ETV Bharat / state

ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ ; ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? - WATER LEVEL IN DAMS - WATER LEVEL IN DAMS

ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದು, ರಾಜ್ಯದ ನದಿ, ಜಲಾಶಯ ಮತ್ತು ಜಲಮೂಲಗಳಿಗೆ ಜೀವಕಳೆ ಬಂದಿದೆ. ರಾಜ್ಯಾದ್ಯಂತ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಹೆಚ್ಚಾಗಿದೆ.

dam
ಜಲಾಶಯ (ETV Bharat)
author img

By ETV Bharat Karnataka Team

Published : Jun 23, 2024, 8:01 PM IST

ಬೆಂಗಳೂರು : ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಆಗಮಿಸಿದ್ದು, ಈ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ. ಇದರಿಂದ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಹೆಚ್ಚಿನ ನೀರಿನ ಸಂಗ್ರಹವಾಗಿದೆ.

ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಜೂನ್ ಮೊದಲ ವಾರದಲ್ಲಿ 173 ಟಿಎಂಸಿ ನೀರು ಸಂಗ್ರಹವಾಗಿತ್ತು. 3460 ಸಾವಿರ ಕ್ಯೂಸೆಕ್ಸ್ ನೀರು ಒಳ ಹರಿವು ಹಾಗೂ 12,662 ಕ್ಯೂಸೆಕ್ಸ್ ನೀರು ಹೊರ ಹರಿವು ಇತ್ತು. ಆದರೆ, ಈಗ 190 ಟಿಎಂಸಿ ನೀರು ಸಂಗ್ರಹವಾಗಿದ್ದು, 15,680 ಕ್ಯೂಸೆಕ್ಸ್ ಒಳ ಹಾಗೂ 7,414 ಕ್ಯೂಸೆಕ್​ ಹೊರ ಹರಿವು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಗಳಲ್ಲಿ 178 ಟಿಎಂಸಿ ನೀರು ಸಂಗ್ರಹವಾಗಿತ್ತು.

ಕೃಷ್ಣಾನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಭದ್ರಾ, ತುಂಗಭದ್ರಾ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಗೆ ಒಳ ಹರಿವು ಅಧಿಕವಾಗಿದೆ. ಈಗಾಗಲೇ 87 ಟಿಎಂಸಿ ನೀರು ಹರಿದು ಬಂದಿದೆ. ವಿದ್ಯುತ್ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಸೂಪಾ, ಲಿಂಗನಮಕ್ಕಿ ಹಾಗೂ ವರಾಹಿ ಜಲಾಶಯಗಳಿಗೆ 48 ಟಿಎಂಸಿ ಹಾಗೂ ಕಾವೇರಿ ಕೊಳ್ಳದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಿಗೆ 38 ಟಿಎಂಸಿ ನೀರು ಹರಿದು ಬಂದಿದೆ. ಒಟ್ಟಾರೆ ಮುಂಗಾರು ಆರಂಭವಾದ ಬಳಿಕ ರಾಜ್ಯದ ಜಲಾಶಯಗಳಲ್ಲಿ 16 ಟಿಎಂಸಿ ನೀರು ಸಂಗ್ರಹವಾಗಿದೆ.

ಕಳೆದ ವರ್ಷ ತೀವ್ರ ಮಳೆಯ ಕೊರತೆಯಿಂದ ಬತ್ತಿ ಹೋಗಿದ್ದ ಜಲಾಶಯಗಳು, ಈ ವರ್ಷ ಸುರಿಯುತ್ತಿರುವ ಮಳೆಗೆ ಮೈದುಂಬಿವೆ. ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉತ್ತರ ಕರ್ನಾಟಕದ ನದಿಗಳಿಗೆ ಜೀವಕಳೆ ಬಂದಿದೆ. ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಲಿಂಗನಮಕ್ಕಿಯಲ್ಲಿ 13.90 ಟಿ.ಎಂ.ಸಿ, ಸೂಪಾ ಜಲಾಶಯದಲ್ಲಿ 30.24, ವರಾಹಿಯಲ್ಲಿ 3.10, ಹಾರಂಗಿಯಲ್ಲಿ 3.27, ಹೇಮಾವತಿಯಲ್ಲಿ 10.73, ಕೆಆರ್‌ಎಸ್​ನಲ್ಲಿ 14.51, ಕಬಿನಿಯಲ್ಲಿ 8.97, ಭದ್ರಾ ಜಲಾಶಯದಲ್ಲಿ 15.17, ತುಂಗಭದ್ರಾದಲ್ಲಿ 5.69, ಘಟಪ್ರಭಾದಲ್ಲಿ 7.91, ಮಲಪ್ರಭಾದಲ್ಲಿ 6.45, ಆಲಮಟ್ಟಿಯಲ್ಲಿ 29.13, ನಾರಾಯಣಪುರ ಡ್ಯಾಮ್​ನಲ್ಲಿ 21.16, ವಾಣಿವಿಲಾಸ ಸಾಗರದಲ್ಲಿ 18.24 ಟಿ.ಎಂ.ಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ : ಅರ್ಕಾವತಿ ಜಲಾಶಯದ ಒಳಹರಿವು ಹೆಚ್ಚಳ; ನದಿ ಪಾತ್ರದ ಜನರಿಗೆ ಸೂಚನೆ - Arkavathi Dam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.