ETV Bharat / state

ಮಂಡ್ಯದಲ್ಲಿ ನಿಲ್ಲದ ದ್ವೇಷ ರಾಜಕಾರಣ: ಶಾಸಕ ರವಿಕುಮಾರ್ ಗಣಿಗ ಫ್ಲೆಕ್ಸ್​ ಹರಿದ ಕಿಡಿಗೇಡಿಗಳು - Ravikumar Ganiga flex torn

author img

By ETV Bharat Karnataka Team

Published : Sep 7, 2024, 5:47 PM IST

Updated : Sep 7, 2024, 7:12 PM IST

ಕಾಂಗ್ರೆಸ್​ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯ ಇನ್​ಸ್ಪೆಕ್ಟರ್​ ಶಿವಪ್ರಸಾದ್​ ರಾವ್​ ಹಾಗೂ ತಂಡ ಸ್ಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Miscreants torn MLA Ravikumar Ganiga flex
ಶಾಸಕ ರವಿಕುಮಾರ್ ಗಣಿಗ ಫ್ಲೆಕ್ಸ್​ ಹರಿದ ಕಿಡಿಗೇಡಿಗಳು (ETV Bharat)

ಮಂಡ್ಯ: ಗೌರಿ ಗಣೇಶ ಹಬ್ಬಕ್ಕೆ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಅವರು ಶುಭಾಶಯ ಕೋರಿದ್ದ ಫ್ಲೆಕ್ಸ್​ಗಳನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮದಲ್ಲಿ ಜರುಗಿದೆ.

ಈ ಕುರಿತು ಕಾಂಗ್ರೆಸ್ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಮೈಸೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಘಟನೆ ನಡೆದ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್​​ಪೆಕ್ಟರ್​ ಶಿವಪ್ರಸಾದ್ ರಾವ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಈ ಕುರಿತು ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಶಿವಕುಮಾರ್, "ಗ್ರಾಮದಲ್ಲಿ ಐಪಿಎಲ್ ದಂಧೆ ನಿಯಂತ್ರಿಸಲು ಶ್ರಮಿಸುತ್ತಿರುವ ಶಾಸಕರ ವಿರುದ್ಧ ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ಧಾರೆ. ಫ್ಲೆಕ್ಸ್​ಗಳಿಗೆ ಬ್ಲೇಡ್ ಹಾಗೂ ಕಲ್ಲಿನಿಂದ ಜಜ್ಜಿ ಹರಿಯಲಾಗಿದೆ. ಮೂರು ದೊಡ್ಡ ಫ್ಲೆಕ್ಸ್​ಗಳನ್ನು ಹರಿದು ಹಾಕಿ, 7ಕ್ಕೂ ಹೆಚ್ಚು ಸಣ್ಣ ಫ್ಲೆಕ್ಸ್​ಗಳನ್ನು ದುಷ್ಕರ್ಮಿಗಳು ಕಿತ್ತೊಯ್ದಿದ್ದಾರೆ" ಎಂದು ಅಕ್ರೋಶ ವ್ಯಕ್ಯಪಡಿಸಿದರು.

ಘಟನೆ ಕುರಿತಂತೆ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಎರಡನೇ ಸಲ ಸಿಎಂ ಆಗಿರುವುದಕ್ಕೆ ಅವರಿಗೆ ಹೊಟ್ಟೆ ಉರಿ, ನಾನು ದ್ವೇಷ ರಾಜಕಾರಣ ಮಾಡಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah

Last Updated : Sep 7, 2024, 7:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.