ETV Bharat / state

ನಾವು ಹಿಂದೂಗಳ ರಕ್ಷಣೆಗೆ ಸಿದ್ಧ: ಆರ್.ಅಶೋಕ್‌

ಮಂಡ್ಯದಲ್ಲಿ ಹನುಮ ಧ್ವಜ ತೆರವಿಗೆ ಆರ್​.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಲಾಠಿಚಾರ್ಜ್ ಅಲ್ಲ, ಗೋಲಿಬಾರ್ ಮಾಡಿದರೂ ನಾವು ಹಿಂದೂಗಳ ರಕ್ಷಣೆ ಮಾಡುವುದನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

r ashok
ಆರ್​. ಅಶೋಕ್
author img

By ETV Bharat Karnataka Team

Published : Jan 29, 2024, 9:51 AM IST

ಬೆಂಗಳೂರು: ರಾಜ್ಯ ಸರ್ಕಾರ ರಾಮ ಮತ್ತು ಹನುಮ ಭಕ್ತರ ವಿರುದ್ಧ ಏಕಪಕ್ಷೀಯವಾಗಿ ವರ್ತಿಸಿ ಹತ್ತಿಕ್ಕುತ್ತಿದೆ. ಕೇಸರಿ ಬಣ್ಣ, ಹನುಮನ ಧ್ವಜ ನಿಮಗೆ ಸಹಿಸಲಾಗದಿದ್ದರೆ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿ, ಗೋಲಿ ಬಾರ್​ ಮಾಡಿ, ಸುಳ್ಳು ಕೇಸು ಖಾಕಿ ಬಂಧಿಸಿ. ಆದರೆ ನಾವು ಹಿಂದೂಗಳ ರಕ್ಷಣೆ ಮಾಡಲು ಸಿದ್ಧ. ನಿಮ್ಮ ಹಿಂದೂ ದ್ವೇಷ, ದೊಡ್ಡದೋ ನಮ್ಮ ಹನುಮ ಭಕ್ತಿ ದೊಡ್ಡದೋ ನೋಡಿಯೇ ಬಿಡೋಣ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್​.ಅಶೋಕ್​ ಸವಾಲೆಸೆದರು.

ಮಂಡ್ಯದಿಂದ ವಾಪಸಾದ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರಗೋಡು ಗ್ರಾಮದಲ್ಲಿ ಮೂರು ತಿಂಗಳ ಮೊದಲೇ ಹನುಮ ಧ್ವಜ ಹಾರಿಸಲು ಸ್ಥಳೀಯ ರಾಮಸೇವಾ ಮಂಡಳಿ ಸ್ಥಳೀಯ ಪಂಚಾಯತಿ ಅನುಮತಿ ಪಡೆದುಕೊಂಡಿದೆ. ಸ್ವಂತ ಖರ್ಚಿನಲ್ಲಿ ಬೃಹತ್ ಕಂಬ ಸ್ಥಾಪಿಸಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ದಿನ ಹನುಮಧ್ವಜ ಹಾರಿಸಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಧ್ವಜ ಹಾರಿಸಲಾಗಿದೆ. ಇದರಿಂದ ಯಾರಿಗೂ ತೊಂದರೆ ಆಗುತ್ತಿರಲಿಲ್ಲ.

ಅಂದಿನಿಂದಲೂ ಹನುಮಧ್ವಜ ಹಾರಾಡುತ್ತಿತ್ತು. ಹೀಗಿರುವಾಗ ಇಂದು (ನಿನ್ನೆ) ಏಕಾಏಕಿ ಪೊಲೀಸರು ಗ್ರಾಮಕ್ಕೆ ಧಾವಿಸಿ ಹನುಮಧ್ವಜ ಇಳಿಸಿ ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಧ್ವಜ ಹಾರಿಸಿದ್ದಾರೆ. ಇದು ಆ ಗ್ರಾಮದ ಜನರ ಭಾವನೆಗಳಿಗೆ ವಿರುದ್ಧವಾಗಿದೆ. ಅವರ ವರ್ತನೆಯ ವಿರುದ್ಧ ಪ್ರತಿಭಟನೆ ನಡೆಸಿದ ಗ್ರಾಮಸ್ಥರ ವಿರುದ್ಧ ಪೊಲೀಸರು ಲಾಠಿಚಾರ್ಜ್ ಮಾಡಿ ದೌರ್ಜನ್ಯ ಮೆರೆದಿದ್ದಾರೆ. ಇದು ಗೂಂಡಾ ವರ್ತನೆ.

ಒಂದು ವೇಳೆ ಪೊಲೀಸರಿಗೆ ಗ್ರಾಮದಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂಬ ಉದ್ದೇಶ ಇದ್ದಿದ್ದರೆ ಅವರು ಸರಕಾರದ ವೆಚ್ಚದಲ್ಲಿ ಕಂಬ ಸ್ಥಾಪಿಸಿ ಹಾರಿಸಬಹುದಿತ್ತು. ಕಾನೂನುಬಾಹಿರವಾಗಿ ರಾಮ ಸೇವಾ ಮಂಡಳಿಯವರು ಅನುಮತಿ ಪಡೆದು ಹಾರಿಸಿದ್ದ ಹನುಮ ಧ್ವಜ ಇಳಿಸಿರುವುದು ಯಾವ ನ್ಯಾಯ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುರ್ತು ಪರಿಸ್ಥಿತಿ ನೆನಪಿಸುವ ವಾತಾವರಣ: ಹುಬ್ಬಳ್ಳಿಯಲ್ಲಿ ಅಯೋಧ್ಯಾ ರಾಮಜನ್ಮಭೂಮಿ ಚಳುವಳಿಯ ಕರಸೇವಕರ ಬಂಧನ ವಿರೋಧಿಸಿ ಪ್ರತಿಭಟಿಸಿದಾಗ, ನಂತರ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಬಳಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲೂ ಸಹ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ನನ್ನನ್ನು ಬಂಧಿಸಿತ್ತು. ಒಂದೇ ತಿಂಗಳಲ್ಲಿ ಮೂರು ಬಾರಿ ವಿಪಕ್ಷ ನಾಯಕನನ್ನು ಬಂಧನ ಮಾಡಿರುವುದು ಬಹುಶಃ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಅನ್ನಿಸುತ್ತೆ. ರಾಜ್ಯದಲ್ಲಿ ಅಕ್ಷರಶಃ ತುರ್ತು ಪರಿಸ್ಥಿತಿಯ ವಾತಾವರಣವಿದೆ ಎಂದು ಅಶೋಕ್ ಟೀಕಿಸಿದ್ದಾರೆ.

ಸಿಎಂ ಅವರೇ, ನಾವು ಹನುಮನ ಭಕ್ತರು. ನಿಮ್ಮ ಈ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ, ಜಗ್ಗುವುದೂ ಇಲ್ಲ. ರಾಮ ಎಲ್ಲಿರುತ್ತಾನೋ ಅಲ್ಲಿ ಆಂಜನೇಯ ಇರುವಂತೆ ಹಿಂದೂ ಧರ್ಮದ ಮೇಲೆ, ಹಿಂದೂಗಳ ಎಲ್ಲೇ ದೌರ್ಜನ್ಯ ನಡೆದರೂ ಅಲ್ಲಿ ಹಿಂದೂಗಳ ರಕ್ಷಣೆಗೆ ನಾವು ಇರುತ್ತೇವೆ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಇಂದು ಕೋಲಾರದಲ್ಲಿ ಪ್ರತಿಭಟನೆ: ಕೋಲಾರ ನಗರದ ಡಿಸಿ ಕಚೇರಿ ಮುಂಭಾಗ ಇಂದು ಸರಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಅಶೋಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು: ಪರಿಸ್ಥಿತಿ ಉದ್ವಿಗ್ನ; ಬಿಜೆಪಿ ಜೆಡಿಎಸ್​ ನಾಯಕರು ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.