ETV Bharat / state

Watch: ಬಿಳಿಗಿರಿರಂಗನ ಬೆಟ್ಟಕ್ಕೆ ಕಾಡಾನೆ ಎಂಟ್ರಿ; ಗಜರಾಜನ ಕಂಡು ಬೆಚ್ಚಿಬಿದ್ದು ಪೇರಿಕಿತ್ತ ಜನ - WILD ELEPHANT ENTER ON THE ROAD - WILD ELEPHANT ENTER ON THE ROAD

ಬಿಳಿಗಿರಿರಂಗನ ಬೆಟ್ಟದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆಯೊಂದು ಧಾವಿಸಿ, ಜನರನ್ನು ಭಯಭೀತರನ್ನಾಗಿಸಿದೆ.

wild elephant
ಬಿಳಿಗಿರಿರಂಗನ ಬೆಟ್ಟಕ್ಕೆ ಕಾಡಾನೆ (ETV Bharat)
author img

By ETV Bharat Karnataka Team

Published : Jun 13, 2024, 10:02 AM IST

Updated : Jun 13, 2024, 10:54 AM IST

ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಡಾನೆ (ETV Bharat)

ಚಾಮರಾಜನಗರ: ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆಯೊಂದು ಎಲ್ಲೆಂದರಲ್ಲಿ ಓಡಾಡಿ, ಜನರನ್ನು ಆತಂಕಕ್ಕೀಡು ಮಾಡಿರುವ ಘಟನೆ ನಡೆದಿದೆ‌‌‌. ಬಿಳಿಗಿರಿರಂಗನ ಬೆಟ್ಟದ ಮುಖ್ಯರಸ್ತೆ, ಬಂಗಲೆ ಪೋಡಿನ ನಡುವೆ ನೀಳದಂತದ ಕಾಡಾನೆಯೊಂದು ಓಡಾಡಿದೆ. ಅಲ್ಲಿನ ಜನರು ಹಾಗೂ ಭಕ್ತರನ್ನು ಪರದಾಡುವಂತೆ ಮಾಡಿದೆ.

ಇದನ್ನೂ ಓದಿ: Watch: ಚಿಕ್ಕಮಗಳೂರು ನಗರ ಪ್ರದೇಶಕ್ಕೆ ಒಂಟಿ ಸಲಗದ ದಾಳಿ: ಜಾನುವಾರುಗಳನ್ನು ಅಟ್ಟಾಡಿಸಿದ ಕಾಡಾನೆ - WILD ELEPHANT ATTACK

ಬೆಳ್ಳಂಬೆಳಗ್ಗೆಯೇ ಗಜರಾಜನ ದಾದಾಗಿರಿಗೆ ಜನರು ಅವಾಕ್ಕಾಗಿದ್ದಾರೆ. ಈ ವೇಳೆ ಎದುರಿಗೆ ಬಂದ ಕೆಎಸ್​ಆರ್​ಟಿಸಿ ಬಸ್, ಟಾಟಾ ಏಸ್ ಸೇರಿದಂತೆ ಇತರ ವಾಹನಗಳನ್ನು ಕಾಡಾನೆ ಹಿಮ್ಮೆಟ್ಟಿಸಿ ಓಡಿಸಿದೆ.

ಕಳೆದ ಎರಡು ತಿಂಗಳಿನಿಂದಲೂ ಪೋಡುಗಳತ್ತ ಈ ಆನೆ ಧಾವಿಸುತ್ತಿದೆ ಎಂದು ತಿಳಿದು ಬಂದಿದೆ‌. ಮಾವಿನ ಹಣ್ಣು‌ ಹಾಗೂ ಹಲಸಿನ ಹಣ್ಣಿಗಾಗಿ ಪೋಡುಗಳತ್ತ ಬರುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: Watch: ಕಾಡಿನಲ್ಲಿ ಪ್ರಾಬಲ್ಯಕ್ಕಾಗಿ ಮದಗಜಗಳ ನಡುವೆ ರೋಚಕ, ರಣರೋಚಕ ಕಾಳಗ: ಕಾಡಾನೆ ಅಟ್ಟಾಡಿಸಿದ ಒಂಟಿ ಸಲಗ!! - Wild Elephant Video

Last Updated : Jun 13, 2024, 10:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.