ETV Bharat / state

'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​​ ಗೆಲ್ಲಲಿದೆ': ಮಾಜಿ ಸಚಿವ ವಿನಯ್​​​ ಕುಲಕರ್ಣಿ - Vinay Kulkarni - VINAY KULKARNI

ಮಾಜಿ ಸಚಿವ ವಿನಯ್​​​ ಕುಲಕರ್ಣಿ, 'ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್​​​ ಗೆಲ್ಲಲಿದೆ. ಕಳೆದ ಬಾರಿ ಚುನಾವಣೆಯಲ್ಲಿ ನಡೆದ ಹಾಗೇ ಈ ಬಾರಿ ನಡೆಯಲ್ಲ' ಎಂದಿದ್ದಾರೆ.

ಮಾಜಿ ಸಚಿವ ವಿನಯ್​​​ ಕುಲಕರ್ಣಿ
ಮಾಜಿ ಸಚಿವ ವಿನಯ್​​​ ಕುಲಕರ್ಣಿ
author img

By ETV Bharat Karnataka Team

Published : Apr 24, 2024, 2:51 PM IST

ಮಾಜಿ ಸಚಿವ ವಿನಯ್​​​ ಕುಲಕರ್ಣಿ

ಹಾವೇರಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್​​​ ಗೆಲ್ಲಲಿದೆ ಎಂದು ಮಾಜಿ ಸಚಿವ ವಿನಯ್​​​ ಕುಲಕರ್ಣಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಹಾವೇರಿಯಲ್ಲಿ ಇಂದು ಚುನಾವಣಾ ಪ್ರಚಾರ ಕುರಿತು ಮಾತನಾಡಿದ ಅವರು, 'ಹೋದ ಬಾರಿ ಮೋದಿ ಅಲೆ ಇತ್ತು. ಈಗ ಮೋದಿ ಅಲೆ ಬಹಳ ಕಡಿಮೆ ಇದೆ. ಬಿಜೆಪಿಯವರು ಕೊಟ್ಟ ಭರವಸೆಗಳಲ್ಲಿ ಒಂದೂ ಈಡೇರಿಸಿಲ್ಲ, ನುಡಿದಂತೆ ನಡೆದಿಲ್ಲ' ಎಂದು ಟೀಕಿಸಿದರು.

ಇನ್ನು, ಹುಬ್ಬಳ್ಳಿಯ ಬಿವಿವಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರ ಕುರಿತಂತೆ ಮಾತನಾಡಿದ ವಿನಯ್​ ಕುಲಕರ್ಣಿ, 'ಚುನಾವಣೆಗೆ ಯಾವುದೇ ಪಕ್ಷಕ್ಕೆ ಸಂಬಂಧ ಇರದ ವಿಚಾರ ಅದು. ನೇಹಾ ತಂದೆ ನಿರಂಜನ ಹಿರೇಮಠ ನನ್ನ ಆತ್ಮೀಯ ಗೆಳೆಯ. ನಾವೆಲ್ಲಾ ಒಟ್ಟಿಗೆ ಕೂಡಿ ಬೆಳೆದವರು. ಅವರ ಮಗಳಿಗಾಗಿರುವುದು ನಮ್ಮ ಮಕ್ಕಳಿಗೆ ಆದ ಹಾಗೆ' ಎಂದು ಬೇಸರ ವ್ಯಕ್ತಪಡಿಸಿದರು. ಈ ರೀತಿಯ ಪ್ರಕರಣಗಳನ್ನು ಚುನಾವಣೆಗೆ ಬಳಸಿಕೊಳ್ಳಬಾರದು. ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ.. ಇಂತಹ ಘಟನೆ ನಡೆದಾಗ ಸರ್ಕಾರ ಏನು ಎಲ್ಲಾ ಕಡೆ ಕಾಯೋಕೆ ಆಗುತ್ತಾ?. ಒಂದು ಪಕ್ಷಕ್ಕೆ ಗೂಬೆ ಕೂರಿಸುವುದು ಸರಿಯಲ್ಲ. ಇದು 200% ಖಂಡಿಸೋ ಘಟನೆ. ಆ ಸಮಾಜವೂ ಇದನ್ನು ಖಂಡಿಸಿದೆ' ಎಂದರು.

ಕಾಂಗ್ರೆಸ್​ ನಾಯಕರಾದ 'ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ ಮಾಡಲಿ, ಇಲ್ಲದಿದ್ದರೆ ಜನ ಅವರನ್ನು ಮರೆತು ಹೋಗುತ್ತಾರೆ' ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, 'ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಸಾಕಷ್ಟು ಕಡೆ ಸುತ್ತಬೇಕಾಗುತ್ತೆ. ಅವರು ಅವಶ್ಯಕತೆ ಇರುವಲ್ಲಿ ಬರತ್ತಾರೆ. ಇಲ್ಲಿ ಸುತ್ತಾಡಕ್ಕೆ ನಾವೇನು ಇಲ್ಲಿ ಇಲ್ಲವಾ? ಜನರು ಏನು ಇವರನ್ನಷ್ಟೇ ನೆನಪಿಟ್ಟುಕೊಳ್ಳುತ್ತಾರಾ'. ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬರ ಬಂದಾಗ ಎಲ್ಲಿದ್ದರು. ಪ್ರವಾಹ ಬಂದಾಗ ಎಲ್ಲಿ ಬಂದರು?, ಹೆಲಿಕಾಪ್ಟರ್​ನಲ್ಲಿಯಾದರು ಬರಬೇಕಿತ್ತಲ್ಲವಾ?. ಕೊರೋನಾ ಟೈಮ್​ನಲ್ಲಿ ಎಲ್ಲಿದ್ದರು ಮೋದಿ? ಎಂದು ಕುಲಕರ್ಣಿ ಪ್ರಶ್ನಿಸಿದರು.

ಬಿಜೆಪಿಯವರು ಚುನಾವಣೆ ಬಳಿಕ ಸರ್ಕಾರ ಬೀಳುವ ಅಪೇಕ್ಷೆ ಇಟ್ಟುಕೊಂಡಿರಬಹುದು. ಆದರೆ ಆ ರೀತಿ ಆಗುವ ವ್ಯವಸ್ಥೆ ಇಲ್ಲ. ಕಳೆದ ಸಲ ನಡೆದಂಗೆ ಈಗ ನಡೆಯಲ್ಲ ಎಂದು ವಿನಯ್​ ಕುಲಕರ್ಣಿ ಟಾಂಗ್​ ನೀಡಿದರು.

ಇದನ್ನೂ ಓದಿ: 'ಕೇಂದ್ರ ಸರ್ಕಾರ ಬರ ಪರಿಹಾರ ನೀಡಲ್ಲ ಎಂದು ಹೇಳಿಲ್ಲ': ಬಿ. ವೈ. ವಿಜಯೇಂದ್ರ - B Y Vijayendra

ETV Bharat Logo

Copyright © 2025 Ushodaya Enterprises Pvt. Ltd., All Rights Reserved.