ETV Bharat / state

ಅಶ್ಲೀಲ ವಿಡಿಯೋ ಪ್ರಕರಣ ಸಿಬಿಐಗೆ ವಹಿಸಿದರೆ ಸತ್ಯಾಸತ್ಯತೆ ಹೊರ ಬರಲಿದೆ: ನಿಖಿಲ್ ಕುಮಾರಸ್ವಾಮಿ - Prajwal Revanna video case

ಮಂಡ್ಯದಲ್ಲಿ ಕುಮಾರಣ್ಣನ ಗೆಲುವು ನಿಶ್ಚಿತ. ಮತ್ತೆ ಐದು ವರ್ಷ ನರೇಂದ್ರ ಮೋದಿ ಸರ್ಕಾರ ರಚನೆಯಾಗುತ್ತೆ. ರಾಜ್ಯದ 28 ಕ್ಷೇತ್ರದಲ್ಲಿ NDA ಅಭ್ಯರ್ಥಿಗಳ ಗೆಲುವು ಖಚಿತ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Nikhil Kumaraswamy spoke.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. (Etv Bharat)
author img

By ETV Bharat Karnataka Team

Published : May 10, 2024, 10:59 PM IST

ಮಂಡ್ಯ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣವನ್ನು ಎಸ್​​ಐಟಿ ತನಿಖೆ ಬಿಟ್ಟು ಸಿಬಿಐಗೆ ನೀಡಬೇಕು. ಆಗ ಸತ್ಯಾಸತ್ಯತೆ ಹೊರ ಬರಲಿದೆ ನಿಜಕ್ಕೂ ತಪ್ಪು ಮಾಡಿದವರು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಲಂಕಷವಾಗಿ ತನಿಖೆ ನಡೆಸಬೇಕು. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಅನುಭವಿಸಲೇಬೇಕು. ಸರ್ಕಾರ ಈಗಾಗಲೇ ಎಲ್ಲೋ ಒಂದು ಕಡೆ ಎಡವಿದೆ. ಹೆಣ್ಣು ಮಕ್ಕಳ ಮುಖವನ್ನು ಬ್ಲರ್ ಮಾಡದೇ ವಿಡಿಯೋ ಹರಿಬಿಟ್ಟಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕಿತ್ತು. ಈಗ ಸಂತ್ರಸ್ಥ ಮಹಿಳೆಯರಿಗೆ ಪೊಲೀಸರಿಂದ ತೊಂದರೆಯಾಗುತ್ತಿದೆ. ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಲ್ಲಿ ಸೂಕ್ತ ತನಿಖೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪೆನ್ ಡ್ರೈವ್ ಹಂಚಿಕೆ ಹೆಚ್​ಡಿಕೆ ಕೈವಾಡ ಇದೆ ಎಂಬ ಸಚಿವ ಚಲುವರಾಯಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿಯುತವಾದ ಮಂತ್ರಿಯಾಗಿ ಚಲುವಣ್ಣ ಕೆಲಸ ಮಾಡ್ತಿದ್ದಾರೆ. ಈ ರೀತಿ ಅಪಪ್ರಚಾರ, ಆರೋಪ ಮಾಡ್ಕೊಂಡು ಹೋಗುವುದು ಸೂಕ್ತ ಅಲ್ಲ. ಎಸ್​ಐಟಿ ಮೇಲೆ ನಂಬಿಕೆ ಇಲ್ಲ ಅಂದ್ರೆ ಸಿಬಿಐಗೆ ಕೊಡಿ ಕೂಲಂಕಷವಾಗಿ ತನಿಖೆಯಾಗುತ್ತೆ. ಎಸ್​​ಐಟಿಯು ಸಂತ್ರಸ್ತರಿಗೆ ಒತ್ತಡ ಹಾಕುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜ್ವಲ್ ರೇವಣ್ಣ ನನ್ನ ಸಂಪರ್ಕದಲ್ಲಿ ಇಲ್ಲ. ಸಂತ್ರಸ್ತರಿಗೆ ರಾಜ್ಯ ಸರ್ಕಾರ ರಕ್ಷಣೆ ಕೊಡಲಿ. ಸಿಬಿಐಗೆ ವಹಿಸಿದರೆ ಕೂಲಂಕಷವಾಗಿ ತನಿಖೆಯಾಗಿ ಸತ್ಯಸತ್ಯತೆ ಹೊರಗೆ ಬರುತ್ತೆ. ಮುಜುಗರಕ್ಕೆ ಕಾರಣ ಯಾರು? ಪೆನ್ ಡ್ರೈವ್ ಹಂಚಿದ್ದು ಯಾರು? ಹೆಣ್ಣುಮಕ್ಕಳ ಚಿತ್ರ ಯಾಕೆ ತೋರಿಸಿದ್ರಿ, ಈ ಬಗ್ಗೆಯೂ ತನಿಖೆಯಾಗಲಿ ಎಂದರು.

ಇನ್ನು ಮಂಡ್ಯದಲ್ಲಿ ಕುಮಾರಣ್ಣನ ಗೆಲುವು ನಿಶ್ಚಿತ. ಮತ್ತೆ ಐದು ವರ್ಷ ನರೇಂದ್ರ ಮೋದಿ ಸರ್ಕಾರ ರಚನೆಯಾಗುತ್ತೆ.
ನರೇಂದ್ರ ಮೋದಿ ದೇಶದ ರಕ್ಷಣೆಗೆ ಮಾಡಿರುವ ತ್ಯಾಗ. ರಾಜ್ಯದ 28 ಕ್ಷೇತ್ರದಲ್ಲಿ NDA ಅಭ್ಯರ್ಥಿಗಳ ಗೆಲುವು ನಿಶ್ಚಿತ. ನರೇಂದ್ರ ಮೋದಿ ಜೊತೆ ಮಾಜಿ ಪ್ರಧಾನಿ ದೇವೇಗೌಡರು ಬೆಂಬಲಕ್ಕೆ ನಿಂತಿದ್ದಾರೆ. ಮಂಡ್ಯ ಅಖಾಡದಲ್ಲಿ ಕುಮಾರಣ್ಣ ಮೊದಲ ಬಾರಿ ಸ್ಪರ್ಧೆ. ಬಿಜೆಪಿ ಕಾರ್ಯಕರ್ತರು ಸಹ ಶ್ರಮಿಸಿದ್ದಾರೆ. ದೊಡ್ಡ ಅಂತರದಲ್ಲಿ ಕುಮಾರಣ್ಣ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂಓದಿ:ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಎಫ್ಐಆರ್ ದಾಖಲು: ಮೂಲಗಳ ಮಾಹಿತಿ - MP Prajwal Revanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.