ಬೆಂಗಳೂರು: ದಯವಿಟ್ಟು ವಿವಾದ ಮಾಡಬೇಡಿ. ಅನ್ಯಾಯವಾದಾಗ ಧ್ವನಿ ಎತ್ತಬೇಕು ಎಂದು ಸಮಾಜ ಕಲ್ಯಾಣ ಸಚಿವ ಹೆಚ್. ಸಿ. ಮಹದೇವಪ್ಪ ಹೇಳಿದರು. ವಿಧಾನಸೌಧಲ್ಲಿ ಮಾತನಾಡಿದ ಅವರು, ಜ್ಞಾನ ದೇಗುಲವಿದು. ಧೈರ್ಯವಾಗಿ ಪ್ರಶ್ನಿಸಿ ಎಂದು ಮೊರಾರ್ಜಿ ವಸತಿ ಶಾಲೆಗಳಲ್ಲಿ ಘೋಷ ವಾಕ್ಯವನ್ನು ಬದಲಾಯಿಸಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ದಯವಿಟ್ಟು ಈ ವಾಕ್ಯ ಕಾಂಟ್ರೋವರ್ಸಿ ಮಾಡಬೇಡಿ. ಅನ್ಯಾಯವಾದಾಗ ಧ್ವನಿ ಎತ್ತಬೇಕು, ಪ್ರಶ್ನೆ ಮಾಡಬೇಕು. ಕುವೆಂಪು ಅವರು ಸಹ ಅದನ್ನೇ ಹೇಳಿದ್ದಾರೆ. ಮಾಧ್ಯಮಗಳಿಗೆ ಇದೇ ಪ್ರಾಮುಖ್ಯ. ನಾವು ಕುವೆಂಪು ಅವರ ಪರ ಇದ್ದೇವೆ. ಸಂವಿಧಾನ ನಮಗೆ ಹಕ್ಕು, ಅಧಿಕಾರ ಕೊಟ್ಟಿದೆ. ನಮ್ಮ ಆದೇಶದಲ್ಲಿ ಮಿಸ್ಟೇಕ್ ಇಲ್ಲ ಎಂದು ಸಮರ್ಥಿಸಿಕೊಂಡರು.
ಮುಗಿಯಿತು.. ಮುಗಿಯಿತು.. ಹಾರೋರ ಕಾಲ.. ಅಂತ ಕುವೆಂಪು ಹೇಳಿದ್ದಾರೆ. ಕುವೆಂಪು ವಾಕ್ಯ ಬದಲಾವಣೆ ಮಾಡಿಲ್ಲ. We are for ideological building the institution. ಮಕ್ಕಳಿಗೆ ಇದು ಸಮಸ್ಯೆ ಆಗಲ್ಲ. ಬಿಜೆಪಿ ಎಲ್ಲವನ್ನೂ ಕಾಂಟ್ರೋವರ್ಸಿ ಮಾಡ್ತಿದೆ. ಸಂವಿಧಾನ ವಿರೋಧಿ, ಬಸವನ ವಿರೋಧಿ. ಕುವೆಂಪು ನಮ್ಮ ಐಕಾನ್. ಸಂವಿಧಾನ ನಮ್ಮ ದೊಡ್ಡ ಗ್ರಂಥ. ಕೆಲಸಕ್ಕೆ ಬಾರದ ವಿಚಾರಗಳನ್ನು ಹೆಚ್ಚು ತೆಗೆದುಕೊಳ್ಳಬೇಡಿ. ಕುವೆಂಪು ಹೇಳಿದ್ದನ್ನು ನಾವು ತೆಗಿಸಿಲ್ಲ. ಕುವೆಂಪು ವಿಚಾರದ ಮೇಲೆ ಸಮಾಜ ಕಟ್ತೀವಿ ಎಂದು ಸಚಿವರು ಹೇಳಿದರು.
ವಿಪಕ್ಷಗಳು ಸದನದಲ್ಲಿ ಪ್ರಶ್ನೆ ಮಾಡಲಿ. ಅಲ್ಲಿಯೇ ಉತ್ತರ ಕೊಡ್ತೀವಿ. ಕುವೆಂಪು, ಅಂಬೇಡ್ಕರ್, ನಾರಾಯಣ ಗುರು, ಫುಲೆ ಅವರ ವೈಚಾರಿಕತೆ ನಿಲುವುಗಳನ್ನು ತುಂಬುತ್ತೇವೆ. ಈ ಆದೇಶದಲ್ಲಿ ಏನಾಗಿದೆ ಅಂತ ಗೊತ್ತಿಲ್ಲ. ಆದ್ರೆ ಐಡಿಯಾಲಾಜಿಕಲ್ ಮೇಲೆ ಹೇಳುತ್ತಿದ್ದೇನೆ. ಕುವೆಂಪು ವಿಚಾರದ ಮೇಲೆ ಸಮಾಜ ಕಟ್ಟಬೇಕು. ಸಂವಿಧಾನದ ಮೇಲೆ ಸಮೃದ್ಧ ಭಾರತ ಕಟ್ಟಬೇಕು. ಈ ವಿಚಾರವನ್ನು ಕಾಂಟ್ರೋವರ್ಸಿ ಮಾಡಬೇಡಿ ಎಂದು ಅವರು ಮನವಿ ಮಾಡಿದರು.
ಅವರ ಸಾಹಿತ್ಯವನ್ನು ನಾವ್ಯಾಕೆ ಬದಲಾವಣೆ ಮಾಡೋಣ. ಅವರ ಬರವಣಿಗೆ ಬದಲಾವಣೆ ಮಾಡ್ತೀವಿ ಅಂತ ಯಾರು ಹೇಳಿದ್ದು. ಪ್ರಶ್ನೆ ಮಾಡುವುದು ಸಂವಿಧಾನ ಬದ್ಧ ಹಕ್ಕು. ಕೈ ಮುಗಿಯುವುದು ಕುವೆಂಪು ಅವರ ಸಾಹಿತ್ಯದ ವಿಚಾರ. ನಾವ್ಯಾಕೆ ಬದಲಾವಣೆ ಮಾಡೋಣ ಎಂದು ಸಚಿವ ಮಹದೇವಪ್ಪ ಪ್ರಶ್ನಿಸಿದರು.
ಓದಿ: ಸರ್ಕಾರಿ, ಅನುದಾನಿತ ಶಾಲೆಗಳ ಹುದ್ದೆ ಭರ್ತಿಗೆ ಒಂದೇ ಮಾನದಂಡ: ಮಧು ಬಂಗಾರಪ್ಪ