ETV Bharat / state

ಯಕ್ಷಗಾನ ಪ್ರದರ್ಶನಕ್ಕೆ ಮತ್ತೆ ಅಮೆರಿಕಾದೆಡೆಗೆ ಹಾರಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ; ಈ ಬಾರಿ 75 ದಿನಗಳ ಕಲಾ ಪ್ರವಾಸ - Yakshadhruva Patla Foundation

author img

By ETV Bharat Karnataka Team

Published : Jul 1, 2024, 8:21 PM IST

ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್​ ಯಕ್ಷಗಾನ ಪ್ರದರ್ಶನಕ್ಕೆ ಅಮೆರಿಕದೆಡೆಗೆ ಪ್ರವಾಸ ಕೈಗೊಳ್ಳಲಿದೆ.

yakshadhruva-patla-foundation
ಯಕ್ಷಧ್ರುವ ಪಟ್ಲ ಫೌಂಡೇಶನ್​ (ETV Bharat)

ಯಕ್ಷಧ್ರುವ ಪಟ್ಲ ಫೌಂಡೇಶನ್​ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ (ETV Bharat)

ಮಂಗಳೂರು (ದಕ್ಷಿಣ ಕನ್ನಡ) : ಕರಾವಳಿಯ ಕಲಾ ಸೊಬಗು ಯಕ್ಷಗಾನಕ್ಕೆ ವಿಶ್ವವ್ಯಾಪಿ ಪ್ರೇಕ್ಷಕರಿದ್ದಾರೆ. ಶಿವರಾಮ ಕಾರಂತರು ವಿದೇಶಗಳಿಗೆ ಯಕ್ಷಗಾನವನ್ನು ತಲುಪಿಸಿ ಅದರ ಗೌರವ ಹೆಚ್ಚಿಸಿದ್ದರು. ಇದೀಗ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್​ನಿಂದ 75 ದಿನಗಳ ಕಲಾ ಪ್ರವಾಸ ನಡೆಯಲಿದೆ.

ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಪ್ರದರ್ಶನ ನಡೆಸಲು ಮತ್ತೆ ಅಮೆರಿಕಕ್ಕೆ ಹಾರಲಿದೆ. ಈ ಮೂಲಕ ಪ್ರಪಂಚದ ದೈತ್ಯ ರಾಷ್ಟ್ರ ಅಮೆರಿಕದಲ್ಲಿ ಯಕ್ಷಗಾನದ ಚಂಡೆ - ಮದ್ದಳೆಗಳ ನಿನಾದ ಮೊಳಗಲಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್​​ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದ ತಂಡ ಅಮೆರಿಕದಲ್ಲಿ 75 ದಿನಗಳ ಕಲಾ ಪ್ರವಾಸ ಕೈಗೊಳ್ಳಲಿದೆ. ಜುಲೈ 9ರಂದು ಕಲಾವಿದರು ಅಮೆರಿಕಕ್ಕೆ ಹಾರಲಿದ್ದಾರೆ.

ಹಿಮ್ಮೇಳದಲ್ಲಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಚಂಡೆ - ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯ, ಚೈತನ್ಯಕೃಷ್ಣ ಪದ್ಯಾಣ, ಮುಮ್ಮೇಳದಲ್ಲಿ ಎಂ. ಎಲ್ ಸಾಮಗ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಸೇರಿದಂತೆ ತೆಂಕುತಿಟ್ಟು ಯಕ್ಷಗಾನದ 9 ಮೇರು ಕಲಾವಿದರ ತಂಡ ಅಮೆರಿಕದಲ್ಲಿ ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಅಮೆರಿಕದಲ್ಲಿ ಶ್ರೀದೇವಿ ಮಹಾತ್ಮೆ, ಶಾಂಭವಿ ವಿಜಯ, ವೀರಾಂಜನೇಯ, ಸುದರ್ಶನ ವಿಜಯ, ನರಕಾಸುರ ಮೋಕ್ಷ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಯಕ್ಷಧ್ರುವ ಪಟ್ಲ ಫೌಂಡೇಶನ್​​ ಯುಎಸ್ಎ ಘಟಕ ಅಮೆರಿಕದ ಸುಮಾರು 20 ರಾಜ್ಯಗಳ ಪ್ರಮುಖ ನಗರಗಳಲ್ಲಿ ಯಕ್ಷಗಾನವನ್ನು ಈಗಾಗಲೇ ಬುಕ್ಕಿಂಗ್ ಮಾಡಿದೆ. ನ್ಯಾನೋಸೆ, ಸಿಯಾಟಲ್, ಫೀನಿಕ್ಸ್, ಲಾಸ್ ಏಂಜಲೀಸ್, ಆ್ಯಸ್ಟಿನ್, ಹ್ಯೂಸ್ಟನ್, ಡೆಟ್ರೈನ್, ಇಜಾಮ್ಸ್ ವಿಲ್ಲೆ, ಮೇರಿಲ್ಯಾಂಡ್, ಟಂಪಾ, ಮಿಲ್ವಾಕಿ, ಶಾರ್ಲೋಟ್, ರಾಲೆ, ಎಡಿಸನ್, ಕೊಲಂಬಸ್, ಬಾಸ್ಟನ್, ಒರ್ಲಾಂಡೊ, ಅಟ್ಲಾಂಟಾ, ಚಿಕಾಗೋ, ಡೆಲ್ಲಾಸ್, ನ್ಯೂಜೆರ್ಸಿ, ರಿಚ್ಮಂಡ್, ಎಡಿಸನ್ ಸೇರಿದಂತೆ 2ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ಪ್ರತಿಷ್ಠಿತ ಅಕ್ಕ ಸಮ್ಮೇಳನದಲ್ಲೂ ಯಕ್ಷಗಾನ ಪ್ರದರ್ಶನ ಆಯೋಜನೆಗೊಂಡಿದೆ. ಅಲ್ಲದೆ ಕೆಲವೊಂದು ಕಡೆಗಳಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನಡೆಸಲಾಗುತ್ತದೆ.

ಕನ್ನಡಿಗರಲ್ಲದೇ, ಭಾರತದ ವಿವಿಧ ರಾಜ್ಯಗಳ ಜನರು, ವಿದೇಶಿಯರೂ ಈ ಪ್ರದರ್ಶನವನ್ನು ಆಸ್ವಾದಿಸಲಿದ್ದಾರೆ. ಇಲ್ಲಿ ಪ್ರದರ್ಶಿಸುವ ಕಥಾನಕದ ಸ್ಥೂಲ ಕಥೆಯನ್ನು ಇಂಗ್ಲಿಷ್​ನಲ್ಲಿ ತಿಳಿಸಲಾಗುತ್ತದೆ. ಜೊತೆಗೆ ಯಕ್ಷಗಾನದ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ. ಒಟ್ಟಿನಲ್ಲಿ ಈ ತಂಡಕ್ಕೆ ಯಕ್ಷಗಾನದ ಕಂಪನ್ನು ಸಮುದ್ರದಾಚೆಗೂ ಪಸರಿಸುವ ಉದ್ದೇಶವಿದೆ.

ಈ ಬಗ್ಗೆ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ, ಪುತ್ತಿಗೆ ಮಠಗಳು, ಕನ್ನಡ ಕೂಟದವರು, ಯಕ್ಷಗಾನ ಸಂಘದವರು, ದೇವಸ್ಥಾನಗಳು ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ನಮಗೆ ಸಹಕಾರ ನೀಡಲಿದ್ದಾರೆ. ಪೌರಾಣಿಕ ಕಥಾನಕಗಳನ್ನು ಆಯ್ದುಕೊಂಡು ನಾವು ಪ್ರದರ್ಶನ ನೀಡಲಿದ್ದೇವೆ. ಕೆಲವು ಕಡೆ ಕಿರು ತರಬೇತಿ ಶಿಬಿರ ಪ್ರಾತ್ಯಕ್ಷಿಕೆಗಳನ್ನು ಕೂಡಾ ನಡೆಸಲಿದ್ದೇವೆ ಎಂದರು.

ಎರಡು ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ಬಲು ವಿಜೃಂಭಣೆಯ ಅಕ್ಕ ಸಮ್ಮೇಳನದಲ್ಲಿಯೂ ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ ಕಾರ್ಯಕ್ರಮ ನೀಡಲಿದೆ ಎನ್ನುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಅಮೆರಿಕದ ಸ್ಯಾನೋಸೆ, ಸಿಯಾಟಲ್, ಫೀನಿಕ್ಸ್, ಲಾಸ್ ಎಂಜಲೀಸ್, ಆಸ್ಟಿನ್, ಹ್ಯೂಸ್ಟನ್, ಡೆಟ್ರೈಟ್, ಇಜಾಮ್ಸ್ ವಿಲ್ಲೆ, ಮೇರಿಲ್ಯಾಂಡ್, ಟಂಪಾ, ಮಿಲ್ವಾಕಿ, ಶಾರ್ಲೋಟ್, ರಾಲೆ, ಎಡಿಸನ್, ಕೊಲಂಬಸ್, ಬಾಸ್ಟನ್, ಒರ್ಲಾಂಡೊ, ಅಟ್ಲಾಂಟಾ, ಚಿಕಾಗೋ ಡಲ್ಲಾಸ್, ನ್ಯೂಜೆರ್ಸಿ, ರಿಚ್ಮಂಡ್, ಎಡಿಸನ್ ಮುಂತಾದ ಕಡೆ ಪ್ರದರ್ಶನಗೊಂಡು ನಮ್ಮ ಭಾರತೀಯರನ್ನು ರಂಜಿಸಲಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ : ವಾರಣಾಸಿಯ ರಾಷ್ಟ್ರೀಯ ನಾಟಕ ಶಾಲಾ ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ ಯಕ್ಷಗಾನ ಶಿಬಿರ - Yakshagana

ETV Bharat Logo

Copyright © 2024 Ushodaya Enterprises Pvt. Ltd., All Rights Reserved.