ETV Bharat / state

ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್​ ಹೆಗ್ಡೆಗೆ ಗೃಹಲಕ್ಷ್ಮಿ ಯೋಜನೆಯ ಹಣ ದೇಣಿಗೆ ಕೊಟ್ಟ ಮಹಿಳೆ - Jayaprakash Hegde - JAYAPRAKASH HEGDE

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂ ಹಣವನ್ನು ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.

a-woman-donates-grihalakshmi-scheme-2-thousand-to-congress-candidate-jayaprakash-hegde
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್​ ಹೆಗ್ಡೆಗೆ ಮಹಿಳೆಯಿಂದ ಗೃಹಲಕ್ಷ್ಮಿ ಯೋಜನೆ ₹2 ಸಾವಿರ ಹಣ ದೇಣಿಗೆ
author img

By ETV Bharat Karnataka Team

Published : Apr 5, 2024, 9:46 PM IST

ಚಿಕ್ಕಮಗಳೂರು: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಮಹಿಳೆಯೊಬ್ಬರು ತನಗೆ ಬಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ದೇಣಿಗೆಯಾಗಿ ನೀಡಿದರು. ಮತ ಪ್ರಚಾರ ಸಂಬಂಧ ಜಯಪ್ರಕಾಶ್ ಹೆಗ್ಡೆ ನಗರದ 10ನೇ ವಾರ್ಡಿಗೆ ಈಚೆಗೆ ಭೇಟಿ ನೀಡಿದ ವೇಳೆ ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಸೋಮಶೇಖರ್ ಪತ್ನಿ ಪುಷ್ಪವತಿ ದೇಣಿಗೆ ನೀಡಿ ಗೆಲುವಿಗೆ ಶುಭ ಕೋರಿದ್ದಾರೆ.

ಈ ವೇಳೆ ಶಾಸಕ ಹೆಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಸೇರಿದಂತೆ ಇತರರು ಇದ್ದರು.

ಕೆಲ ದಿನಗಳ ಹಿಂದೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ ಅವರಿಗೆ ನಗರದ ತೇಗೂರು ಸರ್ಕಲ್‌ನಲ್ಲಿರುವ ಚಿಲ್ಲರೆ ಅಂಗಡಿ ವ್ಯಾಪಾರಸ್ಥರೊಬ್ಬರು ತಾಂಬೂಲದೊಂದಿಗೆ 25 ಸಾವಿರ ಹಣ ದೇಣಿಗೆ ನೀಡಿ, ಗೆಲುವು ಸಾಧಿಸುವಂತೆ ಹಾರೈಸಿದ್ದರು.

ಇದನ್ನೂ ಓದಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: 10 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ, ಒಂದು ತಿರಸ್ಕೃತ - Dakshina Kannada

ETV Bharat Logo

Copyright © 2024 Ushodaya Enterprises Pvt. Ltd., All Rights Reserved.