ETV Bharat / state

ಸಿದ್ದಾಪುರದಲ್ಲಿ ಮಂಗನ ಕಾಯಿಲೆಗೆ ಒಂದೇ ದಿನ ಇಬ್ಬರ ಸಾವು: ಜಿಲ್ಲೆಯಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗೆಕೊಪ್ಪ ಗ್ರಾಮದ 80 ವರ್ಷದ ವೃದ್ಧ ಮಂಗನ ಕಾಯಿಲೆಯಿಂದ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಇನ್ನು ಇಂದು ಬೆಳಗ್ಗೆ ಕಲ್ಲೂರಿನ 68 ವರ್ಷದ ವ್ಯಕ್ತಿ ಕೂಡಾ ಇದೇ ಖಾಯಿಲೆಯಿಂದ ಸಾವಿಗೀಡಾಗಿದ್ದಾರೆ.

Kyasanur Forest Disease (KFD)
ಮಂಗನ ಕಾಯಿಲೆ
author img

By ETV Bharat Karnataka Team

Published : Mar 4, 2024, 10:28 PM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವೇಗವಾಗಿ ಹರಡುತ್ತಿದೆ. ಮಂಗನಕಾಯಿಲೆಗೆ ಸೋಮವಾರ ಒಂದೇ ದಿನ ಇಬ್ಬರು ಬಲಿಯಾಗಿದ್ದು,ಸಾವಿನ ಸಂಖ್ಯೆ 5ಕ್ಕೆ ಏರಿದೆ. ಮಂಗನ ಕಾಯಿಲೆ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದ್ದು, ಸಿದ್ದಾಪುರ ತಾಲೂಕು ಮಂಗನ ಕಾಯಿಲೆಯ ಹಾಟ್ ಸ್ಪಾಟ್ ಆಗಿದೆ.‌

ಒಂದೇ ದಿನ ಇಬ್ಬರು ಬಲಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹೆಗ್ಗೆಕೊಪ್ಪ ಹೆಗ್ಗೆಕೊಪ್ಪದ 80 ವರ್ಷದ ವೃದ್ಧ ಮಂಗನ ಕಾಯಿಲೆಯಿಂದ ಸೋಮವಾರ ಸಂಜೆ ಮೃತಪಟ್ಟರೆ, ಇಂದು ಬೆಳಗ್ಗೆ ಕಲ್ಲೂರಿನ 68 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಇದರಿಂದ ಸಿದ್ದಾಪುರ ತಾಲೂಕಿನಲ್ಲಿ ಇಲ್ಲಿಯವರೆಗೆ ಮಂಗನ ಕಾಯಿಲೆಗೆ 5 ಜನ ಬಲಿಯಾಗಿದ್ದಾರೆ. ಇಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಪರಿಣಾಮ ಸಾವನ್ನಪ್ಪಿದ್ದು, ಕ್ರಮೇಣ ಸಾವಿನ ಸಂಖ್ಯೆಯಲ್ಲೂ ಕೂಡ ಏರಿಕೆಯಾಗಿದೆ.

ಮಂಗನ ಕಾಯಿಲೆ ಸೋಂಕು ಹೇಗಿರುತ್ತದೆ ?: ಸೋಂಕಿತ ಮಂಗನ ರಕ್ತ ಹೀರುವ ಉಣ್ಣೆಗಳು ಈ ವೈರಸ್​ ಅನ್ನು ಮನುಷ್ಯರಿಗೆ ತಗುಲಿಸಿದಾಗ ಮೂರು - ನಾಲ್ಕು ದಿನಗಳ ನಂತರ ಇದ್ದಕ್ಕಿದ್ದಂತೆ ಜ್ವರ, ದೃಷ್ಟಿದೋಷ, ತಲೆನೋವು, ಮಾನಸಿಕ ಅಸಮತೋಲನ, ಮೈ ಕೈ ನೋವು, ವಾಂತಿ, ಅತಿಸಾರ ಮತ್ತು ಪ್ಲೆಟ್ಲೇಟ್ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ. ಅಲ್ಲದೇ ಒಸಡಿನಲ್ಲಿ ರಕ್ತಸ್ರಾವ ಆಗುತ್ತದೆ. ಹೀಗೆ ಆರಂಭಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈವರೆಗೆ ಈ ರೋಗಕ್ಕೆ ನಿಖರ ಔಷದ ಕಂಡು ಹಿಡಿಯಲಾಗಿಲ್ಲ. ಆದರೆ, ಜಿಲ್ಲೆಯಲ್ಲಿ ಸದ್ಯ ಕಾಡಿನೊಂದಿಗೆ ಸಂಪರ್ಕ ಹೊಂದಿರುವ ಕೆಲ ಭಾಗದಲ್ಲಿ ಮತ್ತು ಮಂಗನ‌ ಕಾಯಿಲೆ ಕಾಣಿಸಿಕೊಂಡ ಪ್ರದೇಶದಲ್ಲಿ ತೈಲವನ್ನು ನೀಡಲಾಗುತ್ತಿದೆ.

ಮುನ್ನೆಚ್ಚರಿಕಾ ಕ್ರಮಗಳೇನು?: ಕಾಡು ಅಥವಾ ಇಂತಹ ಉಣ್ಣೆಗಳಿರುವ ಪ್ರದೇಶಕ್ಕೆ ಪ್ರವೇಶಿಸುವಾಗ ರಕ್ಷಣಾತ್ಮಕ ಬಟ್ಟೆಗಳನ್ನು ಅಥವಾ ಇಪಿಎ ಅನುಮೋದಿತ ನಿವಾರಕ ಬಳಕೆ ಮಾಡುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ. ಪ್ರಸ್ತುತ ಇದಕ್ಕೆ ಲಸಿಕೆ ಕೂಡ ಲಭ್ಯವಿದೆ. ಬೂಸ್ಟರ್​ ಡೋಸ್​ ಪಡೆಯಬಹುದು. ಸೋಂಕಿಗೆ ತುತ್ತಾದ ಒಂದೆರಡು ವಾರದಲ್ಲಿ ಚೇತರಿಕೆ ಕಾಣಬಹುದು. ಆದಾಗ್ಯೂ ಕೆಲವರಲ್ಲಿ ಮೂರು ವಾರಕ್ಕೂ ಹೆಚ್ಚು ಕಾಲ ಜ್ವರ, ಬ್ರೈನ್​ ಫಾಗಿಂಗ್‌ನಂತಹ ನರ ಸಮಸ್ಯೆ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಹೀಗಾಗಿ ವೈದ್ಯರು ಸೋಂಕಿನ ಲಕ್ಷಣ ಆಧರಿಸಿ ಚಿಕಿತ್ಸೆ ನೀಡುತ್ತಾರೆ. ಹೈಡ್ರೇಟ್​ ಆಗಿರುವ ಜೊತೆಗೆ ಇತರ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಮೂಲಕ ಹೆಮರಾಜಿಕ್ ರಕ್ತಸ್ರಾವವನ್ನು ನಿಯಂತ್ರಿಸಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ :ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ: ಡಿಹೆಚ್​ಒ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.