ETV Bharat / state

ದಾವಣಗೆರೆಯಲ್ಲಿ ಗೆಲುವಿನ ಲೆಕ್ಕಾಚಾರ: ಯಾರ ಕೈ ಹಿಡಿಯಲಿದ್ದಾನೆ ಬೆಣ್ಣೆ ನಗರಿ ಮತದಾರ! - Who will be the Winner

ಮತ್ತೆ ಗೆಲುವಿನ ವಿಶ್ವಾಸದಲ್ಲಿರುವ ಬಿಜೆಪಿ, ಕೇಸರಿ ಪಡೆಯ ಭದ್ರಕೋಟೆಯನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್​, ಇಬ್ಬರು ಗಟ್ಟಿಗಿತ್ತಿಯರಲ್ಲಿ ಯಾರ ಕೈ ಸೇರಲಿದೆ ದಾವಣಗೆರೆ ಕ್ಷೇತ್ರ?

Dr. Parbha Mallikarjun and Gayathri Siddeshwar
ಡಾ.ಪ್ರಭಾ ಮಲ್ಲಿಕಾರ್ಜುನ್​ ಹಾಗೂ ಗಾಯತ್ರಿ ಸಿದ್ದೇಶ್ವರ್​ (ETV Bharat)
author img

By ETV Bharat Karnataka Team

Published : Jun 3, 2024, 10:16 AM IST

ದಾವಣಗೆರೆ: ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಕೈ- ಕಮಲ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್​ನಲ್ಲಿ ಭದ್ರವಾಗಿದೆ. ಇದೇ ಜೂನ್ 4ಕ್ಕೆ ಫಲಿತಾಂಶ ಹೊರ ಬೀಳಲಿದೆ. ಮತದಾರರಲ್ಲಿ ಫಲಿತಾಂಶದ ಕಾತರ ಹೆಚ್ಚುತ್ತಿದೆ. ದಾವಣಗೆರೆಯಲ್ಲಿ ಮತದಾರರು ಹಾಗೂ ಪಕ್ಷಗಳಲ್ಲಿ ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಇಡೀ ಜಿಲ್ಲೆಯಲ್ಲಿ ಗೆಲುವಿನ ಭಾರೀ ಚರ್ಚೆ ನಡೆಯುತ್ತಿದೆ. ಇನ್ನು ದಾವಣಗೆರೆ ಕ್ಷೇತ್ರವನ್ನು ಮರು ವಶಕ್ಕೆ ಪಡೆಯಲು ಕೈ ಹವಣಿಸುತ್ತಿದೆ. ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರಿಸಲು ಸಜ್ಜಾಗಿದೆ.

ಬಿಜೆಪಿ ಭದ್ರಕೋಟೆಯಾಗಿರುವ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಕೈವಶ ಮಾಡಿಕೊಳ್ಳಲು ಹವಣಿಸುತ್ತಿದೆ. 1998ರಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವಿನ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 26 ವರ್ಷಗಳಿಂದ ಗೆಲ್ಲವು ಸಾಧಿಸಿಲ್ಲ. ಆದರೆ, ಈ ಬಾರಿ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಗೆಲುವು ಸಾಧಿಸಲಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಬಿಜೆಪಿಯ ಭದ್ರಕೋಟೆಯನ್ನು ಕೈ ಛಿದ್ರ ಮಾಡಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರ ಮಾತಾಗಿದೆ.

1998ರ ಬಳಿಕ ಗೆಲುವನ್ನು ಕಾಣದ ಕೈ ಪಾಳೆಯ 2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವಂತಹ ಭರಪೂರ ವಿಶ್ವಾಸದಲ್ಲಿದೆ. ಇನ್ನು ರಾಜ್ಯದಲ್ಲಿ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು ಬೀಗಿ ಸಾಧನೆ ಮಾಡಿದೆ. ಪ್ರತಿ ಚುನಾವಣೆಯಲ್ಲಿದ್ದ ಬಿಜೆಪಿಯ ಸಂಘಟಿತ ಹೋರಾಟ ಈ ಚುನಾವಣೆಯಲ್ಲಿ ಅಷ್ಟಾಗಿ ಕಂಡು ಬರಲಿಲ್ಲ ಎನ್ನುವ ಮಾತುಗಳು ಬಿಜೆಪಿ ಕಾರ್ಯಕರ್ತರಿಂದಲೇ ಕೇಳಿ ಬರುತ್ತಿವೆ.

ಬಿಜೆಪಿಯ ಗೆಲುವಿಗೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್ ಪಾಳೆಯ!: ಹೌದು ದಾವಣಗೆರೆ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ಮತಕ್ಷೇತ್ರಗಳ ಪೈಕಿ ಹರಿಹರ ಹೊರತುಪಡಿಸಿ ಇನ್ನುಳಿದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇರುವುದು ಕಾಂಗ್ರೆಸ್​ಗೆ ಶಕ್ತಿ ಬಂದಂತಾಗಿದೆ. ಇದಲ್ಲದೇ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಮಹಿಳಾ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದರಿಂದ ಶತಮಾನದ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರ ಕೈ ವಶವಾಗಲಿದೆ ಎಂಬ ಲೆಕ್ಕಾಚಾರ ಮತದಾರರಲ್ಲಿ ನಡೆಯುತ್ತಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಹೋರಾಟ, ಪ್ರಚಾರದ ತಂತ್ರ, ಬಿಜೆಪಿ ಸರ್ಕಾರದ ವಿಫಲತೆಗಳು, ಗೆದ್ದೇ ಗೆಲ್ಲಬೇಕು ಕಾರ್ಯತಂತ್ರ, ಮತದಾರರ ಮನೆ, ಮನಗಳಿಗೆ ಮುಟ್ಟುವ ನಿಟ್ಟಿನಲ್ಲಿ ನಡೆಸಿದ ಅತ್ಯಂತ ವ್ಯವಸ್ಥಿತ ಪ್ರಚಾರ ಕಾರ್ಯಗಳು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದಲ್ಲದೇ ಹೊಸಮುಖಕ್ಕೆ ಕಾಂಗ್ರೆಸ್ ಮಣೆ ಹಾಕಿರುವುದು, ವಿದ್ಯಾವಂತ ಅಭ್ಯರ್ಥಿ ಆಯ್ಕೆ ಮಾಡಿರುವುದು ಕಾಂಗ್ರೆಸ್ ಪ್ಲಸ್ ಪಾಯಿಂಟ್, ಈ ಎಲ್ಲವೂ ಕಾಂಗ್ರೆಸ್‌ನ ಗೆಲುವಿಗೆ ಸಹಕಾರಿ ಆಗಲಿವೆ ಎಂಬ ವಿಶ್ವಾಸ ಕಾಂಗ್ರೆಸ್‌ನಲ್ಲಿ ಕಂಡು ಬರುತ್ತಿದೆ.

ಐದನೇ ಬಾರಿ ಗೆಲುವು ಸಾಧಿಸುವ ವಿಶ್ವಾಸದಲ್ಲಿ ಕಮಲ ಪಾಳೆಯ: ಸಂಸದ ಜಿಎಂ‌ ಸಿದ್ದೇಶ್ವರ್ ಅವರು ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಧೈರ್ಯದ ಮೇಲೆ ಐದನೇ ಬಾರಿ ಗೆಲುವಿನ ವಿಶ್ವಾಸದಲ್ಲಿದೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರು ಗೆಲುವು ಶತಸಿದ್ಧ ಎಂದು ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ಸಂಸದರಾಗಿ ಜಿಎಂ ಸಿದ್ದೇಶ್ವರ್ ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ, ಕೇಂದ್ರ ಸರ್ಕಾರದ ಅಭೂತಪೂರ್ವ ಸಾಧನೆ, ಕಾಂಗ್ರೆಸ್​ ಹೊಸ ಅಭ್ಯರ್ಥಿಕ್ಕೆ ಮಣೆ ಹಾಕಿರುವುದು ಸೇರಿದಂತೆ ಪ್ರಮುಖವಾಗಿ ಮೋದಿ ಅಲೆ ಅಲ್ಲದೆ ರಾಮ ಮಂದಿರ ನಿರ್ಮಾಣ ಬಿಜೆಪಿ ಕೈ ಹಿಡಿಯಲಿದೆ ಎಂಬುದು ಜನರ ಮಾತಾಗಿದೆ.

ಪ್ರಮುಖವಾಗಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಧೈರ್ಯ ಬಂದಿದೆ. ಬೂತ್, ಶಕ್ತಿ ಕೇಂದ್ರ ಮಟ್ಟದಲ್ಲಿ ಮುಖಂಡರು, ಕಾರ್ಯಕರ್ತರ ಶ್ರಮ, ಹೀಗೆ ಈ ಎಲ್ಲ ಅಂಶಗಳು ಗೆಲುವು ತಂದು ಕೊಟ್ಟೇ ಕೊಡುತ್ತವೆ ಎಂಬ ಆತ್ಮವಿಶ್ವಾಸ ಕಮಲ ಪಾಳಯದಲ್ಲಿ ಇದೆ. ಕಳೆದ ಬಾರಿ ಚುನಾವಣೆಯಲ್ಲಿದ್ದ ಬಿಜೆಪಿ ಹುಮ್ಮಸ್ಸು ಈ ಬಾರಿ ಕಂಡು ಬಂದಿಲ್ಲ. ಅಲ್ಲದೆ ಬಿಜೆಪಿಯಲ್ಲಿ ಕಂಡು ಬಂದ ಭಿನ್ನಮತ ಬಿಜೆಪಿಗೆ ಕಂಠಕವಾಗಲಿದೆ.

ಲೆಕ್ಕಾಚಾರಗಳು ಏನೇ ಇರಲಿ. ಈಗಾಗಲೇ ಮತದಾರರ ನಿರ್ಧಾರ ಇವಿಎಂ ಮತ ಯಂತ್ರಗಳಲ್ಲಿ ಭದ್ರವಾಗಿವೆ. ಜೂ. 4 ರಂದು ಅಭ್ಯರ್ಥಿಗಳ ಭವಿಷ್ಯ ಬಹಿರಂಗವಾಗಲಿದ್ದು, ಅಲ್ಲಿಯವರೆಗೂ ಸೋಲು - ಗೆಲುವಿನ ಲೆಕ್ಕಾಚಾರ ಪಕ್ಷದ ಕಾರ್ಯಕರ್ತರಲ್ಲಿ, ಜನಸಾಮಾನ್ಯರಲ್ಲಿ ಇರಲಿದೆ.

ಇದನ್ನೂ ಓದಿ: ಲೋಕಸಮರ: ಯಾರಿಂದ ಯಾರಿಗೆ ಹೊಡೆತ? ರಾಜ್ಯದ 28 ಕ್ಷೇತ್ರಗಳ ಮಾಹಿತಿ - Lok Sabha Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.