ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವೆಡೆ ಇಂದು ಮಳೆಯಾಗಿದೆ. ಸಿಡಿಲು ಬಡಿದು ಮಹಿಳೆ ಹಾಗೂ 20ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟ ಘಟನೆ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದಲ್ಲಿ ನಡೆದಿದೆ.
ಗಣಗಲು ಗ್ರಾಮದ ರತ್ನಮ್ಮ ಮೃತರು. ಶುಕ್ರವಾರ ಮಧ್ಯಾಹ್ನ ಧಿಡೀರ್ ಗಾಳಿಸಹಿತ ಮಳೆ ಆರಂಭವಾದ್ದರಿಂದ, ತೋಟದ ಬಳಿ ಬೇವಿನ ಮರದಡಿ ಮೇಕೆಗಳ ಜೊತೆ ರತ್ನಮ್ಮ ನಿಂತಿದ್ದರು. ಆಗ ಸಿಡಿಲು ಬಡಿದು ಮೇಕೆಗಳ ಜೊತೆ ಮಹಿಳೆಯೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಮಳೆ ಅರ್ಭಟಕ್ಕೆ ಊಟ ಬಿಟ್ಟು ಓಡಿದ ಜನ: ಇನ್ನೊಂದೆಡೆ, ಹೊಸಕೋಟೆ ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಮಳೆ ಅಡ್ಡಿಪಡಿಸಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಪೆಂಡಾಲ್ನಲ್ಲಿ ಊಟ ಮಾಡುವ ವೇಳೆ ಗಾಳಿ ಸಹಿತ ಮಳೆಯ ಅರ್ಭಟ ಜೋರಾಯಿತು. ಇದರಿಂದ ಪೆಂಡಾಲ್ ಚೆಲ್ಲಾಪಿಲ್ಲಿಯಾಗಿದ್ದು, ಜನರು ಅರ್ಧದಲ್ಲೇ ಊಟ ಬಿಟ್ಟು ಅಲ್ಲಿಂದ ಓಡಿದರು. ಟೇಬಲ್ ಮೇಲಿನ ಊಟವೆಲ್ಲ ನೀರುಪಾಲಾಯಿತು.