharat / state

ಹಣೆಯಲ್ಲಿ ಕನ್ನಡ ಧ್ವಜ, ಎದೆಯಲ್ಲಿ ಇಮ್ಮಡಿ ಪುಲಕೇಶಿ: ಗಡಿಯಲ್ಲಿ ಭಾಷೆ ಉಳಿವಿಗಾಗಿ ಒಬ್ಬಂಟಿಯಾಗಿ ಯುವಕನ ಕನ್ನಡ ಜಾಗೃತಿ

ಮರಾಠಿ ವಾತಾವರಣವಿರುವ ಗಡಿನಾಡಲ್ಲಿ ಆಗುತ್ತಿದ್ದ ವಿವಾದಗಳಿಂದ ಬೇಸರಗೊಂಡ ಬಸವರಾಜ ನಿಂಗಪ್ಪ ಮಾಳಿ ಅಂದಿನಿಂದ ಇಂದಿನವರೆಗೂ ಕನ್ನಡ ಭಾಷೆಯನ್ನು ಪಸರಿಸಿ, ಉಳಿಸುವ ಜಾಗೃತಿ ಮೂಡಿಸುತ್ತಿದ್ದಾರೆ

Young man Basavaraja Ningappa Mali
ಯುವಕ ಬಸವರಾಜ ನಿಂಗಪ್ಪ ಮಾಳಿ (ETV Bharat)
author img

By ETV Bharat Karnataka Team

Published : Nov 1, 2024, 8:26 AM IST

Updated : Nov 1, 2024, 12:39 PM IST

ಚಿಕ್ಕೋಡಿ: ರಾಜ್ಯೋತ್ಸವವನ್ನು ಕರ್ನಾಟಕ ರಾಜ್ಯಾದ್ಯಂತ ಹಬ್ಬದಂತೆ ಆಚರಣೆ ಮಾಡುತ್ತಾರೆ. ಎಲ್ಲಾದರೂ ಕನ್ನಡದ ಅಸ್ಮಿತೆಗೆ ಧಕ್ಕೆ ಬಂದರೆ ಕನ್ನಡ ಪರ ಹೋರಾಟಗಾರರು ಹೋರಾಟ ಮಾಡಿ ಕನ್ನಡ ಉಳಿವಿಗಾಗಿ ನಿರಂತರವಾಗಿ ಶ್ರಮ ವಹಿಸಿದ್ದನ್ನು ನಾವು ನೀವು ನೋಡಿದ್ದೇವೆ. ಆದರೆ, ಎಲೆಮರೆಯ ಕಾಯಿಯಂತೆ ಕಳೆದ 24 ವರ್ಷಗಳಿಂದ ಕನ್ನಡ ಪ್ರೇಮ ಮೆರೆಯುತ್ತಾ, ಬೆಳೆಸುತ್ತಾ, ಕನ್ನಡವನ್ನು ಕಲಿಸುತ್ತಾ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯುವಕನ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಸವರಾಜ ನಿಂಗಪ್ಪ ಮಾಳಿ ಎಂಬ ಯುವಕ ಕಳೆದ 24 ವರ್ಷಗಳಿಂದಲೂ ಕನ್ನಡದ ಬಗ್ಗೆ ಒಬ್ಬಂಟಿಯಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಕನ್ನಡ ನೆಲದ ಬಗ್ಗೆ ಹೋರಾಡಿದ ಇಮ್ಮಡಿ ಪುಲಕೇಶಿಯ ಭಾವಚಿತ್ರವನ್ನು ಎದೆಯ ಮೇಲೆ ಹಾಕಿ, ಹಣೆಗೆ ಕನ್ನಡ ಧ್ವಜವನ್ನು ಹೋಲುವ ಕುಂಕುಮ ಅರಿಶಿಣ ಹಚ್ಚಿ, ಕೈ ಮೇಲೆ ಕನ್ನಡ ಎಂದು ಹಚ್ಚೆ ಹಾಕಿಸಿಕೊಂಡಿರುವ ಇವರು ವರ್ಷವಿಡೀ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಯುವಕನ ಕನ್ನಡ ಜಾಗೃತಿ (ETV Bharat)

ಬಸವರಾಜ್ ಪ್ರತಿ ಉಸಿರಿನಲ್ಲೂ ಕನ್ನಡ ಪ್ರೇಮ: ತನ್ನ ಖಾನಾವಳಿಯಲ್ಲಿ ನಿತ್ಯ ಬರುವ ಸಾವಿರಾರು ಗ್ರಾಹಕರ ಗಮನ ಸೆಳೆದು, ಅನ್ಯ ಭಾಷಿಕರಿಗೆ ಕನ್ನಡ ಮಾತನಾಡಿ ಎನ್ನುತ್ತಾ, ಕನ್ನಡ ಕಲಿಸುತ್ತಾ ತಾವು ಮಾಡುವ ಕೆಲಸದಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇದುವರೆಗೆ ಯಾವುದೇ ಪ್ರಚಾರ ಬಯಸದೇ ತಾನಾಯ್ತು ತನ್ನ ಕೆಲಸವಾಯಿತು, ತನ್ನ ಕನ್ನಡ ಪ್ರೇಮವಾಯಿತು ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ್ ಪ್ರತಿ ಉಸಿರಿನಲ್ಲೂ ಕನ್ನಡ ಪ್ರೇಮವಿದೆ. ಕನ್ನಡ ನೆಲದ ಬಗ್ಗೆ ಅತಿಯಾದ ಗೌರವ ಹೊಂದಿದ್ದಾರೆ. ತಾವು ಮಲಗುವ ಕೋಣೆಗಳಿಗೆ ಕನ್ನಡ ಧ್ವಜ ಹೋಲುವ ಬಣ್ಣಗಳನ್ನು ಬಳಸಿದ್ದಾರೆ. ಜೊತೆಗೆ ವರ್ಷವೂ ಅವರ ಮನೆಯ ಮೇಲೆ ಕನ್ನಡ ಧ್ವಜ ರಾರಾಜಿಸುತ್ತಿರುತ್ತದೆ. ಇವರ ಕನ್ನಡ ಪ್ರೇಮವನ್ನು ನೋಡಿ ಅಕ್ಕ ಪಕ್ಕದ ಊರಿನವರು ಹಾಗೂ ಅಥಣಿ ಪಟ್ಟಣದ ನಿವಾಸಿಗಳು ಭೇಷ್ ಅನ್ನುತ್ತಿದ್ದಾರೆ.

ಬಸವರಾಜ್ ಮಾಳಿ ಮಾತನಾಡಿ, "7ನೇ ತರಗತಿಯಿಂದ ಕನ್ನಡದ ಬಗ್ಗೆ ನನ್ನಲ್ಲಿ ಪ್ರೇಮ ಮೂಡಿತು. ಮಹಾರಾಷ್ಟ್ರದ ಗಡಿ ಹೊಂದಿರುವ ಸಂಕೇಶ್ವರ ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಅಲ್ಲಿ ಮರಾಠಿಮಯ ವಾತಾವರಣ ಹಾಗೂ ಗಡಿಯಲ್ಲಿ ಆಗಾಗ ವಿವಾದಗಳನ್ನು ನೋಡಿ ನನಗೆ ಬೇಸರವಾಯಿತು. ಕನ್ನಡದ ನೆಲದಲ್ಲಿ ಇದ್ದುಕೊಂಡು ಕರಾಳ ದಿನ ಆಚರಿಸುವುದು ಬೇಸರವೆಣಿಸಿ ಅವತ್ತಿನಿಂದ ಇವತ್ತಿನವರೆಗೆ, ನನ್ನಿಂದ ಸಾಧ್ಯವಾದಷ್ಟು ಕನ್ನಡ ಉಳಿಸುವ, ಬೆಳೆಸುವ ಪ್ರಯತ್ನ ಮಾಡುತ್ತಿದ್ದೇನೆ" ಎಂದರು.

Basavaraja Ningappa Mali in Khanavali
ಬಸವರಾಜ ನಿಂಗಪ್ಪ ಮಾಳಿಬಸವರಾಜ ನಿಂಗಪ್ಪ ಮಾಳಿ (ETV Bharat)

ನಾನು ಯಾವುದೇ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ: "ಚಿಕ್ಕವನಿದ್ದಾಗ ಹಣೆ ಮೇಲೆ ಈ ರೀತಿ ಕುಂಕುಮ ಮತ್ತು ಇಮ್ಮಡಿ ಪುಲಕೇಶಿ ಅವರ ಭಾವಚಿತ್ರ ಹಾಕಿಕೊಂಡು ಓಡಾಡುತ್ತಿದ್ದ ನನ್ನನ್ನು ಹೀಯಾಳಿಸಿದವರು ಜಾಸ್ತಿ. ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳದೇ ಕನ್ನಡ ಪ್ರೇಮ ಇಟ್ಟುಕೊಂಡು ಜಾಗೃತಿ ಮೂಡಿಸುತ್ತಿದ್ದೇನೆ. ನಾನು ಯಾವುದೇ ಕನ್ನಡ ಪರ ಹೋರಾಟ ಸಂಘಗಳಾಗಲಿ, ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ. ನನ್ನ ಖಾನಾವಳಿಗೆ ಬರುವ ಗ್ರಾಹಕರಿಗೆ ನನ್ನ ಕುಟುಂಬ ಮತ್ತು ನನ್ನ ಗೆಳೆಯರಿಗೆ ಕನ್ನಡವನ್ನು ಕಲಿಯಿರಿ ಬೆಳೆಸಿರಿ ಎಂದು ಹೇಳುತ್ತೇನೆ. "

ನಾನು ಅಪ್ಪಿತಪ್ಪಿಯೂ ಅವರ ಭಾಷೆ ಮಾತನಾಡುವುದಿಲ್ಲ: "ಅನ್ಯಭಾಷಿಕರು ನಮ್ಮ ಖಾನಾವಳಿಯಲ್ಲಿ ಅವರ ಭಾಷೆ ಮಾತನಾಡಿದರೂ ನಾನು ಅಪ್ಪಿತಪ್ಪಿಯೂ ಅವರ ಭಾಷೆ ಮಾತನಾಡುವುದಿಲ್ಲ. ಅವರ ಜೊತೆ ಕನ್ನಡದಲ್ಲಿ ವ್ಯವಹರಿಸಿ ನಾನು ಅವರಿಗೆ ಕನ್ನಡವನ್ನು ಕಲಿಸುತ್ತೇನೆ. ಇದರಿಂದ ನನಗೆ ಖುಷಿ ಇದೆ. ಇಮ್ಮಡಿ ಪುಲಿಕೇಶಿ ಅಖಂಡ ಭಾರತದ ಜೊತೆ ವಿದೇಶದವರಿಗೂ ಕನ್ನಡದ ಕಂಪು ಪಸರಿಸಿದ್ದರು. ಆದರೆ ಸರ್ಕಾರಗಳು ಎಲ್ಲೋ ಅವರನ್ನು ಮರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಮ್ಮಡಿ ಪುಲಕೇಶಿ ಅವರ ಬಗ್ಗೆ ಪಠ್ಯಪುಸ್ತಕಗಳಲ್ಲಿ ಇನ್ನೂ ಹೆಚ್ಚುವರಿಯಾಗಿ ಬೋಧನೆ ಆಗುವಂತಹ ಕಾರ್ಯವಾಗಬೇಕು. ಹಲವು ವೃತ್ತಗಳಲ್ಲಿ ಅವರ ಪ್ರತಿಮೆ ನಿಲ್ಲಿಸುವ ಕೆಲಸವೂ ಆಗಬೇಕು. ಯಾವತ್ತೂ ನವೆಂಬರ್ 1ರ ಕನ್ನಡ ಪ್ರೇಮಿಗಳಾಗಬೇಡಿ. ವರ್ಷವಿಡೀ ಕನ್ನಡ ಪ್ರೇಮಿಗಳಾಗುವಂತ ಕಾರ್ಯ ನಮ್ಮಿಂದಾಗಲಿ" ಎಂದು ಹೇಳಿದರು.

Basavaraja Ningappa Mali with family
ಕುಟುಂಬದೊಂದಿಗೆ ಬಸವರಾಜ ನಿಂಗಪ್ಪ ಮಾಳಿ (ETV Bharat)

ಸಹೋದರಿ ದೀಪಾ ಮಾತನಾಡಿ, "ಚಿಕ್ಕಂದಿನಿಂದ ನಾನು ನೋಡಿದಂತೆ ನಮ್ಮಣ್ಣ ಕನ್ನಡದ ಬಗ್ಗೆ ತುಂಬಾ ಪ್ರೀತಿ ತೋರಿಸುತ್ತಾನೆ. ಕನ್ನಡ ಎಂದರೆ ಅವನಿಗೆ ಪಂಚಪ್ರಾಣ ದಿನದ 24 ಗಂಟೆಗಳು ಕೂಡ ಅವರ ಎದೆಯ ಮೇಲೆ ಇಮ್ಮಡಿ ಪುಲಕೇಶಿ ಭಾವಚಿತ್ರ ಹಾಗೂ ಕನ್ನಡ ಧ್ವಜದ ಚಿತ್ರ, ಕೊರಳಲ್ಲಿ ಕನ್ನಡ ಧ್ವಜದ ಡಾಲರ್ ಹಾಕಿಕೊಂಡೇ ತನ್ನ ಕನ್ನಡ ಪ್ರೇಮವನ್ನು ಮೆರೆಯುತ್ತಾನೆ. ನಮ್ಮ ಕುಟುಂಬಕ್ಕೆ ಇವನೊಬ್ಬ ವಿಶೇಷ" ಎಂದು ಬಣ್ಣಿಸಿದರು.

ಇದನ್ನೂ ಓದಿ: ಕುಂದಾನಗರಿಯಲ್ಲಿ ಮಧ್ಯರಾತ್ರಿಯೇ ಮುಗಿಲು ಮುಟ್ಟಿದ ರಾಜ್ಯೋತ್ಸವ ಸಂಭ್ರಮ: ಕುಣಿದು ಕುಪ್ಪಳಿಸಿದ ಸಾವಿರಾರು ಕನ್ನಡಿಗರು

ಓದಿದ್ದು ಸ್ನಾತಕೋತ್ತರ ಪದವಿ: ಬದುಕು ಕಟ್ಟಿಕೊಂಡಿದ್ದು ಹಣತೆ ತಯಾರಿಸುವ ಕಾಯಕದಲ್ಲಿ!

Last Updated : Nov 1, 2024, 12:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.