ETV Bharat / state

ಮೂಡಬಿದಿರೆ: ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನ ಬಂಧನ - Young Man Arrest - YOUNG MAN ARREST

ರಸ್ತೆಯಲ್ಲೇ ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ. 19 ವರ್ಷದ ಯುವತಿಯು ಟೈಲರ್ ಅಂಗಡಿಯೊಂದಕ್ಕೆ ಹೋಗುತ್ತಿರುವಾಗ ಘಟನೆ ನಡೆದಿದೆ.

arrest
ಮೂಡುಬಿದಿರೆ ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Aug 31, 2024, 10:55 AM IST

Updated : Aug 31, 2024, 12:54 PM IST

ಮಂಗಳೂರು: ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ. ಅರ್ಷದ್ (21) ಬಂಧಿತ ಆರೋಪಿ.

ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಮೂಡಬಿದಿರೆಯ ಪ್ರಾಂತ್ಯ ಗ್ರಾಮದ ಟೈಲರ್ ಅಂಗಡಿಯೊಂದಕ್ಕೆ ಯುವತಿ ಹೋಗುತ್ತಿರುವಾಗ ಘಟನೆ ನಡೆದಿದೆ. ಕ್ಲಾಸ್‌ಮೇಟ್ ಆಗಿದ್ದ ಆರೋಪಿ ಅರ್ಷದ್, ಯುವತಿಯನ್ನು ಅಡ್ಡಗಟ್ಟಿ 'ನೀನು ನನ್ನನ್ನು ಯಾಕೆ ಪ್ರೀತಿಸುತ್ತಿಲ್ಲ' ಎಂದನಲ್ಲದೇ, ತನ್ನ ಮೈ ಮೇಲೆ ಕೈ ಹಾಕಲು ಬಂದ ಎಂದು ಯುವತಿ ದೂರಿದ್ದಾಳೆ. 19 ವರ್ಷದ ಯುವತಿ ಮೂಡುಬಿದಿರೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ನಡೆದಾಗ ತಾನು ಬೊಬ್ಬೆ ಹೊಡೆದ ಕೂಡಲೇ ಟೈಲರ್ ಹೊರಬಂದಾಗ ಆರೋಪಿ ಸ್ಥಳದಿಂದ ಓಡಿಹೋಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯುವತಿ ಅಡ್ಡಗಟ್ಟಿ ಕಿರುಕುಳ ನೀಡಿದ ಪ್ರಕರಣದ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಇರುವೈಲಿನವನಾದ ಅರ್ಷದ್, ಈ ಹಿಂದೆ ಮೂಡುಬಿದಿರೆ ಕೊಡಂಗಲ್ಲು ಪಿಲಿಪಂಜರ ಎಂಬಲ್ಲಿ ವಾಸವಿದ್ದ. ಬಳಿಕ ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದ ತಿಳಿದು ಬಂದಿದೆ. ಬ್ಯೂಟಿ ಪಾರ್ಲರ್​​ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲ ಸಮಯದ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದಳು. ಗುರುವಾರ ಬಟ್ಟೆ ಹೊಲಿಸಲೆಂದು ಟೈಲರ್ ಅಂಗಡಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ವಿವಾಹವಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ - Young Woman Rape Case

Last Updated : Aug 31, 2024, 12:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.