ಹುಬ್ಬಳ್ಳಿ : ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕಾಗಿ ದೇಶವನ್ನು ಒಡೆಯೋದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಬಸವ ಜಯಂತಿ ಹಿನ್ನೆಲೆ ಕೇಶ್ವಾಪುರದಲ್ಲಿನ ಬಸವೇಶ್ವರ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಮ್ ಪಿತ್ರೋಡಾ ಹೇಳಿಕೆ ದೇಶ ಒಂದೇ ಇರಲಿಲ್ಲ ಅನ್ನೋದು ಅವರ ಮಾತಿನ ಅರ್ಥ. ಕಾಂಗ್ರೆಸ್ ಪಕ್ಷ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದೇಶವನ್ನು ಒಂದು ಮಾಡೋ ವಿಚಾರದಲ್ಲಿ ಇಲ್ಲ ಎಂದರು.
ದೇಶ ಒಡೆಯೋ ವಿಚಾರ ಕಾಂಗ್ರೆಸ್ನವರಿಗೆ ಇದೆ. ನಾವು ಬಂದ ಮೇಲೆ ದೇಶ ಒಂದಾಯ್ತು ಅಂತಾರೆ. ಇನ್ನು ಡಿ ಕೆ ಸುರೇಶ್, ದಕ್ಷಿಣ ಭಾರತ ಬೇರೆ ರಾಷ್ಟ್ರ ಆಗಬೇಕು ಅಂತಾರೆ. ಶ್ಯಾಮ್ ಪಿತ್ರೋಡಾ ಜನರ ಚರ್ಮದ ಬಣ್ಣದ ಆಧಾರದ ಮೇಲೆ ದೇಶ ಒಡೆಯೋ ಹುನ್ನಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇರದೇ ಹೋದರೆ ದೇಶ ಒಡೆಯೋಕು ಹಿಂದೆ ಮುಂದೆ ನೋಡಲ್ಲ ಅನ್ನೋದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಹರಿಹಾಯ್ದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂಪೂರ್ಣ ಗೊಂದಲ ಇದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಶಿಕ್ಷೆ ಆಗಬೇಕು. ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆದರೆ ಸರ್ಕಾರ ಈ ಬಗ್ಗೆ ಸಮರ್ಪಕ ಉತ್ತರ ಕೊಡಲಿಲ್ಲ. 21ಕ್ಕೆ ವಿಡಿಯೋ ಬಂದಿವೆ. ಕೇವಲ ಹಾಸನ ಅಲ್ಲ, ಹುಬ್ಬಳ್ಳಿಗೂ ಬಂದಿವೆ. ಸರ್ಕಾರ ಏಕೆ ಎಫ್ಐಆರ್ ಮಾಡಲಿಲ್ಲ. ಏಕೆ ವಿದೇಶಕ್ಕೆ ಹೋಗದಂತೆ ತಡೆಯಲಿಲ್ಲ. ಈ ಪ್ರಶ್ನೆಗೆ ಇನ್ನೂ ಉತ್ತರ ಬಂದಿಲ್ಲ ಎಂದರು.
ರೇವಣ್ಣ ಅವರ ವಿಷಯದಲ್ಲಿ ಸಂಶಯಕ್ಕೆ ಎಡೆಮಾಡಿಕೊಡುವಂತೆ ಸರ್ಕಾರದ ವರ್ತನೆ ಇದೆ. ಕಿಡ್ನ್ಯಾಪ್ ಪ್ರಕರಣಕ್ಕೆ ಸರಿಯಾದ ದಾಖಲೆಗಳಿಲ್ಲ. ಹೀಗಾಗಿ ಇದನ್ನು ಸಿಬಿಐಗೆ ಕೊಡಬೇಕು. ಇಲ್ಲದೇ ಹೋದ್ರೆ ಡಿ. ಕೆ ಶಿವಕುಮಾರ್ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು. ಡಿ. ಕೆ ಶಿವಕುಮಾರ್ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ಎಸ್ಐಟಿ ತನಿಖೆ ಸಮರ್ಪಕವಾಗಿಲ್ಲ. ಆದರೆ ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಮಹಿಳಾ ಕುಲಕ್ಕೆ ಅಪಮಾನ ಎಂದರು.
ಕುಮಾರಸ್ವಾಮಿ ಅವರು ಡಿ. ಕೆ ಶಿವಕುಮಾರ್ ಕುರಿತು ಪುಂಖಾನುಪುಂಖವಾಗಿ ಮಾತಾಡಿದ್ದಾರೆ. ಸರ್ಕಾರ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಲಿ. ಎಲ್ಲವೂ ತನಿಖೆ ಆಗಲಿ ಎಂದರು.
ನಮ್ಮ ಕಾಲದಲ್ಲಿ ಯಾವ ದೊಡ್ಡ ಪ್ರಕರಣ ಆಗಿಲ್ಲ. ಕಾಂಗ್ರೆಸ್ನವರು ಜಗತ್ತಿನ ಅತೀ ದೊಡ್ಡ ಲೈಂಗಿಕ ಹಗರಣ ಅಂತೀರಿ. ಹಾಗಾದರೆ ಏಕೆ ಸಿಬಿಐಗೆ ಕೊಡಲಿಲ್ಲ? ಕೆಲವರನ್ನು ರಾಜಕೀಯದಿಂದ ಮುಗಿಸಲು ಈ ಪ್ರಕರಣ ಬಳಸಿಕೊಳುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಸರ್ಕಾರಕ್ಕೆ ಇದು ಗೊತ್ತಿತ್ತು. ಕೆಲವರನ್ನು ಹಣಿಯಲು ಈ ಪ್ರಕರಣ ಉಪಯೋಗ ಮಾಡಿಕೊಳುತ್ತಿದ್ದಾರೆ ಎಂದರು.
ಮೈತ್ರಿ ಬಗ್ಗೆ ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ : ಲೋಕಸಭಾ ಚುನಾವಣೆಯ ಅವಲೋಕನ ಸಭೆಯನ್ನ ನಾಳೆ ಕರೆಯಲಾಗಿದೆ. ಸಭೆಯ ಬಳಿಕ ಬಿಜೆಪಿ - ಜೆಡಿಎಸ್ ಮೈತ್ರಿ ಬಗ್ಗೆ ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅವರು ಹೇಳಿದರು.
ನಗರದಲ್ಲಿಂದು ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಚುನಾವಣೆಯಲ್ಲಿ ಯಾವುದೇ ರೀತಿ ನೆಗೆಟಿವ್ ಅಂತ ಏನೂ ಆಗಿಲ್ಲ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡಿದ್ದೇವೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕೇಸ್ ವಿಚಾರ ಈ ಕೇಸ್ ಬಗ್ಗೆ ನಾವು ನಮ್ಮ ನಿಲುವು ಹೇಳಿದ್ದೇವೆ ಎಂದರು.
ಯಾರೇ ಇದರಲ್ಲಿ ಭಾಗಿಯಾಗಲಿ, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಅಷ್ಟೇ ಅಲ್ಲ, ಪೆನ್ ಡ್ರೈವ್ ಹಂಚಿಕೆ ಹೇಗೆ ಆಯ್ತು?. ಯಾರು ಮಾಡಿದ್ದು? ಅವರ ಮೇಲೆ ಕೂಡ ತನಿಖೆ ನಡೆಯಬೇಕು. ಪ್ರೆನ್ಡ್ರೈವ್ ಕೇಸ್ನಲ್ಲಿ ಹಿನ್ನೆಲೆ ಗಾಯಕರು ಯಾರು?. ಪ್ರೆಡ್ಯೂಸರ್ ಯಾರು?. ಡೈರೆಕ್ಟರ್ ಯಾರು? ಅನ್ನೋದು ಜನರಿಗೆ ಗೊತ್ತಾಗಬೇಕಾಗಿದೆ. ರಾಜ್ಯ ಸರ್ಕಾರಕ್ಕೆ ಸಿಬಿಐಗೆ ಕೊಡುವಂತೆ ಒತ್ತಾಯ ಮಾಡುತ್ತೇನೆ. ಸಿಬಿಐಗೆ ಕೊಟ್ರೆ ಇದರ ಹಿಂದೆ ಯಾರು ಇದ್ದಾರೆ ಅನ್ನೋದು ಗೊತ್ತಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಚುನಾವಣೆ ಬಳಿಕ ರಿಲ್ಯಾಕ್ಸ್ ಮೂಡ್ನಲ್ಲಿ ಜೋಶಿ : ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲ ಕಳೆದ ಕೇಂದ್ರ ಸಚಿವ - PRALHAD JOSHI