ETV Bharat / state

ಪ್ರೀತಿಸಿ ಮದುವೆಯಾದ ಪತಿಯ ಕೈ ಕಾಲು ಕಟ್ಟಿ ದೋಸೆ ಹಂಚಿನಿಂದ ಕೊಲೆಗೈದ ಪತ್ನಿ - Wife Killed Husband - WIFE KILLED HUSBAND

ಗೃಹಿಣಿಯೊಬ್ಬಳು ಪ್ರೀತಿಸಿ ಮದುವೆಯಾದ ಗಂಡನ ಕೈ ಕಾಲು ಕಟ್ಟಿ ದೋಸೆ ಹಂಚಿನಿಂದ ಹಲ್ಲೆಗೈದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

MAN KILLED WOMAN  KALABURAGI CRIME NEWS  KALABURAGI  QUARREL BETWEEN HUSBAND AND WIFE
ಆರೋಪಿ ರಂಜಿತಾ, ಕೊಲೆಯಾದ ಈಶ್ವರ (ETV Bharat)
author img

By ETV Bharat Karnataka Team

Published : Aug 2, 2024, 9:39 PM IST

ಕಲಬುರಗಿ: ತಾಳಿ ಕಟ್ಟಿದ ಗಂಡನನ್ನೇ ಮನೆಯವರೊಂದಿಗೆ ಸೇರಿ ಹೆಂಡತಿ ಭಯಾನಕ ರೀತಿಯಲ್ಲಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ನ್ಯೂ ರಾಘವೇಂದ್ರ ಕಾಲೊನಿಯ ಗ್ರೀನ್ ಪಾರ್ಕ್ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.

ಕಮಲಾಪುರ ತಾಲೂಕಿನ ಭೂಸಣಗಿ ಗ್ರಾಮದ ಹಾಗು ಸದ್ಯ ಕಲಬುರಗಿಯ ಕನಕನಗರದಲ್ಲಿ ವಾಸವಿದ್ದ ಆಟೋ ಚಾಲಕ ಈಶ್ವರ ಚಿತ್ತಾಪುರ (25) ಕೊಲೆಯಾದವರು. ಆರೋಪಿಗಳಾದ ಈಶ್ವರ ಪತ್ನಿ ರಂಜಿತಾ, ಅತ್ತೆ ಜಯಶ್ರೀ, ಅಳಿಯ ರಂಜಿತ್​ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈಶ್ವರ ಹಾಗೂ ರಂಜಿತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಮಗು ಇದೆ. ಗಂಡ-ಹೆಂಡತಿ ನಡುವೆ ಸಾಮರಸ್ಯದ ಜೀವನ ಸಾಧ್ಯವಾಗದೇ ಪದೇ ಪದೇ ಗಲಾಟೆ ಮಾಡಿಕೊಳ್ಳುತ್ತಿದ್ದರು. ವರದಕ್ಷಿಣೆ ಕಿರುಕುಳ ಆರೋಪದಡಿ ರಂಜಿತಾ, ಪತಿ ವಿರುದ್ಧ ಮಹಿಳಾ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಎರಡನೇ ಬಾರಿ ಗರ್ಭಿಣಿಯಾದ ರಂಜಿತಾ ತವರಿಗೆ ಬಂದು ಹೆರಿಗೆ ಮಾಡಿಸಿಕೊಂಡಿದ್ದರು. ಹೆಂಡತಿಯ ಹೆರಿಗೆ ವಿಷಯ ಕೇಳಿದ ಈಶ್ವರ, ನಾಲ್ಕು ದಿನದ ಹಿಂದೆ ಹೆಂಡತಿ ಮಕ್ಕಳನ್ನು ನೋಡಲು ಬಂದಿದ್ದು, ಬರುವಾಗ ಕಂಠಪೂರ್ತಿ ಕುಡಿದಿದ್ದನಂತೆ. ಈ ವೇಳೆಯೂ ಇಬ್ಬರ ನಡುವೆ ಗಲಾಟೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಂಡತಿ ಮೇಲೆ ಸಿಟ್ಟು ಮಾಡಿಕೊಂಡು ಹೋಗುವಾಗ ಸುಮ್ಮನೆ ಹೋಗದ ಈಶ್ವರ, ಮನೆ ಮುಂದೆ ನಿಲ್ಲಿಸಿದ್ದ ಅಳಿಯನ ಬೈಕ್ ಜಖಂಗೊಳಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ರಂಜಿತ್ ಮಾವನಿಗಾಗಿ ಹುಡುಕಾಡಿದ್ದಾನೆ. ಆದ್ರೆ ಸಿಕ್ಕಿರಲಿಲ್ಲ. ಗುರುವಾರ ಮತ್ತೆ ಈಶ್ವರ ತನ್ನ ಪತ್ನಿಯ ತವರು ಮನೆಗೆ ಬಂದಿದ್ದು, ಜಗಳ ನಡೆದಿದೆ. ಈ ವೇಳೆ ಪತ್ನಿ, ಅಳಿಯ ಹಾಗು ಅತ್ತೆ ಮೂವರು ಸೇರಿ ಈಶ್ವರನ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ದೋಸೆ ಹಂಚು ಸೇರಿದಂತೆ ಇತರೆ ವಸ್ತುಗಳಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ವೇಲ್​ದಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಈಶ್ವರನ ಮೃತದೇಹವನ್ನು ಮನೆಯಲ್ಲಿ ಬಟ್ಟೆಯಿಂದ ಸುತ್ತಿಟ್ಟು ಮುಚ್ಚಿದ್ದರು. ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದರು. ಆದರೆ ಅಕ್ಕಪಕ್ಕದವರು ಕೂಗಾಡುವ ಶಬ್ದ ಕೇಳಿ ಕೊಲೆ ನಡೆದಿರುವ ಶಂಕೆಯಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆಯ ಕೊಣೆಯೊಂದರಲ್ಲಿ ಮುಚ್ಚಿಟ್ಟ ಶವ ಪತ್ತೆ ಮಾಡಿ ಮರಣೋತ್ತರ ಪರಿಕ್ಷೆಗೆ ಕಳಿಸಿದ್ದಾರೆ. ಇತ್ತ ಆರೋಪಿಗಳನ್ನೂ ವಶಕ್ಕೆ ಪಡೆದಿದ್ದಾರೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಇಂದಿನಿಂದ ಹೊಸ ನಿಯಮ ಜಾರಿ: ಮೊದಲ ದಿನವೇ 33 ಚಾಲಕರ ವಿರುದ್ಧ ಎಫ್‌ಐಆರ್ - Speed Limit Violation Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.