ETV Bharat / state

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರದ್ದೇ ಪ್ರಾಬಲ್ಯ; ಸ್ಪರ್ಧೆಯಲ್ಲಿ ಮಾತ್ರ ಅತ್ಯಲ್ಪ - Women dominate - WOMEN DOMINATE

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಆದರೆ, ಕ್ಷೇತ್ರದ ಇತಿಹಾಸ ಗಮನಿಸಿದರೆ ಈ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಮೂವರು ಮಹಿಳೆಯರು ಮಾತ್ರ ಚುನಾವಣೆಗೆ ಸ್ಪರ್ಧಿಸಿದ್ದು ಗಮನಾರ್ಹ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
author img

By ETV Bharat Karnataka Team

Published : Apr 13, 2024, 7:37 PM IST

ಮಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕೂಡ ಒಂದು. ಕಳೆದ ಕೆಲವು ವರ್ಷಗಳಿಂದ ಮತದಾರರ ಸಂಖ್ಯೆ ಗಮನಿಸಿದಾಗ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿರುವುದು ಕಂಡುಬಂದಿದೆ. ಮಹಿಳೆಯರ ಪ್ರಾಬಲ್ಯ ಹೆಚ್ಚಿದ್ದರೂ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಲು ಅವರಿಗೆ ಅವಕಾಶ ನೀಡದೇ ಕಡೆಗಣಿಸಿರುವುದು ಬೇಸರದ ಸಂಗತಿಯಾಗಿದೆ. ಈ ಬಾರಿಯು ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಆದರೆ, ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಈ ಕ್ಷೇತ್ರದಲ್ಲಿ ಕೇವಲ ಮೂವರು ಮಹಿಳೆಯರು ಮಾತ್ರ ಚುನಾವಣೆಗೆ ಸ್ಪರ್ಧಿಸಿದ್ದು ಅಚ್ಚರಿ.

ರಾಜಕೀಯ ಪಕ್ಷಗಳಿಂದ ಕೇವಲ ಜೆಡಿಎಸ್​ನಿಂದ ಓರ್ವ ಮಹಿಳೆ ಸ್ಪರ್ಧಿಸಿದ್ದರೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಹಿಳೆಯರಿಗೆ ಈವರೆಗೆ ಟಿಕೆಟ್ ನೀಡಿಲ್ಲ. 1999 ರಲ್ಲಿ ಜೆಡಿಎಸ್​ನಿಂದ ಲೋಕೇಶ್ವರಿ ವಿನಯಚಂದ್ರ ಎಂಬವರು ಸ್ಪರ್ಧಿಸಿದ್ದರು. ಇನ್ನು ಇಬ್ಬರು ಮಹಿಳೆಯರು ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ. 1989ರಲ್ಲಿ ಗರ್ಟಿ ಸುವರ್ಣ ಮತ್ತು ಪ್ಲೋಜಿನಿ ಪಿರೇರ ಎಂಬುವರು ಸ್ಪರ್ಧಿಸಿ ಕ್ಷೇತ್ರದಲ್ಲಿ ಗಮನ ಸೆಳೆದರೆ ಉಳಿದಂತೆ ಈವರೆಗೂ ಯಾರೂ ಸ್ಪರ್ಧೆ ಮಾಡದಿರುವುದು ಬೇಸರದ ಸಂಗತಿ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

ಮತದಾರರ ಮಾಹಿತಿ: ದಕ್ಷಿಣ ಕನ್ನಡ ಜಿಲ್ಲೆಯ 8ರ ಪೈಕಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿರುವುದು ಗಮನಾರ್ಹ. ಜಿಲ್ಲೆಯಲ್ಲಿ ಮಾರ್ಚ್ 15ರ ವರೆಗೆ ಒಟ್ಟು 17,96,826 ಮತದಾರರಿದ್ದಾರೆ. ಇದರಲ್ಲಿ 8,77,438 ಪುರುಷ ಮತದಾರರರಿದ್ದರೆ, 9,19,321 ಮಹಿಳಾ ಮತದಾರರಿದ್ದಾರೆ.

ವಿಧಾನಸಭಾವಾರು ಮತದಾರರ ಮಾಹಿತಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವಿಧಾನಸಭಾವಾರು ನೋಡುವುದಾದರೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 1,14,257 ಪುರುಷ ಮತದಾರರು, 1,16,095 ಮಹಿಳಾ ಮತದಾರರು, ಮೂಡುಬಿದಿರೆ ಕ್ಷೇತ್ರದಲ್ಲಿ 1,00,376 ಪುರುಷ ಮತದಾರರು, 1,07,404 ಮಹಿಳಾ ಮತದಾರರು, ಮಂಗಳೂರು ಉತ್ತರ ಕ್ಷೇತ್ರದಲ್ಲಿ 1,22,493 ಪುರುಷ ಮತದಾರರು, 1,30,290 ಮಹಿಳಾ ಮತದಾರರು, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 1,18,875 ಪುರುಷ ಮತದಾರರು, 1,30,093 ಮಹಿಳಾ ಮತದಾರರು, ಮಂಗಳೂರು ಕ್ಷೇತ್ರದಲ್ಲಿ 1,01,653 ಪುರುಷ ಮತದಾರರು, 1,05,617 ಮಹಿಳಾ ಮತದಾರರು, ಬಂಟ್ವಾಳ ಕ್ಷೇತ್ರದಲ್ಲಿ 1,12,159 ಪುರುಷ ಮತದಾರರು, 1,15,836 ಮಹಿಳಾ ಮತದಾರರು, ಪುತ್ತೂರು ಕ್ಷೇತ್ರದಲ್ಲಿ 1,05,411 ಪುರುಷ ಮತದಾರರು, 1,08,993 ಮಹಿಳಾ ಮತದಾರರು, ಸುಳ್ಯ ಕ್ಷೇತ್ರದಲ್ಲಿ 1,02,214 ಪುರುಷ ಮತದಾರರು, 1,04,993 ಮಹಿಳಾ ಮತದಾರರು ಇದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
ವಿಧಾನಸಭಾ ಕ್ಷೇತ್ರಪುರುಷಮಹಿಳೆಒಟ್ಟು
ಬೆಳ್ತಂಗಡಿ1,14,2571,16,0952,30,352
ಮೂಡುಬಿದಿರೆ 1,00,3761,07,4042,07,780
ಮಂಗಳೂರು ಉತ್ತರ1,22,4931,30,2902,52,783
ಮಂಗಳೂರು ದಕ್ಷಿಣ1,18,8751,30,0932,48,968
ಮಂಗಳೂರು1,01,6531,05,6172,07,270
ಬಂಟ್ವಾಳ1,12,1591,15,836 2,27,995
ಪುತ್ತೂರು1,05,4111,08,993 2,14,404
ಸುಳ್ಯ 1,02,2141,04,9932,07,207

ಯುವ ಮತದಾರರ ಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಇಳಿಮುಖ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವ ಯುವ ಮತದಾರರ ಲೆಕ್ಕಾಚಾರ ಗಮನಿಸಿದಾಗ ಯುವ ಮಹಿಳೆಯರ ಸಂಖ್ಯೆ ಇಳಿಮುಖವಾಗಿದೆ. ಲೋಕಸಭಾ ಕ್ಷೇತ್ರದಲ್ಲಿ 18,310 ಯುವ ಪುರುಷ ಮತದಾರರಿದ್ದರೆ, ಯುವ 17,376 ಮಹಿಳಾ ಮತದಾರರಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭೆಗಳ ಪೈಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಡೆ ಯುವ ಮಹಿಳಾ ಮತದಾರರ ಸಂಖ್ಯೆ ಕಡಿಮೆಯಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿಯೂ ಮಹಿಳಾ ಮತದಾರರ ಪ್ರಾಬಲ್ಯ; ವಿಧಾನಸಭಾವಾರು ಲೆಕ್ಕಾಚಾರ ಹೀಗಿತ್ತು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 1,09,485 ಪುರುಷ, 1,10,114 ಮಹಿಳಾ ಮತದಾರರು ಇದ್ದರು. ಮೂಡುಬಿದಿರೆ 97,303 ಪುರುಷರು, 1,04,400 ಮಹಿಳೆಯರು, ಮಂಗಳೂರು ಉತ್ತರದಲ್ಲಿ 1,16,288 ಪುರುಷರು, 1,22,323 ಮಹಿಳೆಯರು, ಮಂಗಳೂರು ದಕ್ಷಿಣದಲ್ಲಿ 114966 ಪುರುಷ, 125171 ಮಹಿಳೆಯರು, ಮಂಗಳೂರು ಕ್ಷೇತ್ರದಲ್ಲಿ 96,803 ಪುರುಷರು, 1,00,328 ಮಹಿಳೆಯರು, ಬಂಟ್ವಾಳದಲ್ಲಿ 1,09,351 ಪುರುಷರು, 1,12,810 ಮಹಿಳೆಯರು, ಪುತ್ತೂರು 1,01,473 ಪುರುಷರು, 1,02,956 ಮಹಿಳೆಯರು, ಸುಳ್ಯ ಕ್ಷೇತ್ರದಲ್ಲಿ 99,637 ಪುರುಷ, 1,00,948 ಮಹಿಳೆ ಸೇರಿದಂತೆ ಒಟ್ಟು ಪುರುಷರು 8,45,306, ಒಟ್ಟು ಮಹಿಳೆಯರು 8,79,050 ಇದ್ದರು.

ಒಟ್ಟಿನಲ್ಲಿ ಕ್ಷೇತ್ರದಲ್ಲಿ ಹಿಂದಿನಿಂದಲೂ ಪುರುಷರಿಗಿಂತ ಮಹಿಳಾ ಮತದಾರರ ಪ್ರಾಬಲ್ಯವಿರುವುದು ಅಂಕಿ-ಅಂಶಗಳಿಂದ ಕಂಡುಬರುತ್ತದೆ. ಆದರೆ, ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೋ ಅಥವಾ ಅವಕಾಶ ಸಿಗುತ್ತಿಲ್ಲವೋ ಗೊತ್ತಿಲ್ಲ. ಆದರೆ, ಅವರ ಸ್ಪರ್ಧೆ ಮಾಡದಿರುವುದು ಬೇಸರದ ಸಂಗತಿಯಾಗಿದೆ.

ಇದನ್ನೂ ಓದಿ: ಅಗ್ನಿ ಪರೀಕ್ಷೆಯಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಇತಿಹಾಸ ಹೀಗಿದೆ - Dakshina Kannada Constituency

ETV Bharat Logo

Copyright © 2025 Ushodaya Enterprises Pvt. Ltd., All Rights Reserved.