ETV Bharat / state

ಬ್ಯಾಂಕ್​ಗೆ ಹಣ ಬಿಡಿಸಲು ಹೋದ ಮಹಿಳೆ ಜಮೀನಿನಲ್ಲಿ ಶವವಾಗಿ ಪತ್ತೆ, ಪತಿಯೇ ಕೊಲೆಗೈದ ಶಂಕೆ - WOMAN FOUND DEAD

ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಕರೆಂಟ್​ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಿ ಕುಟುಂಬಸಮೇತ ನಾಪತ್ತೆಯಾಗಿದ್ದಾನೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

Bilichodu Police Station
ಬಿಲಿಚೋಡು ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Oct 24, 2024, 6:45 PM IST

Updated : Oct 24, 2024, 7:32 PM IST

ದಾವಣಗೆರೆ: ಹಣ ಬಿಡಿಸಲೆಂದು ಬ್ಯಾಂಕ್​ಗೆ ತೆರಳಿದ ಪತ್ನಿಯನ್ನು ಪತಿಯೇ ಕೊಲೆಗೈದ ಆರೋಪ ಕೇಳಿ ಬಂದಿದೆ. ಬುಧವಾರ ಜಗಳೂರು ತಾಲೂಕಿನ ಉಜ್ಜಪ್ಪರವಡೇರಹಳ್ಳಿ ಸಮೀಪದ ಜಮೀನಿನಲ್ಲಿ ಸತ್ಯಮ್ಮ ಎಂಬ ಮಹಿಳೆಯ ಮೃತದೇಹ ಸಿಕ್ಕಿದ್ದು, ಆಕೆಯನ್ನು ಪತಿ ಅಣ್ಣಪ್ಪ ಕೊಲೆ ಮಾಡಿರುವುದಾಗಿ ಸಂಬಂಧಿಕರು ಆರೋಪಿಸಿದ್ದಾರೆ.

"ಅಣ್ಣಪ್ಪ ಹಾಗೂ ಸತ್ಯಮ್ಮ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ ಮದ್ಯವ್ಯಸನಿಯಾಗಿದ್ದ. ನಿತ್ಯ ಮನೆಯಲ್ಲಿ ಹಣಕ್ಕಾಗಿ ಹೆಂಡತಿ ಜೊತೆ ಜಗಳವಾಡುತ್ತಿದ್ದ. ಬುಧವಾರವೂ ಜಗಳವಾದ ನಂತರ ತವರು ಮನೆಗೆ ಹೋಗಿದ್ದ ಸತ್ಯಮ್ಮ ಅಸಗೋಡು ಗ್ರಾಮದ ಬ್ಯಾಂಕ್​ಗೆ ಹಣ ಬಿಡಿಸಲು ತೆರಳಿದ್ದಳು. ಇದು ಗೊತ್ತಾಗಿ, ಅಲ್ಲಿಗೆ ಬಂದು ಹಣ ನೀಡುವಂತೆ ಪೀಡಿಸಿದ್ದಾನೆ. ಕೊಡದಿದ್ದಕ್ಕೆ ಬ್ಯಾಂಕ್​ನಲ್ಲೇ ಹಲ್ಲೆ ಮಾಡಿ, ಜಮೀನಿಗೆ ಎಳೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಬಳಿಕ ಮೈನ್ಸ್ ವಯರ್ ಕೆಳಗೆ ಬಿಸಾಕಿ ಕರೆಂಟ್ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಿದ್ದಾನೆ. ಕೊಲೆ ಪ್ರಕರಣ ದಾಖಲು ಮಾಡಿದ್ದೇವೆ. ಇದೀಗ ಅಣ್ಣಪ್ಪ ಹಾಗೂ ಆತನ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ" ಎಂದು ಮೃತಳ ಸಂಬಂಧಿಕರು ಹೇಳಿದರು.

ಮೃತಳ ಅಕ್ಕ (ETV Bharat)

ಬಿಳಿಚೋಡು ಪೊಲೀಸ್ ಠಾಣೆಯ ಪಿಐ ಸೋಮಶೇಖರ್ ಪ್ರತಿಕ್ರಿಯಿಸಿ, "ಸತ್ಯಮ್ಮ ಬ್ಯಾಂಕ್​ಗೆ ಹಣ ಬಿಡಿಸಲು ತೆರಳಿದಾಗ ಪತಿ ಅಣ್ಣಪ್ಪ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಆ ಬಳಿಕ ಜಮೀನಿನಲ್ಲಿ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ" ಎಂದರು.‌

ಇದನ್ನೂ ಓದಿ: ದಾವಣಗೆರೆ: ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಪತ್ತೆ; ಕೊಲೆ ಆರೋಪ

Last Updated : Oct 24, 2024, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.