ಹುಬ್ಬಳ್ಳಿ: ಪ್ರಜಾಪ್ರಭುತ್ವದ ಹಬ್ಬ ಅಂದರೆ ಮತದಾನ. ಇಂತ ಮತದಾನ ಜಾತ್ರೆಯಲ್ಲಿ ಒಂದೇ ಕುಟುಂಬದ 96 ಸದಸ್ಯರು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಒಂದೇ ಕುಟುಂಬದ ಈ 96 ಜನ ಮತದಾರರು ತಮ್ಮ ಹಕ್ಕು ಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ. ತಾಲೂಕಿನ ನೂಲ್ವಿ ಗ್ರಾಮದ ಕಂಟೆಪ್ಪ ತೋಟದ ಅವಿಭಕ್ತ ಕುಟುಂಬದ ಸದಸ್ಯರು ಇಲ್ಲಿನ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 56 ಮತ್ತ 57 ರಲ್ಲಿ ಮತದಾನ ಮಾಡಿದರು. ಮತ ಚಲಾಯಿಸಿದ ಬಳಿಕ ಎಲ್ಲರೂ ಸೇರಿ ಸೆಲ್ಫಿ ಪಡೆದು ಸಂಭ್ರಮಿಸಿದರು.
ಮೂರು ತಲೆಮಾರಿನ ಕುಟುಂಬದ ಸದಸ್ಯರು ಮತದಾನದಲ್ಲಿ ಭಾಗಿಯಾಗಿದ್ದು, ಪ್ರತಿ ಚುನಾವಣೆಯಲ್ಲಿ ಮೂರು ತಂಡವಾಗಿ ವಾಹನಗಳ ಮೂಲಕ ಬಂದು ಮತ ಚಲಾವಣೆ ಮಾಡುತ್ತಿದ್ದರು. ಆದ್ರೆ ಈ ಚುನಾವಣೆಯಲ್ಲಿ ಏಕಕಾಲದಲ್ಲಿ ಬಂದು ಮತದಾನ ಮಾಡಿದರು. ಇನ್ನು ಇವರೆಲ್ಲರೂ ಒಂದೇ ಕುಟುಂಬದಲ್ಲಿ ವಾಸಿಸುತ್ತಿದ್ದು, ಕೆಲಸದ ನಿಮಿತ್ತ ಬೇರೆ ಬೇರೆ ಕಡೆ ಹೋಗುತ್ತಾರೆ. ಆದ್ರೆ ಯಾವುದೇ ಚುನಾವಣೆ ನಡೆದ್ರೂ ಸಹ ಎಲ್ಲರೂ ಒಟ್ಟಿಗೆ ಸೇರಿ ತಮ್ಮ ಹಕ್ಕನ್ನು ಚಲಾಯಿಸುತ್ತಾರೆ ಈ ತೋಟದ ಕುಟುಂಬಸ್ಥರು..
ಓದಿ: ಲಂಡನ್-ಅಮೆರಿಕದಿಂದ ಬಂದು ತಮ್ಮ ಹಕ್ಕು ಚಲಾಯಿಸಿದ ಮತದಾರರು - NRIs VOTING IN DAVANAGERE