ETV Bharat / state

ನಾನೂ ಮುಖ್ಯಮಂತ್ರಿ ಆಗಬೇಕು ಅಂದುಕೊಂಡಿದ್ದೇನೆ.. ಆದ್ರೆ ಅವಕಾಶ ಸಿಗಬೇಕಲ್ಲ?: ರಾಜು ಕಾಗೆ - ಬಿಜೆಪಿ

ಬಿಜೆಪಿಯವರು ಸರ್ಕಾರ ಪತನ ಮಾಡೋ ಹಗಲು ಕನಸು ಕಾಣುತ್ತಿದಾರೆ. 135 ಶಾಸಕರಿದ್ದು, ಅದೆಲ್ಲಾ ಸಾಧ್ಯವಿಲ್ಲದ ಮಾತು ಎಂದು ಎನ್​​ಡಬ್ಲ್ಯುಕೆಆರ್​​ಟಿಸಿ ಅಧ್ಯಕ್ಷ ರಾಜು ಕಾಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

MLA Raju Kage
ಎನ್​​ಡಬ್ಲ್ಯುಕೆಆರ್​​ಟಿಸಿ ಅಧ್ಯಕ್ಷ ರಾಜು ಕಾಗೆ ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Feb 2, 2024, 5:33 PM IST

Updated : Feb 2, 2024, 5:58 PM IST

ಎಂಎಲ್​ಎ ರಾಜು ಕಾಗೆ ಮಾಧ್ಯಮದವರ ಜೊತೆ ಮಾತನಾಡಿದರು.

ಹುಬ್ಬಳ್ಳಿ: ನಾನು ಮುಖ್ಯಮಂತ್ರಿ ಆಗಬೇಕೆಂದಿದ್ದೇನೆ. ಆದರೆ ಅವಕಾಶ ಸಿಗಬೇಕಲ್ವೇ..? ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದೆ. ಎಲ್ಲ ಶಾಸಕರನ್ನು ಮಂತ್ರಿ ಮಾಡೋಕೆ ಆಗುತ್ತದೆಯಾ?, ಸಿಎಂ ಮಾಡೋಕೆ ಆಗಲ್ಲ. ಹಿರಿತನದ ಆಧಾರದ ಮೇಲೆ ನನ್ನನ್ನು ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಎನ್​​ಡಬ್ಲ್ಯುಕೆಆರ್​​ಟಿಸಿ ಅಧ್ಯಕ್ಷ ರಾಜು ಕಾಗೆ ಹೇಳಿದರು.

ವಾಯವ್ಯ ಸಾರಿಗೆ: ನಗರದಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಯವ್ಯ ಸಾರಿಗೆ ನಷ್ಟದಲ್ಲಿದ್ದು, ಬೇರೆ ನಿಗಮ ಕೊಡಿ ಅನ್ನೋದು ತಪ್ಪಾಗುತ್ತೆ. ಎಲ್ಲದಕ್ಕೂ ಅಸಮಾಧಾನ ತೋರಬಾರದು. ಲಾಭದಾಯಕವಾದದ್ದನ್ನು ಕೊಡಿ ಅನ್ನಬಾರದು. ಎಲ್ಲರೂ ನನಗೆ ಮಂತ್ರಿ ಮಾಡಿ ಅಂತ ಕೇಳೋದು ತಪ್ಪು. ಮಂತ್ರಿ ಆಗಲು, ಮುಖ್ಯಮಂತ್ರಿ ಆಗಲು ಅವಕಾಶ ಸಿಗಬೇಕಲ್ವೇ.. ನಾಲ್ಕೈದು ಬಾರಿ ಶಾಸಕರಾದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎರಡು ಲಕ್ಷ ಜನ ನನಗೆ ಮತಹಾಕಿ ಎಂಎಲ್​ಎ ಮಾಡಿದ್ದಾರೆ: ಮೊದಲು ನಮ್ಮ ಮತಕ್ಷೇತ್ರದ ಹಿತಾಸಕ್ತಿಗೆ ಹೆಚ್ಚು ಮಹತ್ವ ಕೊಡಬೇಕು. ಎರಡು ಲಕ್ಷ ಜನ ನನಗೆ ಮತಹಾಕಿ ಎಂಎಲ್ ಸ್ಥಾನ ಕೊಟ್ಟಿದ್ದಾರೆ. ಅದಕ್ಕಿಂತ ಹೆಚ್ಚಿನದು ನಮಗೆ ಏನೂ ಬೇಕು, ಎರಡು ಲಕ್ಷ ಜನರ ಪ್ರತಿನಿಧಿ ನಾವು, ಎರಡು ಲಕ್ಷ ಜನರ ಬಗ್ಗೆ ಚಿಂತನೆ ಮಾಡಬೇಕು. ಅದನ್ನೂ ಬಿಟ್ಟು ಬೇರೆ ಬೇರೆ ಅಧಿಕಾರಕ್ಕೆ ಹೋಗಬೇಕು ಅನ್ನೋದು ತಪ್ಪು.

ಎಲ್ಲರಿಗೂ ಅಧಿಕಾರ ಬೇಕು ಎಂದರೆ ಎಲ್ಲಿಂದ ತರಲಿಕ್ಕೆ ಸಾಧ್ಯ, ನಾವೆಲ್ಲಾ ಅಧಿಕಾರಕ್ಕಾಗಿ ಇಲ್ಲಿಗೆ ಬಂದಿದ್ದೇವಾ? ನಮ್ಮ ಕ್ಷೇತ್ರದ ಜನರಿಗೆ ಕುಡಿವ ನೀರಿಲ್ಲ, ನೀರಾವರಿ ಯೋಜನೆಗಳಿಲ್ಲ, ಅಲ್ಲಿ ಜನ ಕಷ್ಟ ಅನುಭವಿಸುತ್ತಿದ್ದಾರೆ. ಅವರಿಗಾಗಿ ನಾವು ಕೆಲಸ ಮಾಡಿ ಮೆಚ್ಚುಗೆ ಗಳಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಪಾರದರ್ಶಕವಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

135 ಶಾಸಕರಿದ್ದು ಸರ್ಕಾರ ಪತನ ಸಾಧ್ಯವಿಲ್ಲ:ಬಿಜೆಪಿಯವರು ಸರ್ಕಾರ ಪತನ ಮಾಡೋ ಹಗಲು ಕನಸು ಕಾಣುತ್ತಿದಾರೆ. 135 ಶಾಸಕರಿದ್ದು, ಅದೆಲ್ಲಾ ಸಾಧ್ಯವಿಲ್ಲದ ಮಾತು. ಎಲ್ಲದಕ್ಕೂ ವಿರೋಧ ಮಾಡೋದು ವಿರೋಧ ಪಕ್ಷದ ಕೆಲಸ. ವಿರೋಧ ಪಕ್ಷದವರು ನಮ್ಮನ್ನು ಆರತಿ ಮಾಡಿ ಒಳಗೆ ಕರೆದುಕೊಳ್ತಾರಾ..? ಎಂದು ಎನ್​​ಡಬ್ಲ್ಯುಕೆಆರ್​​ಟಿಸಿ ಅಧ್ಯಕ್ಷ ರಾಜು ಕಾಗೆ ಕಿಡಿಕಾರಿದರು.

ಇದನ್ನೂ ಓದಿ : ಬಿಜೆಪಿಗೆ ಹೀನಾಯ ಸೋಲುಣಿಸಿದ ಬೊಮ್ಮಾಯಿಗೆ ಹಾಗೆ ಹೇಳುವ ನೈತಿಕ ಹಕ್ಕಿಲ್ಲ: ಎಂ ಬಿ ಪಾಟೀಲ ತಿರುಗೇಟು

Last Updated : Feb 2, 2024, 5:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.