ETV Bharat / state

ಮಂಗನಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಬಲಿ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ - ಶಿರಸಿ

ಉತ್ತರ ಕನ್ನಡ ಜಿಲ್ಲೆಯಲ್ಲಿ 47 ಜನರಲ್ಲಿ ಕೆಎಫ್ ಡಿ ಸೋಂಕು ಈ ವರೆಗೆ ಪತ್ತೆ. ಅದರಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಹೆಚ್ಚಾದ ಮಂಗನ ಕಾಯಿಲೆ ಸೋಂಕು ಪ್ರಕರಣ. ಶಿರಸಿಯಲ್ಲಿ ಇದೇ ಮೊದಲ ಬಾರಿಗೆ ಮಂಗನ ಕಾಯಿಲೆಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ.

Monkey Disease Awareness by Health Department
ಆರೋಗ್ಯ ಇಲಾಖೆಯಿಂದ ಮಂಗನ ಕಾಯಿಲೆ ಜಾಗೃತಿ
author img

By ETV Bharat Karnataka Team

Published : Mar 3, 2024, 3:34 PM IST

ಶಿರಸಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಸೋಂಕು ಹೆಚ್ಚಳ ಆಗುತ್ತಿದೆ. ಭಾನುವಾರ ಶಿರಸಿ ತಾಲೂಕಿನ ಹತ್ತರಗಿ ನವಿಲಗಾರದಲ್ಲಿ ವೃದ್ಧನನ್ನು ಬಲಿಪಡೆದಿದ್ದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ.

ಶಿರಸಿ ತಾಲೂಕಿನ ಹತ್ತರಗಿ ಸಮೀಪದ ನವಿಲಗಾರ ಗ್ರಾಮದ ರಾಮಚಂದ್ರ ಗೌಡ (68) ಸಾವಿಗೀಡಾದ ವೃದ್ಧ. ಅವರು ಕೆಲವು ದಿನಗಳಿಂದ ಉಡುಪಿಯ ಮಣಿಪಾಲ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇಂದು ಅಸುನೀಗಿದ್ದಾರೆ‌. ಇದಲ್ಲದೇ ಸಿದ್ದಾಪುರ ಭಾಗದಲ್ಲಿ ಈ ಹಿಂದೆ ಇಬ್ಬರು ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 47 ಜನರಲ್ಲಿ ಕೆಎಫ್ ಡಿ ಸೋಂಕು ಪತ್ತೆಯಾಗಿದೆ. ಅದರಲ್ಲಿ ಸಿದ್ದಾಪುರದಲ್ಲಿ ಅತಿ ಹೆಚ್ಚು ಮಂಗನ ಕಾಯಿಲೆ ಸೋಂಕಿನ ಪ್ರಕರಣ ವರದಿಯಾಗುತ್ತಿದೆ. ಶಿರಸಿಯಲ್ಲಿ ಇದೇ ಮೊದಲ ಬಾರಿಗೆ ಪ್ರಕರಣ ಪತ್ತೆಯಾಗಿದೆ. ಔಷಧಿ ಇಲ್ಲದ ಪರಿಣಾಮ ಕಾಯಿಲೆ ಪ್ರಮಾಣ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ವೈದ್ಯರ ಹಾಗೂ ಸಹಾಯಕರ ತಂಡ ಸ್ಥಳಗಳಿಗೆ ಭೇಟಿ ನೀಡಿ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಮಂಗನ ಕಾಯಿಲೆ ಸೋಂಕು ಹೇಗಿರುತ್ತದೆ ?: ಸೋಂಕಿತ ಮಂಗನ ರಕ್ತ ಹೀರುವ ಉಣ್ಣೆಗಳು ಈ ವೈರಸ್​ ಅನ್ನು ಮನುಷ್ಯರಿಗೆ ತಗುಲಿಸಿದಾಗ ಮೂರು-ನಾಲ್ಕು ದಿನಗಳ ನಂತರ ಇದ್ದಕ್ಕಿದ್ದಂತೆ ಜ್ವರ, ದೃಷ್ಟಿದೋಷ, ತಲೆನೋವು, ಮಾನಸಿಕ ಅಸಮತೋಲನ, ಮೈ ಕೈ ನೋವು, ವಾಂತಿ, ಅತಿಸಾರ ಮತ್ತು ಪ್ಲೆಟ್ಲೇಟ್ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ. ಅಲ್ಲದೆ, ಒಸಡಿನಲ್ಲಿನ ರಕ್ತಸ್ರಾವ ಹೀಗೆ ಆರಂಭಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈವರೆಗೆ ಇದಕ್ಕೆ ನಿಖರ ಔಷಧಿ ಇಲ್ಲ. ಆದರೆ ಜಿಲ್ಲೆಯಲ್ಲಿ ಸದ್ಯ ಕಾಡಿನೊಂದಿಗೆ ಸಂಪರ್ಕ ಹೊಂದಿರುವ ಕೆಲ ಭಾಗದಲ್ಲಿ ಮತ್ತು ಮಂಗನ‌ ಕಾಯಿಲೆ ಕಾಣಿಸಿಕೊಂಡ ಪ್ರದೇಶದಲ್ಲಿ ತೈಲವನ್ನು ನೀಡಲಾಗುತ್ತಿದೆ.

ಮುನ್ನೆಚ್ಚರಿಕಾ ಕ್ರಮಗಳೇನು?: ಕಾಡು ಅಥವಾ ಇಂತಹ ಉಣ್ಣೆಗಳಿರುವ ಪ್ರದೇಶಕ್ಕೆ ಪ್ರವೇಶಿಸುವಾಗ ರಕ್ಷಣಾತ್ಮಕ ಬಟ್ಟೆಗಳನ್ನು ಅಥವಾ ಇಪಿಎ ಅನುಮೋದಿತ ನಿವಾರಕ ಬಳಕೆ ಸೂಕ್ತ. ಲಸಿಕೆ ಕೂಡ ಲಭ್ಯವಿದೆ. ಬೂಸ್ಟರ್​ ಡೋಸ್​ ಪಡೆಯಬಹುದು. ಸೋಂಕಿಗೆ ತುತ್ತಾದ ಒಂದೆರಡು ವಾರದಲ್ಲಿ ಚೇತರಿಕೆ ಕಾಣಬಹುದು. ಆದಾಗ್ಯೂ ಕೆಲವರಲ್ಲಿ ಮೂರು ವಾರಕ್ಕೂ ಹೆಚ್ಚು ಕಾಲ ಜ್ವರ, ಬ್ರೈನ್​ ಫಾಗಿಂಗ್‌ನಂತಹ ನರ ಸಮಸ್ಯೆ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಹೀಗಾಗಿ ವೈದ್ಯರು ಸೋಂಕಿನ ಲಕ್ಷಣ ಆಧರಿಸಿ ಚಿಕಿತ್ಸೆ ನೀಡುತ್ತಾರೆ. ಹೈಡ್ರೇಟ್​ ಆಗಿರುವ ಜೊತೆಗೆ ಇತರೆ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಮೂಲಕ ಹೆಮರಾಜಿಕ್ ರಕ್ತಸ್ರಾವವನ್ನು ನಿಯಂತ್ರಿಸಬಹುದು.

ಇದನ್ನೂಓದಿ: ಚಿಕ್ಕಮಗಳೂರು: ಮಂಗನ ಕಾಯಿಲೆಗೆ ಮಹಿಳೆ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.