ETV Bharat / state

ಅಸಂಘಟಿತ ಕಾರ್ಮಿಕರಿಗೆ 'ಇ-ಶ್ರಮ್' ಯೋಜನೆಯಿಂದ ಸಿಗುವ ಸೌಲಭ್ಯಗಳೇನು? - E Shram

ಅಸಂಘಟಿತ ಕಾರ್ಮಿಕರ ಡೇಟಾ ಸಂಗ್ರಹಿಸಲು ಹಾಗೂ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ತಲುಪಲು ಕೇಂದ್ರ ಸರ್ಕಾರವು ಇ-ಶ್ರಮ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.

labours
ಕಾರ್ಮಿಕರು
author img

By ETV Bharat Karnataka Team

Published : May 1, 2024, 10:49 PM IST

ಬೆಂಗಳೂರು: ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 'ಇ- ಶ್ರಮ್' ಯೋಜನೆಯನ್ನು ಆರಂಭಿಸಿದೆ. ಎಲ್ಲ ಅಸಂಘಟಿತ ಕಾರ್ಮಿಕರ ಡೇಟಾವನ್ನು ಸಂಗ್ರಹಿಸಲು ಹಾಗೂ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಸರ್ಕಾರವು ಇ-ಶ್ರಮ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.

ಅಸಮಾನತೆಯನ್ನು ಹೋಗಲಾಡಿಸಲು ಇ-ಶ್ರಮ್ ಯೋಜನೆಯನ್ನು ಜಾರಿಗೆ ತರಲಾಗಿದೆ. ದೇಶದಲ್ಲಿರುವ 45 ಕೋಟಿ ಅಸಂಘಟಿತರ ಪೈಕಿ ಸುಮಾರು 30 ಕೋಟಿ ಮಂದಿ ಇ-ಶ್ರಮ್ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಗೆ ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು, ಚಾಲಕರು, ಮನೆಗೆಲಸದವರು ಸೇರಿ 379 ವರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಸೇರ್ಪಡೆ ಮಾಡಲಾಗಿದೆ.

ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಸಂಖ್ಯೆಯುಳ್ಳ ಕಾರ್ಡ್ ನೀಡಲಾಗಿದೆ. ಈ ಕಾರ್ಡ್‌ನಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ರಾಜ್ಯ ಮಂಡಳಿಯಿಂದ ಸಪ್ತ ಯೋಜನೆ ಕರ್ನಾಟಕದಲ್ಲಿ ಶ್ರಮಿಕ ವರ್ಗದವರಿಗಾಗಿ ರಾಜ್ಯ ಸರ್ಕಾರ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿವೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ನೆರವು, ಆರೋಗ್ಯ ನೆರವು ಸಹಿತ 7 ಕಾರ್ಯಕ್ರಮಗಳನ್ನು ಕರ್ನಾಟಕ ಕಾರ್ಮಿಕರ ಕಲ್ಯಾಣ ಮಂಡಳಿಗೆ ಅನುಷ್ಠಾನದ ಹೊಣೆ ವಹಿಸಲಾಗಿದೆ. ಮಾಸಿಕ 21 ಸಾವಿರ ರೂ.ಗಿಂತ ಕಡಿಮೆ ಮೊತ್ತವನ್ನು ಪಡೆಯುವ ಯಾವುದೇ ಕಾರ್ಮಿಕ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಏನಿದು ಇ-ಶ್ರಮ್ ಕಾರ್ಡ್?: ಇ-ಶ್ರಮ್ ಒಂದು ಕ್ರಾಂತಿಕಾರಿ ಉಪಕ್ರಮವಾಗಿದ್ದು, ಅಸಂಘಟಿತ ವಲಯದ ಕಾರ್ಮಿಕರಿಗೆ ಸುರಕ್ಷತಾ ಜಾಲವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಸಮಗ್ರ ಡೇಟಾ ಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಕಾರ್ಮಿಕರನ್ನು ನೋಂದಾಯಿಸುವುದು ಮಾತ್ರವಲ್ಲದೆ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಪ್ರಯೋಜನಗಳಿಗೆ ಅವರ ಪ್ರವೇಶವನ್ನು ಸುಲಭಗೊಳಿಸುತ್ತದೆ.

ಇದು ಕಾರ್ಮಿಕರಾಗಿ ಕೆಲಸ ಮಾಡುವ ವ್ಯಕ್ತಿಗಳು, ದಿನಗೂಲಿ ಗಳಿಸುವವರು ಮತ್ತು ಅನೌಪಚಾರಿಕ ಉದ್ಯೋಗದಲ್ಲಿರುವ ಇತರರನ್ನು ಒಳಗೊಂಡಿರುತ್ತದೆ. ಮುಖ್ಯವಾಗಿ, ನೀವು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)/ನೌಕರರ ರಾಜ್ಯ ವಿಮಾ ನಿಗಮ (ESIC) ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆ (NPS)ನ ಸದಸ್ಯರಾಗಬಾರದು.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಇ-ಶ್ರಮ್ ಕಾರ್ಡ್ ಫಾರ್ಮ್‌ಗೆ ಅರ್ಜಿ ಸಲ್ಲಿಸಬಹುದು, ಅದರ ಮೂಲಕ ಅವರು ಮರಣ ವಿಮೆ, 60 ವರ್ಷಗಳ ನಂತರ ಪಿಂಚಣಿ ಮತ್ತು ಅಸಮರ್ಥತೆಯ ಸಂದರ್ಭದಲ್ಲಿ ಇತರ ರೀತಿಯ ಆರ್ಥಿಕ ಸಹಾಯದಂತಹ ವಿವಿಧ ಇ-ಶ್ರಾಮ್ ಕಾರ್ಡ್ ಪ್ರಯೋಜನಗಳನ್ನು ಪಡೆಯಬಹುದು.

ಇ-ಶ್ರಮ್ ಕಾರ್ಡ್ ಪ್ರಯೋಜನಗಳೇನು?: ಇ-ಶ್ರಮ್ ಕಾರ್ಡ್ ಅಸಂಘಟಿತ ವಲಯದ ಉದ್ಯೋಗಿಗಳಿಗೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. 60 ವರ್ಷ ತುಂಬಿದ ನಂತರ ತಿಂಗಳಿಗೆ 3 ಸಾವಿರ ರೂ. ಪಿಂಚಣಿ ನೀಡಲಾಗುತ್ತದೆ. ಪಿಂಚಣಿದಾರ ಮೃತನಾದಲ್ಲಿ ಆತನ ಪತ್ನಿ/ಪತಿ ಅಥವಾ ಅವಲಂಬಿತರಿಗೆ ಪಿಂಚಣಿ ಸಿಗಲಿದೆ.

ವಾರ್ಷಿಕ ಶೈಕ್ಷಣಿಕ ನೆರವು: ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 3 ಸಾವಿರ ರೂ., ಪಿಯುಸಿ/ಡಿಪ್ಲೊಮಾ/ಟಿಸಿಎಚ್ ವ್ಯಾಸಂಗದವರಿಗೆ 4 ಸಾವಿರ ರೂ., ಪದವಿಗೆ 5 ಸಾವಿರ ರೂ., ಪಿಜಿಗೆ 6,000 ಸಾವಿರ ರೂ., ವೈದ್ಯಕೀಯ/ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ನೀಡಲಾಗುತ್ತದೆ.

ವೈದ್ಯಕೀಯ ನೆರವು: ವೈದ್ಯಕೀಯ ನೆರವಿಗಾಗಿ ವಾರ್ಷಿಕ ಗರಿಷ್ಠ 25 ಸಾವಿರ ರೂ. ನೀಡಲಾಗುತ್ತದೆ. ಸಾಮಾನ್ಯ ವೈದ್ಯಕೀಯ ತಪಾಸಣೆಗೆ 1 ಸಾವಿರ ರೂ. ನೀಡಲಾಗುತ್ತದೆ. ಅಲ್ಲದೆ ಮಹಿಳಾ ಕಾರ್ಮಿಕರಿಗಾಗಿ ಹೆರಿಗೆ ಸೌಲಭ್ಯದ ನೆರವು ರೂಪದಲ್ಲಿ 10 ಸಾವಿರ ರೂ. ಸಿಗುತ್ತದೆ.

ವೈದ್ಯಕೀಯ ಶಿಬಿರ: ಕಾರ್ಮಿಕ ಸಂಘಟನೆಗಳು ಆಯೋಜಿಸುವ ವೈದ್ಯಕೀಯ ಶಿಬಿರಗಳಿಗೆ 1 ಲಕ್ಷ ರೂ. ನೆರವು ದೊರೆಯಲಿದೆ. ಕಾರ್ಮಿಕ ಸಂಘಟನೆಗಳು ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ವಾರ್ಷಿಕ ಕ್ರೀಡಾ ಚಟುವಟಿಕೆಗೆ 1 ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗುತ್ತದೆ.

ಕಾರ್ಮಿಕರೊಬ್ಬರು ಅಪಘಾತಕ್ಕೊಳಗಾದಲ್ಲಿ ಮೊದಲ ಮೂರು ತಿಂಗಳ ಅವಧಿಯೊಳಗೆ 10 ಸಾವಿರ ರೂ. ನೆರವು ನೀಡಲಾಗುತ್ತದೆ. ಕಾರ್ಮಿಕ ಮೃತನಾದರೆ ಅಂತ್ಯಕ್ರಿಯೆಗಾಗಿ ಅವರ ಕುಟುಂಬದವರಿಗೆ 10 ಸಾವಿರ ರೂ. ನೆರವು ಒದಗಿಸಲಾಗುತ್ತದೆ. ಈ ಸೌಲಭ್ಯ ಪಡೆದುಕೊಳ್ಳಲು 6 ತಿಂಗಳು ಅವಕಾಶವಿದೆ.

ಇ-ಶ್ರಮ್ ಕಾರ್ಡ್‌ಗೆ ಮಾನದಂಡವೇನು?: ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಇ-ಶ್ರಮ್ ಕಾರ್ಡ್‌ಗೆ ಅರ್ಹರಾಗಿರುತ್ತಾರೆ. ಕೆಲಸಗಾರನಿಗೆ 16-59 ವರ್ಷ ವಯಸ್ಸಾಗಿರಬೇಕು. ಇ-ಶ್ರಮ್ ಕಾರ್ಡ್‌ಗಾಗಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಜೊತೆಗೆ ಕಾರ್ಮಿಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು.

ನೋಂದಣಿ ಹೇಗೆ: ಇ-ಶ್ರಮ್ ಕಾರ್ಡ್ ಅರ್ಜಿಯನ್ನು ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಅಥವಾ ಇ-ಶ್ರಮ್ ಪೋರ್ಟಲ್ ಮೂಲಕ ಸಲ್ಲಿಸಬಹುದು. ಅರ್ಹರು ಇ-ಶ್ರಮ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ತೆರಳಿ ನೀಡಬಹುದು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರಿಗೆ ಅನ್ಯಾಯ ಮಾಡುವವರ ಜೊತೆ ಬಿಜೆಪಿ ಇರಲ್ಲ: ಅಮಿತ್ ಶಾ - Amit Shah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.