ETV Bharat / state

ದೇಶದಲ್ಲಿ ಬಿಜೆಪಿ ಮುನ್ನಡೆ ಖುಷಿ ವಿಚಾರ, ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತೇವೆ: ಯದುವೀರ್ - Yaduveer - YADUVEER

ಲೋಕಸಭಾ ಚುನಾವಣೆಯ ಎಕ್ಸಿಟ್ ಪೊಲ್ ಕುರಿತು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು.

yaduveer-krishnadatta-chamaraja-wadiyar
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ETV Bharat)
author img

By ETV Bharat Karnataka Team

Published : Jun 2, 2024, 7:52 PM IST

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯೆ (ETV Bharat)

ಮೈಸೂರು: ದೇಶ ಮತ್ತು ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಕ್ಕೂ ಮುನ್ನ ಬಿಜೆಪಿಗೆ ಮುನ್ನಡೆ ಸಿಕ್ಕಿರುವುದು ಖುಷಿ ವಿಚಾರ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂತಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯ ಎಕ್ಸಿಟ್ ಪೊಲ್ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನ ಮತ್ತೊಮ್ಮೆ ಸಮಾಜಸೇವೆ ಮಾಡಲು ಆಶೀರ್ವಾದ ಮಾಡಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತೇವೆ ಎಂದರು.

ರಾಜ್ಯದಲ್ಲೂ ಬಿಜೆಪಿಗೆ ಮುನ್ನಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದನ್ನೇ ನಾವೂ ಸಹ ನಿರೀಕ್ಷೆ ಮಾಡಿದ್ದೆವು. ಸಮೀಕ್ಷೆಯಲ್ಲೂ ನಮ್ಮ ನಿರೀಕ್ಷೆಯಂತೆಯೇ ಫಲಿತಾಂಶ ಬಂದಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಸಚಿವ ಸ್ಥಾನ ಸಿಗುವ ವಿಚಾರವಾಗಿ ಮಾತನಾಡಿ, ಸದ್ಯ ಈ ಬಗ್ಗೆ ಯಾವುದೇ ಚಿಂತನೆ ಇಲ್ಲ. ನನ್ನ ಮೊದಲ ಆದ್ಯತೆ ಜನಪರ ಕೆಲಸ ಎಂದು ತಿಳಿಸಿದರು.

ವಿಶೇಷ ಮಕ್ಕಳ ಶಾಲೆ ಉದ್ಘಾಟನೆ: ರೋಟರಿ ಮಿಡ್ ಟೌನ್ ಸಹಕಾರದಲ್ಲಿ ಕರುಣಾಮಯಿ ಫೌಂಡೇಷನ್‌ ವತಿಯಿಂದ ನಿರ್ಮಾಣವಾಗಿರುವ ವಿಶೇಷ ಮಕ್ಕಳ ನೂತನ ಶಾಲೆ ಉದ್ಘಾಟಿಸಿದ ಯದುವೀರ್ ಶುಭ ಕೋರಿದರು.

ಇದನ್ನೂ ಓದಿ: ರಾಜ Vs ಸಾಮಾನ್ಯ; ಸಿಎಂ ತವರಲ್ಲಿ ಹೇಗಿದೆ ಸೋಲು-ಗೆಲುವಿನ ಲೆಕ್ಕಾಚಾರ? - MYSURU KODAGU CONSTITUENCY

ETV Bharat Logo

Copyright © 2025 Ushodaya Enterprises Pvt. Ltd., All Rights Reserved.