ETV Bharat / state

ಎರಡೂ ಬೆಳೆಗಳಿಗೆ ನೀರು ಲಭ್ಯ, ರೈತರು ಆತಂಕ ಪಡಬೇಕಾಗಿಲ್ಲ: ಸಿಎಂ ಸಿದ್ದರಾಮಯ್ಯ - CM Siaddaramaiah

ತುಂಗಭದ್ರಾ ಜಲಾಶಯದ ಎಲ್ಲಾ ಗೇಟ್​ಗಳನ್ನು ಬದಲಾವಣೆ ಮಾಡುವ ಕುರಿತು ತಜ್ಞರ ಸಮಿತಿ ರಚಿಸಲಾಗಿದ್ದು, ಸಮಿತಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

CM Siddaramaiah
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Sep 22, 2024, 5:58 PM IST

Updated : Sep 22, 2024, 7:05 PM IST

ಕೊಪ್ಪಳ: "ತುಂಗಭದ್ರಾ ಜಲಾಶಯದಲ್ಲಿ ಸದ್ಯ 101.77 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ತಿಂಗಳು 19ನೇ ಕ್ರಸ್ಟ್‌ ಗೇಟ್ ಕಿತ್ತು ಹೋದಾಗ ರೈತರಲ್ಲಿ ಆತಂಕ ಇತ್ತು. ಆದರೆ ಈಗ ಯಾವುದೇ ಆತಂಕ ಪಡಬೇಕಿಲ್ಲ. ಜಾಗ್ರತೆಯಿಂದ ಮತ್ತೊಂದು ಗೇಟ್ ಫಿಟ್ ಮಾಡಲಾಗಿದೆ. ಎರಡನೇ ಬೆಳೆಗೂ ಸಹ ನೀರು ಬಿಡುತ್ತೇವೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕೊಪ್ಪಳದ ಬಸಾಪುರದಲ್ಲಿರುವ ಖಾಸಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸರ್ಕಾರದ ಪರವಾಗಿ ಮಳೆರಾಯನಿಗೆ ಧನ್ಯವಾದ ಹೇಳುತ್ತೇನೆ. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತು ಹೋದಾಗ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಹಗಲು-ರಾತ್ರಿ ಎನ್ನದೆ ಕೆಲಸ ನಿರ್ವಹಿಸಿ ಅದನ್ನು ಸರಿ ಮಾಡಿದ್ದಾರೆ. ಜಲಾಶಯ ತಜ್ಞ ಕನ್ನಯ್ಯ ಮತ್ತು ಅವರ ತಂಡ ಜೊತೆಗೆ ಸ್ಥಳೀಯ ಜಿಂದಾಲ್ ಮತ್ತು ಇನ್ನೆರಡು ಇಂಜನಿಯರಿಂಗ್ ವರ್ಕ್ಸ್​ ಕಂಪನಿಗಳು ಸಕಾಲಕ್ಕೆ ಕೆಲಸ ಪೂರ್ಣಗೊಳಿಸಿ ಸುಮಾರು 20 ಟಿಎಂಸಿ ನೀರನ್ನು ಜಲಾಶಯದಲ್ಲಿ ಉಳಿಯುವ ಹಾಗೆ ಮಾಡಿದರು. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ" ಎಂದರು.

ಸಿಎಂ ಸಿದ್ದರಾಮಯ್ಯ (ETV Bharat)

ಗೇಟ್ ಬದಲಾವಣೆಗೆ ತಜ್ಞರ ಸಮಿತಿ ರಚನೆ: "ತುಂಗಭದ್ರಾ ಜಲಾಶಯ 70 ವರ್ಷದ ಇತಿಹಾಸ ಹೊಂದಿದೆ. ಬಹುತೇಕ ಜಲಾಶಯದಲ್ಲಿ 50 ವರ್ಷಗಳಿಗೊಮ್ಮೆ ಗೇಟ್ ಬದಲಾವಣೆ ಮಾಡಲಾಗುತ್ತದೆ. ಆದರೆ, ಈ ಜಲಾಶಯದಲ್ಲಿ ಉನ್ನತ ನಿರ್ವಹಣೆಯಿಂದಾಗಿ 70 ವರ್ಷಗಳ ಕಾಲ ಗೇಟ್ ಹಾಳಾಗದೆ ಕೆಲಸ ಮಾಡುತ್ತಿವೆ. ಆದರೆ, ಮುಂಜಾಗ್ರತ ಕ್ರಮವಾಗಿ ನಾವು ಎಲ್ಲಾ 33 ಗೇಟ್​ಗಳನ್ನು ಬದಲಾವಣೆ ಮಾಡಬೇಕಾಗಿದೆ. ಅದಕ್ಕಾಗಿ ಈಗ ಒಂದು ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ವರದಿ ಬಂದ ನಂತರ ಈ ಕುರಿತು ಕ್ರಮ ಕೈಗೊಳ್ಳಲಾಗುವುದು" ಎಂದರು.

ಬಿಜೆಪಿ ಶಾಸಕ ಮುನಿರತ್ನ ಕೇಸ್ ವಿಚಾರ ಕುರಿತು ಪ್ರತಿಕ್ರಿಯಿಸಿ, "ನಾವು ಯಾವುದೇ ದ್ವೇಷದ ರಾಜಕಾರಣ ಮಾಡಲ್ಲ. ಮುನಿರತ್ನ ಅವರಿಗೆ ನಾವೇನೂ ತಪ್ಪು ಮಾಡಿ ಅಂತ ಹೇಳಿದ್ದೆವಾ? ಈಗಾಗಲೇ ಅವರ ಮೇಲೆ ಸಾಕಷ್ಟು ಕೇಸ್​ಗಳಾಗಿವೆ. ಹೀಗಿದ್ದಾಗ ಏನು ಮಾಡಬೇಕು? ತಪ್ಪು ಮಾಡಿದ್ದಕ್ಕೆ ಅವರ ಮೇಲೆ ಎಫ್​ಐಆರ್ ಆಗಿದೆ. ನಾವು ಯಾರಿಗೂ ಕೂಡಾ ದ್ವೇಷದ ರಾಜಕಾರಣ ಮಾಡಲ್ಲ" ಎಂದು ಸ್ಪಷ್ಟಪಡಿಸಿದರು.

ಹಾಲಿನ ದರ ಹೆಚ್ಚಿಸುವ ಕುರಿತು ಪ್ರತ್ರಿಕ್ರಿಯಿಸಿದ ಸಿಎಂ, "ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ಮೊನ್ನೆ ಕೋಲಾರಕ್ಕೆ ಹೋದಾಗ ಅಲ್ಲಿನ ರೈತರು ಹೇಳಿದರು. ಹಾಗಾಗಿ ಹಾಲಿನ ದರ ಹೆಚ್ಚಿಸಿದರೆ ಅದರ ಸಂಪೂರ್ಣ ಮೊತ್ತವನ್ನು ರೈತರಿಗೆ ಕೊಡಬೇಕು ಎಂದು ನಾನು ಹೇಳಿದ್ದೇನೆ. ರಾಜ್ಯದಲ್ಲಿ ಹಾಲಿನ ದರ ಕಡಿತ ವಿಚಾರ ಮತ್ತು ದರ ಏರಿಕೆಯ ಬಗ್ಗೆ ಚರ್ಚೆ ಮಾಡಲಾಗತ್ತದೆ. ಹಾಲಿನ ದರ ಹೆಚ್ಚಿಗೆ ಮಾಡಿದರೆ ಅದನ್ನು ಖಂಡಿತ ರೈತರಿಗೆ ವರ್ಗಾವಣೆ ಮಾಡಬೇಕು ಎಂದು ಹೇಳಿದ್ದೇನೆ" ಎಂದರು.

"ಅರ್ಕಾವತಿ ಬಡಾವಣೆ ಕುರಿತು ರಾಜ್ಯಪಾಲರು ಪತ್ರ ಬರೆದಿದ್ದರೆ ಅದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ. ಒಂದೆಡೆ ರಾಜ್ಯಪಾಲರ ಖಚೇರಿಯಿಂದಲೇ ಗೌಪ್ಯ ವಿಷಯಗಳ ಸೋರಿಕೆಯಾಗುತ್ತಿದೆ. ರಿಡೂ ಬಗ್ಗೆ ಪತ್ರಿಕೆಯಲ್ಲಿ ನೋಡಿದ್ದೇನೆ. ರಿಡೂ ಅನ್ನೋ ಪದನ ಹೇಳಿದ್ದು ಸುಪ್ರಿಂಕೋರ್ಟ್​, ನಾವಲ್ಲ" ಎಂದು ಹೇಳಿದರು.

ಇದನ್ನೂ ಓದಿ: ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ಆಗ್ರಹ - Medical Equipment Scam Allegations

Last Updated : Sep 22, 2024, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.