ETV Bharat / state

ತುಮಕೂರನ್ನೂ ಗ್ರೇಟರ್ ಬೆಂಗಳೂರು ಮಾಡುವ ಪ್ರಸ್ತಾವನೆ ಇಡುತ್ತೇವೆ: ಜಿ.ಪರಮೇಶ್ವರ್ - G Parameshwar - G PARAMESHWAR

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕೆಂಬ ಕೂಗು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಜಿ.ಪರಮೇಶ್ವರ್, ತುಮಕೂರನ್ನೂ ಗ್ರೇಟರ್ ಬೆಂಗಳೂರು ಮಾಡುವ ಪ್ರಸ್ತಾವನೆ ಇಡುತ್ತೇವೆ ಎಂದು ತಿಳಿಸಿದರು.

Bengaluru  Tumakuru  Greater Bengaluru Minister G Parameshwar
ಗೃಹ ಸಚಿವ ಜಿ. ಪರಮೇಶ್ವರ್ (ETV Bharat)
author img

By ETV Bharat Karnataka Team

Published : Jul 10, 2024, 11:52 AM IST

ಬೆಂಗಳೂರು: ''ಮುಂದಿನ ದಿನಗಳಲ್ಲಿ ತುಮಕೂರನ್ನು ಗ್ರೇಟರ್ ಬೆಂಗಳೂರು ಮಾಡುವ ಪ್ರಸ್ತಾವನೆ ಇಡುತ್ತೇವೆ. ತುಮಕೂರಿಗೆ ಮೆಟ್ರೋ ತೆಗೆದುಗೊಂಡು ಹೋಗಬೇಕೆಂದು ಈಗಾಗಲೇ ಪ್ರಸ್ತಾವನೆ ಕೊಟ್ಟಿದ್ದೇವೆ. ಬಜೆಟ್​ನಲ್ಲೂ ಪ್ರಸ್ತಾಪವಾಗಿದೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

"ಇನ್ನು, ಎರಡನೇ ಏರ್‌ಪೋರ್ಟ್‌ ಅನ್ನೂ ಸಹ ತುಮಕೂರು ಭಾಗದಲ್ಲಿ ಮಾಡಬೇಕೆಂದು ಈ ಹಿಂದೆ ನಿರಾಣಿ ಸಚಿವರಾಗಿದ್ದಾಗ ಪ್ರಸ್ತಾವನೆ ಕೊಡಲಾಗಿತ್ತು. ಇದು ಇನ್ನೂ ಜೀವಂತವಾಗಿದೆ. ಮುಂದೆ ಬೆಂಗಳೂರು ಯಾವ ರೀತಿ ಬೆಳೆಯುತ್ತೋ ನೋಡಬೇಕು. ಗ್ರೇಟರ್ ಬೆಂಗಳೂರಿಗೆ ಅಗತ್ಯವಿರುವ ಪ್ಯಾರಾಮೀಟರ್ಸ್ ತುಂಬಬೇಕು. ಈಗಲೇ ಅಲ್ಲ, ಮುಂದಿನ ದಿನಗಳಲ್ಲಿ ನಾವು ಖಂಡಿತವಾಗಿ ಆ ಬೇಡಿಕೆ ಇಡುತ್ತೇವೆ'' ಎಂದು ಅವರು ತಿಳಿಸಿದರು.

ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ಡಿಕೆಶಿ ನೇತೃತ್ವದ ನಿಯೋಗ ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲು ಸಿಎಂಗೆ ಮನವಿ - Renaming Ramanagara

ETV Bharat Logo

Copyright © 2025 Ushodaya Enterprises Pvt. Ltd., All Rights Reserved.