ETV Bharat / state

ಇರಾನ್ ಜೊತೆ ಮಾತುಕತೆ ನಡೆಸಲಾಗಿದೆ, ಆದಷ್ಟು ಬೇಗ ಭಾರತೀಯರ ಬಿಡುಗಡೆಯಾಗಲಿದೆ: ಜೈಶಂಕರ್ - Iran israel row - IRAN ISRAEL ROW

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಸುದ್ದಿಗೋಷ್ಠಿ ನಡೆಸಿ, ಇರಾನ್ ಇಸ್ರೇಲ್ ಬಿಕ್ಕಟ್ಟು ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದರು.

Etv Bharat
Etv Bharat
author img

By ETV Bharat Karnataka Team

Published : Apr 15, 2024, 1:58 PM IST

Updated : Apr 15, 2024, 4:25 PM IST

ವಿದೇಶಾಂಗ ಸಚಿವ ಜೈಶಂಕರ್

ಬೆಂಗಳೂರು: ರಷ್ಯಾ ಉಕ್ರೇನ್ ಯುದ್ಧ, ಇಂಡೋ ಪೆಸಿಪಿಕ್ ಬಿಕ್ಕಟ್ಟು ಸೇರಿದಂತೆ ಜಾಗತಿಕವಾಗಿ ಎದುರಾಗಿದ್ದ ಎಲ್ಲ ಸಮಸ್ಯೆಗಳನ್ನೂ ಪ್ರಧಾನಿ ನರೇಂದ್ರ ಮೋದಿ ನಿಭಾಯಿಸಿದ್ದಾರೆ. ಇರಾನ್ ಇಸ್ರೇಲ್ ಯುದ್ಧ ಸೂಕ್ಷ್ಮ ವಿಚಾರವಾಗಿದೆ. ಈಗಾಗಲೇ ನಾವು ಎರಡು ದೇಶಗಳ ಜೊತೆ ಮಾತನಾಡಿದ್ದೇವೆ. ಆದಷ್ಟು ಬೇಗ ಭಾರತೀಯರನ್ನ ಇರಾನ್ ಬಿಡುಗಡೆ ಮಾಡುವ ಭರವಸೆ ಇದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತೀಯರಿದ್ದ ಹಡಗು ಇರಾನ್ ವಶದಲ್ಲಿದೆ. ದೇಶದೊಳಗಷ್ಟೇ ಅಲ್ಲ ಹೊರದೇಶದಲ್ಲೂ ಮೋದಿಯವರೇ ಗ್ಯಾರಂಟಿ, ನಿನ್ನೆ ಇರಾನ್ ಸರ್ಕಾರದ ಜೊತೆ ನಮ್ಮ‌ ಭಾರತೀಯರ ಬಿಡುಗಡೆ ಬಗ್ಗೆ ಮಾತಾಡಿದ್ದೇನೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಮಾತುಕತೆ ನಡೆದಿದೆ, ನಮ್ಮ ವಿದೇಶಾಂಗ ಇಲಾಖೆ ಅಧಿಕಾರಿಗಳು ಇರಾನ್ ವಶದಲ್ಲಿರುವ ಭಾರತೀಯರ ಭೇಟಿ ಮಾಡಿದ್ದಾರೆ. ಇದು ನಮಗೆ ಸಮಾಧಾನ ತಂದಿರುವ ವಿಚಾರ, ಆದಷ್ಟು ಬೇಗ ಇರಾನ್ ಭಾರತೀಯರನ್ನ ಬಿಡುಗಡೆ ಮಾಡುವ ಭರವಸೆ ಇದೆ ಎಂದರು.

ಪಾಕ್ ಆಕ್ರಮಿತ ಕಾಶ್ಮೀರ ಭಾರತದ್ದು. ಪಿಒಪಿ ಹೇಗೆ ಆಯಿತು, ಆಗ ಯಾವ ಸರ್ಕಾರ ಇತ್ತು, ಯಾರು ತಪ್ಪು ಮಾಡಿದರು ಎಂದು ಎಲ್ಲರಿಗೂ ಗೊತ್ತು. ಇದನ್ನು ಮತ್ತೆ ನಾನು ಹೇಳಲ್ಲ, ಸಂಸತ್​​ನಲ್ಲೇ ಪಿಒಕೆ ವಿಚಾರದಲ್ಲಿ ಬಿಜೆಪಿಯ ನಿಲುವೇನು ಎಂದು ಹೇಳಿದ್ದೇವೆ, ಆದರೆ ಪಿಒಕೆ ವಿಚಾರ ಈಗ ಮತ್ತೆ ಚರ್ಚೆಗೆ ಬಂದಿದೆ. ದೇಶದ ಜನತೆಯ ಜಾಗೃತಿ ಬದಲಾಗಿದೆ, ರಾಷ್ಟ್ರೀಯತೆ ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಅನುಮಾನಾಸ್ಪದ ಸರಣಿ ಸಾವು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಜೈಶಂಕರ್, ಇದು ನಮಗೆ ಹೆಚ್ಚಿನ ಆತಂಕ ಹುಟ್ಟಿಸಿದೆ. ಸರ್ಕಾರಕ್ಕೆ ಇದು ತುಂಬಾ ಕಳವಳ ತಂದಿದೆ. ಆ ವಿದ್ಯಾರ್ಥಿಗಳ ಕುಟುಂಬಳಿಗೆ ದುರಂತ ಈ ರೂಪದಲ್ಲಿ ಎದುರಾಗಿದೆ, ಮೃತರ ಬಗ್ಗೆ ನಾನು ತೀವ್ರ ಸಂತಾಪ ಸೂಚಿಸುತ್ತೇನೆ. ಅವರ ಕುಟುಂಬಗಳಿಗೂ ಸಾಂತ್ವನ ಹೇಳಲು ಬಯಸುತ್ತೇನೆ. ನಮ್ಮ ವಿದೇಶಾಂಗ ಇಲಾಖೆ ಮತ್ತು ರಾಯಭಾರ ಕಚೇರಿ ಈ ವಿಚಾರದಲ್ಲಿ ಗಮನ ಹರಿಸಿದೆ, ಹಲವು ಕಾರಣಗಳಿಗೆ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಸಾವನ್ನಪ್ಪುತ್ತಿದ್ದಾರೆ, ಹೊಸ ವಿದ್ಯಾರ್ಥಿಗಳು ಅಲ್ಲಿಗೆ ಹೋದಾಗ ರಾಯಭಾರ ಕಚೇರಿ ಅಧಿಕಾರಿಗಳು ನಿಗಾ ಇಡಿ ಅಂತ ಸೂಚಿಸಲಾಗಿದೆ. ಅಮೆರಿಕದಲ್ಲಿ ವಿದ್ಯಾರ್ಥಿಗಳ ಜೀವ ರಕ್ಷಣೆ, ಭದ್ರತೆ ನಮ್ಮ ಆದ್ಯತೆಯಾಗಿದ್ದು, ಈ‌ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿದೆ ಎಂದರು.

ಬೆಂಗಳೂರಲ್ಲಿ ಅಮೆರಿಕ ರಾಯಭಾರ ಕಚೇರಿ ನಿರ್ಮಾಣ ಬೇಡಿಕೆಯ ಪರಿಗಣಿಸಿ ಸಾಕಷ್ಟು ಪ್ರಯತ್ನ ನಡೆದಿದೆ. ಯುಎಸ್ ಕಾನ್ಸುಲೇಟ್ ಕಚೇರಿ ಆರಂಭಿಸುವ ಕೆಲಸ ಪ್ರಗತಿಯಲ್ಲಿದೆ. ಆದಷ್ಟು ಬೇಗ ಆಗಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಇರಾನ್​ ವಿರುದ್ಧದ ಯಾವುದೇ ಆಕ್ರಮಣದಲ್ಲಿ ಅಮೆರಿಕ ಭಾಗಿಯಾಗಲ್ಲ: ಪ್ರತಿದಾಳಿ ಅವಶ್ಯಕತೆ ಇಲ್ಲ ಎಂದ ಬೈಡನ್​​ - US wont participate

ರಾಜ್ಯಕ್ಕೆ ಬರ ಪರಿಹಾರ ತಡವಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಕೇವಲ ಕರ್ನಾಟಕ ಮಾತ್ರ ಅಲ್ಲ ಕೆಲವು ರಾಜ್ಯಗಳದ್ದು ಬಾಕಿ ಇದೆ. ಎನ್​​ಡಿಆರ್​​ಎಫ್​​ಗೆ ಅದರದ್ದೇ ಆದ ನಿಯಮ ಇದೆ. ಈಗ ಬಿಡುಗಡೆ ಮಾಡಲು ಚುನಾವಣಾ ‌ಆಯೋಗದ ಅನುಮತಿ ಬೇಕು, ಅವರ ಅನುಮತಿ ಕೇಳಿದ್ದೇವೆ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೇರಿ ದೇಶದ ಹಲವು ರಾಜ್ಯಗಳಿಂದ ಸ್ಪರ್ಧೆಯ ಸಾಧ್ಯತೆ ವಿಚಾರಗಳ ವರದಿ ಪ್ರಕಟಗೊಂಡವು. ಆದರೆ, ವರುಷ್ಠರು ಹೇಳಿದ್ದನ್ನು ಮಾತ್ರ ನಾನು ಮಾಡುತ್ತಿದ್ದೇನೆ, ಇಡೀ ದೇಶದಲ್ಲಿ ಪ್ರವಾಸ ಮಾಡುವಂತೆ ಹೇಳಿದ್ದಾರೆ. ಹಾಗಾಗಿ ಅದನ್ನು ಮಾಡುತ್ತಿದ್ದೇನೆ, ನನಗಿಂತಲೂ ಉತ್ತಮ ಅಭ್ಯರ್ಥಿಗಳು ಬೆಂಗಳೂರಿನಿಂದ ಸ್ಪರ್ಧೆ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇರಾನ್​ಗೆ ಎದಿರೇಟು ನೀಡಲು ಇಸ್ರೇಲ್​ ತಂತ್ರ: 'ಆಕ್ರಮಣಕ್ಕೆ ಬೆಲೆ ತೆರಲೇಬೇಕು' ಎಂದ ವಿದೇಶಾಂಗ ಸಚಿವ - israel iran row

ಹತ್ತು ವರ್ಷಗಳ ಹಿಂದೆ ದೇಶದಲ್ಲಿ ಹದಗೆಟ್ಟ ಆರ್ಥಿಕತೆ ಇತ್ತು. ಇವತ್ತು ದೇಶದ ಆರ್ಥಿಕತೆ ಸೂಕ್ತವಾಗಿದೆ. ಎಲ್ಲ ವರ್ಗಗಳ ವಿಕಾಸಕ್ಕೆ ನಮ್ಮ ಸರ್ಕಾರ ಒತ್ತು ಕೊಟ್ಟಿದೆ. 25 ಕೋಟಿ ಜನ ಕಳೆದ ಹತ್ತು ವರ್ಷಗಳಲ್ಲಿ ಬಡತನದಿಂದ ಮುಕ್ತರಾಗಿದ್ದಾರೆ, ನಿನ್ನೆ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಆಗಿದೆ. ನಮ್ಮ ಹತ್ತು ವರ್ಷಗಳ ಸಾಧನೆ ಜನರ ಮುಂದಿದೆ. ಮುಂದಿನ ಐದು ವರ್ಷಗಳ ಭರವಸೆಗಳು ಇದರಲ್ಲಿವೆ ಎಂದರು.

ಇದನ್ನೂ ಓದಿ: ಕಚ್ಚತೀವು ದ್ವೀಪದ ಜವಾಬ್ದಾರಿ ಇಲ್ಲದಿದ್ದರೂ ಕಾಂಗ್ರೆಸ್​, ಡಿಎಂಕೆ ಅದರ ಬಗ್ಗೆ ಮಾತನಾಡುತ್ತಿವೆ: ಎಸ್​​ ಜೈಶಂಕರ್ - KACHCHATHEEVU ISLAND

Last Updated : Apr 15, 2024, 4:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.