ETV Bharat / state

ದಾವಣಗೆರೆ: ಹೊಲದಲ್ಲಿ ಮಹಿಳೆ ಶವ ಪತ್ತೆ; ಪತಿಯಿಂದಲೇ ಕೊಲೆ ಆರೋಪ - Woman Found Dead - WOMAN FOUND DEAD

ಹಳ್ಳದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯ ಪತಿಯೇ ಕೊಲೆ ಮಾಡಿರುವುದಾಗಿ, ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

woman dead
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Sep 21, 2024, 8:23 PM IST

ದಾವಣಗೆರೆ: ಹಳ್ಳವೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದ ಜಮೀನಿನ ಬಳಿ ಬೆಳಕಿಗೆ ಬಂದಿದೆ. ಗೌರಮ್ಮ (39) ಮೃತ ಮಹಿಳೆಯಾಗಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಪೋಷಕರು, ಪೊಲೀಸರಿಗೆ ದೂರು ನೀಡಿದ್ದಾರೆ. ಚಿದಾನಂದ ಮೂರ್ತಿ ಕೊಲೆ ಆರೋಪ ಎದುರಿಸುತ್ತಿರುವ ಪತಿ. ಕಳೆದ ಆರು ತಿಂಗಳ ಹಿಂದೆ ಪಾಂಡೋಮಟ್ಟಿ ಗ್ರಾಮದ ಚಿದಾನಂದ ಮೂರ್ತಿ ಅವರನ್ನು ಮೃತ ಗೌರಮ್ಮಗೆ ಮದುವೆ ಮಾಡಿಕೊಡಲಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಚನ್ನಗಿರಿ ಠಾಣೆ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ. ತಲೆಮರೆಸಿಕೊಂಡಿರುವ ಪತಿ ಚಿದಾನಂದ ಮೂರ್ತಿ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪ್ರಕರಣದ ಬಗ್ಗೆ ಎಸ್​​ಪಿ ಮಾಹಿತಿ (ETV Bharat)

ಎಸ್​ಪಿ ಹೇಳಿದ್ದೇನು?: ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್​, ''ಗೌರಮ್ಮ ಎಂಬ ಮಹಿಳೆ ಶವ ಹೊಲದಲ್ಲಿನ ಸುಮಾರು ಮೂರುವರೆ ಅಡಿ ಆಳದ ಹಳ್ಳದಲ್ಲಿದೆ ಎಂಬ ಮಾಹಿತಿ ಲಭ್ಯವಾಯಿತು. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದುವರೆಗಿನ ಮಾಹಿತಿ ಪ್ರಕಾರ, ಮಹಿಳೆಯ ಪತಿಯೇ ಕೊಲೆ ಮಾಡಿರುವುದಾಗಿ, ಮೃತಳ ಮನೆಯವರು ದೂರು ನೀಡಿದ್ದಾರೆ. ಆರೋಪಿತ ಪತಿಯನ್ನು ಇನ್ನೂ ಬಂಧನ ಮಾಡಬೇಕಿದೆ. ಅಲ್ಲದೇ, ಮರಣೋತ್ತರ ವರದಿಯೂ ಬರಬೇಕಿದೆ. ಯಾಕೆಂದರೆ, ಮಹಿಳೆಯ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ತನಿಖೆ ಮುಂದುವರೆದಿದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಕೊಲೆ; ದೇಹ ಕತ್ತರಿಸಿ ಫ್ರಿಡ್ಜ್​ನಲ್ಲಿ ಇಟ್ಟ ಆರೋಪಿ - Murder In Bengaluru

ETV Bharat Logo

Copyright © 2024 Ushodaya Enterprises Pvt. Ltd., All Rights Reserved.