ಧಾರವಾಡ: ಬಸ್ ಚಾಲನೆ ಮಾಡುವಾಗ ಕೈಯಲ್ಲಿ ಛತ್ರಿ ಹಿಡಿದು ಚಾಲನೆ ಮಾಡಿದ್ದ ಚಾಲಕ ಮತ್ತು ಬಸ್ನಲ್ಲಿದ್ದ ನಿರ್ವಾಹಕಿಯನ್ನು ಅಮಾನತುಗೊಳಿಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂ)ಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ ಆದೇಶ ಹೊರಡಿಸಿದ್ದಾರೆ.
ಚಾಲಕ ಹನುಮಂತಪ್ಪ ಕಿಲ್ಲೇದಾರ, ನಿರ್ವಾಹಕಿ ಅನಿತಾ ಹೆಚ್.ಬಿ. ಅಮಾನತುಗೊಂಡ ಸಾರಿಗೆ ಸಂಸ್ಥೆಯ ಸಿಬ್ಬಂದಿ. ಬಸ್ ಚಾಲನೆ ಮಾಡುವಾಗ ಮಳೆ ಸುರಿಯುವಾಗ ಛತ್ರಿ ಹಿಡಿದು ವಿಡಿಯೋ ಮಾಡಲಾಗಿದೆ. ನಂತರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಮನೋರಂಜನೆಗಾಗಿ ಈ ರೀತಿ ಮಾಡಿದ್ದಾಗಿ ಲಿಖಿತ ರೂಪದಲ್ಲಿ ಚಾಲಕ ಪತ್ರ ಬರೆದಿದ್ದರು. ಅಧಿಕಾರಿಗಳು ತಾಂತ್ರಿಕ ವಿಭಾಗದವರಿಂದ ವಾಹನ ಪರಿಶೀಲನೆ ನಡೆಸಿದ್ದರು. ಬಸ್‌ನಲ್ಲಿ ಎಲ್ಲಿಯೂ ಸೋರಿಕೆಯಾಗುತ್ತಿರಲಿಲ್ಲ ಎಂದು ಖಚಿತಗೊಂಡ ಹಿನ್ನೆಲೆ ಚಾಲಕ ಮತ್ತು ನಿರ್ವಾಹಕಿಯನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಬಸ್ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಿಂದ ಧಾರವಾಡಕ್ಕೆ ಬರುತ್ತಿತ್ತು.
ಇದನ್ನೂ ಓದಿ: ಅನಧಿಕೃತವಾಗಿ ಐಎಎಸ್ ಅಧಿಕಾರಿಯ ಸಿಡಿಆರ್ ಪಡೆದ ಆರೋಪ; ಮಾಜಿ ಐಪಿಎಸ್ ಅಧಿಕಾರಿ, ಇನ್ಸ್‌ಪೆಕ್ಟರ್ ವಿರುದ್ಧ ಎಫ್ಐಆರ್ - CDR Case